ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸಂಕಷ್ಟದಲ್ಲಿ ಅರ್ಧಶತಕ ಬಾರಿಸಿ ಪಂಜಾಬ್‌ಗೆ ನೆರವಾದ ಸೂರ್ಯಾಂಶ್ ಶೆಡ್ಗೆ ಯಾರು?

Who is Suryansh Shedge?; ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಕೇವಲ 30 ಲಕ್ಷ ರೂ.ಗಳಿಗೆ ಖರೀದಿಸಲಾದ ಶೆಡ್ಗೆ, ದೇಶೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಮುಂಬೈ ಆಟಗಾರರಾಗಿರುವ ಅವರು, ಸುಂಟರಗಾಳಿ ನಾಕ್‌ಗಳನ್ನು ಆಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

ಅರ್ಧಶತಕ ಬಾರಿಸಿ ಪಂಜಾಬ್‌ಗೆ ನೆರವಾದ ಸೂರ್ಯಾಂಶ್ ಶೆಡ್ಗೆ ಯಾರು?

Suryansh Shedge -

Abhilash BC
Abhilash BC May 3, 2026 10:13 PM

ಅಹಮದಾಬಾದ್‌, ಮೇ 3: ಗುಜರಾತ್‌ ಟೈಟಾನ್ಸ್‌ ವಿರುದ್ಧ ಸಂಕಷ್ಟದ ಸಮಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡಕ್ಕೆ ನೆರವಾದ ಯುವ ಬ್ಯಾಟ್ಸ್‌ಮನ್ ಸೂರ್ಯಾಂಶ್ ಶೆಡ್ಗೆ(Suryansh Shedge) ಕೇವಲ 29 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2026)ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದರು. ಪಂಜಾಬ್ ತಂಡ ಕೇವಲ 36 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಾಗ, ಶೆಡ್ಗೆ ಉತ್ತಮ ಹೋರಾಟ ನೀಡಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು.

ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಕೇವಲ 30 ಲಕ್ಷ ರೂ.ಗಳಿಗೆ ಖರೀದಿಸಲಾದ ಶೆಡ್ಗೆ, ದೇಶೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಮುಂಬೈ ಆಟಗಾರರಾಗಿರುವ ಅವರು, ಸುಂಟರಗಾಳಿ ನಾಕ್‌ಗಳನ್ನು ಆಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. 2024 ರಲ್ಲಿ, ಬಲಗೈ ಬೌಲರ್ ಕೇವಲ 15 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್‌ನಲ್ಲಿ ಮುಂಬೈ ತಂಡವು 175 ರನ್‌ಗಳನ್ನು ಬೆನ್ನಟ್ಟಲು ಸಹಾಯ ಮಾಡಿದರು.

ತಮ್ಮ ನಿರ್ಭೀತ ಹೊಡೆತ ಮತ್ತು ತಕ್ಷಣ ವೇಗವನ್ನು ಹೆಚ್ಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಬಲಗೈ ಬ್ಯಾಟ್ಸ್‌ಮನ್, ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಪರಿಣಿತರಾಗಿ ಬ್ಯಾಟ್‌ ಬೀಸುವ ಖ್ಯಾತಿಯನ್ನು ಗಳಿಸಿದ್ದಾರೆ. ಐಪಿಎಲ್‌ಗೆ ಮುಂಚಿನ ದೇಶೀಯ ಟಿ20 ಋತುವಿನಲ್ಲಿ, ಶೆಡ್ಗೆ ಒಂಬತ್ತು ಪಂದ್ಯಗಳನ್ನು ಆಡಿದರು. 250 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 131 ರನ್‌ಗಳನ್ನು ಗಳಿಸಿದರು.

SRH vs KKR: ಐಪಿಎಲ್‌ನಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿದ ನರೈನ್;‌ ಈ ಸಾಧನೆಗೈದ ಮೊದಲ ವಿದೇಶಿಗ

ದೇಶಿಯ ಟೂರ್ನಿಯಲ್ಲಿ ಮುಂಬೈ ತಂಡದ ಪರ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತದ ಕೆಲವು ಉನ್ನತ ಆಟಗಾರರೊಂದಿಗೆ ಆಡಿದ ಅನುಭವ ಹೊಂದಿದ್ದಾರೆ. ಮಾತ್ರವಲ್ಲದೆ ಅವರು ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಬೆನ್ ಸ್ಟೋಕ್ಸ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಭಿಮಾನಿಯೂ ಹೌದು.

ಮುಂಬೈನ ಮಧ್ಯಮ ವರ್ಗದ ಕುಟುಂಬದಿಂದ ಬಂದ ಶೆಡ್ಗೆ ಅವರ ಪ್ರಯಾಣವು ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಅವರ ತಾಯಿ, ಮಗನ ಕ್ರಿಕೆಟ್ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ತಮ್ಮ ಕೆಲಸವನ್ನೇ ತ್ಯಜಿಸಿದ್ದರು. ತಾಯಿಯ ಈ ತ್ಯಾಗಕ್ಕೆ ಪ್ರತಿಫಲವಾಗಿ ಶೆಡ್ಗೆ ಹಂತ ಹಂತವಾಗಿ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸಿದ್ದಾರೆ. ಮುಂದೆ ಭಾರತೀಯ ತಂಡದಲ್ಲಿಯೂ ಸ್ಥಾನ ಪಡೆಯಲಿ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.