ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್‌ನಲ್ಲಿ ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಕ್ಕೆ ಕೊಕ್ಕೆ? ಬಿಸಿಸಿಐ ಯೋಚನೆ!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ವೇಳೆ ಆಟಗಾರರು ತಮ್ಮ ಕುಟುಂಬಸ್ಥರು ಅಥವಾ ಪ್ರೇಯಸಿಯರೊಂದಿಗೆ ಪ್ರಯಾಣ ಮಾಡುವುದು ಈಗ ಟ್ರೆಂಡ್‌ ಆಗಿಬಿಟ್ಟಿದೆ. ಆದರೆ, ಗರ್ಲ್‌ಫ್ರೆಂಡ್‌ ಜೊತೆಗೆ ಪ್ರಯಾಣ ಮಾಡುವುದು ಅಪಾಯಕಾರಿ. ಮತ್ತೊಮ್ಮೆ ಬೆಟ್ಟಿಂಗ್‌ ಅಥವಾ ಫಿಕ್ಸಿಂಗ್‌ ಕಳಂಕ ಎದುರಾಗಬಹುದು ಎಂದು ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.

ಪ್ರೇಯಸಿಯೊಂದಿಗೆ ಹಾರ್ದಿಕ್ ಪಾಂಡ್ಯ

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರ ಜೊತೆ ಗರ್ಲ್‌ಫ್ರೆಂಡ್ಸ್‌ ಪ್ರಯಾಣಿಸುವ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಐಪಿಎಲ್‌ 2026 ವೇಳೆ ಹಲವಾರು ಆಟಗಾರರು ತಮ್ಮ ಸಂಗಾತಿಯರೊಂದಿಗೆ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ. ಕೆಲವರು ತಂಡದ ಬಸ್‌ಗಳಲ್ಲಿ ಸಂಚರಿಸುವುದು ಮತ್ತು ಆಟಗಾರರು ಉಳಿಯುವ ಅದೇ ಹೋಟೆಲ್‌ಗಳಲ್ಲಿ ತಂಗಿರುವುದೂ ಕಂಡುಬಂದಿದೆ.

ಈ ವಿಚಾರದ ಬಗ್ಗೆ 'ದೈನಿಕ್ ಜಾಗರಣ್' ವರದಿ ಬೆಳಕು ಚೆಲ್ಲಿದ್ದು, ಬಿಸಿಸಿಐ ವಲಯದಲ್ಲಿ ಆತಂಕ ಮೂಡಿಸಿದೆ. ಇನ್ನಷ್ಟು ಚಿಂತಾಜನಕ ವಿಷಯವೆಂದರೆ, ಈ ಸಂಗಾತಿಯರಲ್ಲಿ ಕೆಲವರು ದೊಡ್ಡ ಮಟ್ಟದ ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್‌ಗಳಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿರುವ ಆರೋಪಗಳಿವೆ.

IPL 2026: ಸಂಕಷ್ಟದಲ್ಲಿ ಅರ್ಧಶತಕ ಬಾರಿಸಿ ಪಂಜಾಬ್‌ಗೆ ನೆರವಾದ ಸೂರ್ಯಾಂಶ್ ಶೆಡ್ಗೆ ಯಾರು?

ಈ ಕ್ರಮವು ಭವಿಷ್ಯದಲ್ಲಿ ಯಾವುದೇ ದೊಡ್ಡ ವಿವಾದ ತಪ್ಪಿಸಲು ಮುನ್ನೆಚ್ಚರಿಕೆಯಾಗಿ ತೆಗೆದುಕೊಳ್ಳಲಾಗುತ್ತಿದೆ. 2013ರಲ್ಲಿ ನಡೆದ ಸ್ಪಾಟ್‌ ಫಿಕ್ಸಿಂಗ್‌ ಹಗರಣ ಐಪಿಎಲ್‌ಗೆ ದೊಡ್ಡ ಆಘಾತ ನೀಡಿತ್ತು. ಇದರ ಪರಿಣಾಮವಾಗಿ ಚೆನ್ನೈ ಸೂಪರ್ ಕಿಂಗ್ಸ್‌ (CSK) ಮತ್ತು ರಾಜಸ್ಥಾನ್ ರಾಯಲ್ಸ್‌ (RR) ತಂಡಗಳಿಗೆ 2016 ಮತ್ತು 2017ರಲ್ಲಿ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು.

ಕಠಿಣ ನಿಯಮಗಳತ್ತ ಬಿಸಿಸಿಐ ಆಲೋಚನೆ

ಬಿಸಿಸಿಐನ ಒಬ್ಬ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿ, "ಈ ವಿಷಯವನ್ನು ತಕ್ಷಣ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ಕೆಲ ಸಂದರ್ಭಗಳಲ್ಲಿ ಆಟಗಾರರ ಗರ್ಲ್‌ಫ್ರೆಂಡ್ಸ್‌ಗಾಗಿ ತಂಡದ ಬಸ್‌ ಕಾಯಬೇಕಾದ ಘಟನೆಗಳೂ ನಡೆದಿವೆ. ಅವರು ತಂಡದ ಹೋಟೆಲ್‌ಗಳಲ್ಲಿ ತಂಗಿದ್ದ ಉದಾಹರಣೆಗಳಿವೆ," ಎಂದು ಹೇಳಿದ್ದಾರೆ.

ಇನ್ನಷ್ಟು ಹೇಳಿದ ಅವರು, ಕೆಲವು ಆಟಗಾರರು ಆಂಟಿ-ಕರಪ್ಷನ್‌ ವಿಭಾಗದ ನಿಯಮಗಳನ್ನು ತಪ್ಪಿಸಲು ತಮ್ಮ ಪರಿಚಿತ ವ್ಯಕ್ತಿಗಳನ್ನು ಅಧಿಕೃತ ಸಂಗಾತಿಗಳಂತೆ ತೋರಿಸುತ್ತಿರುವುದಾಗಿ ತಿಳಿಸಿದ್ದಾರೆ. "ಬೋರ್ಡ್‌ ನೀತಿಯಲ್ಲಿ ಗರ್ಲ್‌ಫ್ರೆಂಡ್ಸ್‌ ಬಗ್ಗೆ ಯಾವುದೇ ಸ್ಪಷ್ಟ ನಿಯಮಗಳಿಲ್ಲ. ಮಾರ್ಗಸೂಚಿಗಳ ಪ್ರಕಾರ ಪತ್ನಿ ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ಅನುಮತಿ ಇದೆ. ಶೀಘ್ರದಲ್ಲೇ ಈ ವಿಷಯದ ಬಗ್ಗೆ ತನಿಖೆ ನಡೆಯಲಿದೆ," ಎಂದರು.

IPL 2026: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್‌ ಕೊಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌!

ಸಂಕಷ್ಟದಲ್ಲಿರುವ ತಂಡಗಳ ನಡುವೆ ಭರ್ಜರಿ ಪಂದ್ಯ

ಹಿಂದಿನ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಸೋಮವಾರ ರಾತ್ರಿ ಲಖನೌ ಸೂಪರ್ ಜಯಂಟ್ಸ್‌ (LSG) ತಂಡವನ್ನು ಎದುರಿಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಮುಂಬೈ ಒಂಬತ್ತನೇ ಸ್ಥಾನದಲ್ಲಿದ್ದು, ಲಖ್ನೌ ಕೊನೆಯ ಸ್ಥಾನದಲ್ಲಿದೆ.

ಪಾಂಡ್ಯ ತಂಡವು ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಪ್ಲೇ-ಆಫ್‌ ಪ್ರವೇಶದ ನಿರೀಕ್ಷೆಗಳು ಬಹುತೇಕ ಅಂತ್ಯಗೊಂಡಿವೆ. ಚೆನ್ನೈ ವಿರುದ್ಧದ ಸೋಲಿನೊಂದಿಗೆ ಅವರ ಅರ್ಹತಾ ಆಶೆಗಳು ಕುಸಿದಿವೆ. ರಿಷಭ್ ಪಂತ್‌ ತಂಡವೂ ಬಹುತೇಕ ಹೊರಬಿದ್ದಿದ್ದರೂ, ಸೋಮವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿನ ಲೆಕ್ಕಾಚಾರಗಳ ಮೂಲಕ ಇನ್ನೂ ಕೊಂಚ ಅವಕಾಶ ಉಳಿಯಲಿದೆ.