IPL 2026: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್!
CSK vs MI Match Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಎದುರಾಳಿ ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆದು ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸಿಎಸ್‌ಕೆ ಪರ ತಲಾ ಅರ್ಧಶತಕ ಬಾರಿಸಿದ ಗಾಯಕ್ವಾಡ್, ಕಾರ್ತಿಕ್. -
ಚೆನ್ನೈ: ಅನ್ಷುಲ್ ಕಾಂಬೋಜ್ ಮಾರಕ ಬೌಲಿಂಗ್ ಹಾಗೂ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಹಾಗೂ ಕಾರ್ತಿಕ್ ಶರ್ಮಾ ಅರ್ಧಶತಕಗಳ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ IPL 2026) ಟೂರ್ನಿಯ 44ನೇ ಪಂದ್ಯದಲ್ಲಿ (MI vs CSK) ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಗೆಲುವು ದಾಖಲಿಸಿತು. ತನ್ನ ನಾಲ್ಕನೇ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 8 ಅಂಕಗಳನ್ನು ಕಲೆ ಹಾಕಿರುವ ಸಿಎಸ್‌ಕೆ, ಆರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಏಳನೇ ಸೋಲು ಅನುಭವಿಸಿದ ಐದು ಬಾರಿ ಚಾಂಪಿಯನ್ಸ್ ಮುಂಬೈ ತಂಡಕ್ಕೆ ನಾಕೌಟ್ ಹಾದಿ ಅತ್ಯಂತ ಕಠಿಣವಾಗಿದೆ.
ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ನೀಡಿದ್ದ 160 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಹಿಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಋತುರಾಜ್ ಗಾಯಕ್ವಾಡ್ ಹಾಗೂ ಕಾರ್ತಿಕ್ ಶರ್ಮಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ 18.1 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ಸಿಎಸ್‌ಕೆ ತಂಡದ ಯಶಸ್ವಿ ಚೇಸಿಂಗ್‌ಗೆ ನೆರವು ನೀಡಿದ ನಾಯಕ ಋತುರಾಜ್ ಗಾಯಕ್ವಾಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 48 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 67 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
DC vs RR: ವೈಭವ್ ಸೂರ್ಯವಂಶಿಯನ್ನು ಎದುರಿಸುವಾಗ ಭಯಪಟ್ಟಿದ್ದೆ ಎಂದ ಕೈಲ್ ಜೇಮಿಸನ್!
ಗಾಯಕ್ವಾಡ್-ಕಾರ್ತಿಕ್ ಅದ್ಭುತ ಜೊತೆಯಾಟ
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (11 ರನ್) ಬೇಗ ಔಟ್ ಆದರು. ಆದರೆ, ಊರ್ವಿಲ್ ಪಟೇಲ್ 24 ರನ್ ಗಳಿಸುವ ಜೊತೆಗೆ ನಾಯಕ ಗಾಯಕ್ವಾಡ್ ಜೊತೆಗೆ 49 ರನ್‌ಗಳ ಜೊತೆಯಾಟನ್ನು ಆಡಿದರು. ಆದರೆ, ಅವರು ಘಝಂಫರ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ವಿಕೆಟ್‌ಗೆ ಕಾರ್ತಿಕ್ ಶರ್ಮಾ ಹಾಗೂ ಗಾಯಕ್ವಾಡ್ 98 ರನ್‌ಗಳ ಗೆಲುವಿನ ಜೊತೆಯಾಟವನ್ನು ಆಡಿದರು. ನಾಯಕ ಗಾಯಕ್ವಾಡ್‌ಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಕಾರ್ತಿಕ್ ಶರ್ಮಾ 40 ಎಸೆತಗಳಲ್ಲಿ ಅಜೇಯ 54 ರನ್‌ಗಳನ್ನು ಗಳಿಸಿ ತಮ್ಮ ತಂಡದ ಗೆಲುವಿಗೆ ನೆರವು ನೀಡಿದರು. ಇವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಮೂಡಿ ಬಂದವು. ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು.
Simply beautiful batting! 🤌
— IndianPremierLeague (@IPL) May 2, 2026
🎥 Ruturaj Gaikwad and Kartik Sharma making it look effortless during their brilliant partnership 🤝
Updates ▶️ https://t.co/VVAjldiiC0#TATAIPL | #KhelBindaas | #CSKvMI | @ChennaiIPL pic.twitter.com/uE5xhwvuZe
159 ರನ್‌ಗಳನ್ನು ಕಲೆ ಹಾಕಿದ ಮುಂಬೈ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ರಯಾನ್ ರಿಕೆಲ್ಟನ್ ಹಾಗೂ ನಮನ್ ಧಿರ್ ಅವರ ಬ್ಯಾಟಿಂಗ್ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕೆ 159 ರನ್‌ಗಳನ್ನು ಕಲೆ ಹಾಕಿತ್ತು. ಮುಂಬೈ ಪರ 37 ಎಸೆತಗಳಲ್ಲಿ 57 ರನ್ ಗಳಿಸಿದ ನಮನ್ ಧಿರ್ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
Continuing his good form in yellow 💛
— IndianPremierLeague (@IPL) May 2, 2026
2️⃣2️⃣nd #TATAIPL Fifty for Ruturaj Gaikwad 👏#CSK need 38 runs from 36 deliveries in the chase
Updates ▶️ https://t.co/VVAjldiiC0#KhelBindaas | #CSKvMI | @ChennaiIPL | @Ruutu1331 pic.twitter.com/wlQlA6IvKt
ನಮನ್-ರಿಕೆಲ್ಟನ್ ಜುಗಲ್‌ಬಂದಿ
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಯಾನ್ ರಿಕೆಲ್ಟನ್ ಅವರ ಜೊತೆ ಇನಿಂಗ್ಸ್ ಆರಂಭಿಸಿದ ವಿಲ್ ಜ್ಯಾಕ್ಸ್ ಅವರನ್ನು ಅನ್ಷುಲ್ ಕಾಂಬೋಜ್ ಅವರು ಎರಡನೇ ಓವರ್‌ನಲ್ಲಿಯೇ ಔಟ್ ಮಾಡಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ರಯಾನ್ ರಿಕೆಲ್ಟನ್ ಹಾಗೂ ನಮನ್ ಧಿರ್ 32 ಎಸೆತಗಳಲ್ಲಿ 58 ರನ್‌ಗಳನ್ನು ಗಳಿಸಿದರು. ಆ ಮೂಲಕ ಪವರ್‌ಪ್ಲೇನಲ್ಲಿ ಮುಂಬೈಗೆ 57 ರನ್‌ಗಳನ್ನು ತಂದುಕೊಟ್ಟರು.
Impressive and Effective ✨
— IndianPremierLeague (@IPL) May 2, 2026
Maiden #TATAIPL Fifty for Kartik Sharma 👏👏
A crucial knock as he guides #CSK over the line 🫡
Updates ▶️ https://t.co/VVAjldiiC0#KhelBindaas | #CSKvMI | @ChennaiIPL pic.twitter.com/PDoawOdf9F
ಸೂರ್ಯಕುಮಾರ್ ಮತ್ತೆ ವಿಫಲ
ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ರಿಕೆಲ್ಟನ್ 24 ಎಸೆತಗಳಲ್ಲಿ ಬರೋಬ್ಬರಿ 5 ಸಿಕ್ಸರ್ ಮೂಲಕ 37 ರನ್‌ಗಳನ್ನು ಚಚ್ಚಿ ಉತ್ತಮ ಆರಂಭ ಪಡೆದಿದ್ದರು. ಆದರೆ, 7ನೇ ಓವರ್‌ನಲ್ಲಿ ನೂರ್ ಅಹ್ಮದ್ ಸ್ಪಿನ್ ರಣತಂತ್ರಕ್ಕೆ ರಿಕೆಲ್ಟನ್ ತಮ್ಮ ವಿಕೆಟ್ ಅನ್ನು ಕೈ ಚೆಲ್ಲಿದರು. ನಂತರ ಜೊತೆಯಾದ ನಮನ್ ಧಿರ್ ಹಾಗೂ ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ 40 ರನ್‌ಗಳ ಜೊತೆಯಾಟವನ್ನು ಆಡಿದರು. 12 ಎಸೆತಗಳಲ್ಲಿ 27 ರನ್ ಸಿಡಿಸಿ ಉತ್ತಮ ಆರಂಭ ಪಡೆದಿದ್ದ ಸೂರ್ಯಕುಮಾರ್ ಯಾದವ್, ವೇಗಿ ರಾಮಕೃಷ್ಣ ಘೋಷ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಡೆವಾಲ್ಡ್ ಬ್ರೆವಿಸ್‌ಗೆ ಕ್ಯಾಚ್ ಕೊಟ್ಟರು.
Innings Break!
— IndianPremierLeague (@IPL) May 2, 2026
A disciplined bowling effort from @ChennaiIPL 💛
Will they make it ✌️ in ✌️ this season against #MI? 🤔
Scorecard ▶️ https://t.co/VVAjldiiC0#TATAIPL | #KhelBindaas | #CSKvMI pic.twitter.com/1AZaHIQn2B
ನಮನ್ ಧಿರ್ ಫಿಫ್ಟಿ
ಆರಂಭಿಕ 10 ಓವರ್‌ಗಳಲ್ಲಿ ಮುಂಬೈ ತಂಡ ಹಚ್ಚೂ ಕಮ್ಮಿ 10ರ ಸರಾಸರಿಯಲ್ಲಿ ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದ ಬಳಿಕ ತಂಡದ ರನ್ ಗಳಿಸುವ ವೇಗಕ್ಕೆ ಸಿಎಸ್‌ಕೆ ಬೌಲರ್‌ಗಳು ಕಡಿವಾಣ ಹಾಕಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡುತ್ತಿದ್ದ ನಮನ್ ಧಿರ್ 37 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 57 ರನ್ ಸಿಡಿಸಿದರು. ಆ ಮೂಲಕ ಮುಂಬೈ ಮೊತ್ತ 150ರ ಸನಿಹ ತಲುಪಲು ನೆರವು ನೀಡಿದರು. 12ನೇ ಓವರ್‌ನಿಂದ 20ನೇ ಓವರ್‌ವರೆಗೂ ಮುಂಬೈ ಬ್ಯಾಟ್ಸ್‌ಮನ್‌ಗಳು ರನ್ ವೇಗವನ್ನು ಹೆಚ್ಚಿಸುವಲ್ಲಿ ವಿಫಲರಾದರು.
Unfazed by the pressure 😇
— IndianPremierLeague (@IPL) May 2, 2026
Naman Dhir anchored the #MI innings with a crucial FIFTY 👌
His 3️⃣rd in #TATAIPL 👏
Updates ▶️ https://t.co/VVAjldiiC0#KhelBindaas | #CSKvMI | @mipaltan pic.twitter.com/YV658XxjGr
ಅನ್ಷುಲ್ ಕಾಂಬೋಜ್‌ಗೆ 3 ವಿಕೆಟ್
ತಿಲಕ್ ವರ್ಮಾ (5), ಹಾರ್ದಿಕ್ ಪಾಂಡ್ಯ (18) ಹಾಗೂ ರಾಬಿನ್ ಮಿನ್ಜ್ (5) ಅವರು ವಿಫಲರಾದರು. ಹಾಗಾಗಿ ಡೆತ್ ಓವರ್‌ಗಳಲ್ಲಿ ಮುಂಬೈಗೆ ರನ್ ಬರಲಿಲ್ಲ. ಇದರ ಶ್ರೇಯ ಸಿಎಸ್‌ಕೆ ಬೌಲರ್‌ಗಳಿಗೆ ಸಲ್ಲಬೇಕು. ಅನ್ಷುಲ್ ಕಾಂಬೋಜ್ 3 ವಿಕೆಟ್ ಹಾಗೂ ನೂರ್ ಅಹ್ಮದ್ ಎರಡು ವಿಕೆಟ್ ಕಿತ್ತರೆ, ರಾಮಕೃಷ್ಣ ಘೋಷ್ ಹಾಗೂ ಜೇಮಿ ಓವರ್ಟನ್ ತಲಾ ಒಂದೊಂದು ವಿಕೆಟ್ ಕಿತ್ತರು.