IND vs WI: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿರುವ ಭುವನೇಶ್ವರ್ ಕುಮಾರ್!
ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ವೇಗಿ ಅರ್ಷದೀಪ್ ಸಿಂಗ್ ಐದನೇ ಪಂದ್ಯದಿಂದ ಹೊರ ನಡೆದಿದ್ದಾರೆ. ಹಾಗಾಗಿ ಐದನೇ ಹಾಗೂ ಕೊನೆಯ ಪಂದ್ಯದ ಭಾರತ ತಂಡಕ್ಕೆ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಆ ಮೂಲಕ ನಾಲ್ಕು ವರ್ಷಗಳ ಬಳಿಕ ಭುವಿ ಭಾರತ ತಂಡಕ್ಕೆ ಮರಳಿದ್ದಾರೆ.
ಭಾರತ ತಂಡಕ್ಕೆ ಮರಳಿದ ಭುವನೇಶ್ವರ್ ಕುಮಾರ್. -
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar), ವೆಸ್ಟ್ ಇಂಡೀಸ್ ವಿರುದ್ಧ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (IND vs WI) ಕಣಕ್ಕೆ ಇಳಿಯಬಹುದು. ನಾಲ್ಕನೇ ಟಿ20ಐ ಪ೦ದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಅರ್ಷದೀಪ್ ಸಿಂಗ್ (Arshdeep Singh) ಐದನೇ ಪಂದ್ಯದಿಂದ ಹೊರ ನಡೆದಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ಐದನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕಣಕ್ಕೆ ಇಳಿಯಲಿದ್ದಾರೆ. ಹಾಗಾಗಿ ಅಕ್ಟೋಬರ್ 17 ರಂದು ಆರ್ಸಿಬಿಯ ತವರು ಅಂಗಣ ಎಂ ಚಿನ್ನಸ್ವಾಮಿಯಲ್ಲಿ ಭುವನೇಶ್ವರ್ ಕುಮಾರ್ ಆಡುವ ಸಾಧ್ಯತೆ ಇದೆ.
ಶನಿವಾರ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಭುವನೇಶ್ವರ್ ಕುಮಾರ್ಗೆ ಅವಕಾಶ ಸಿಕ್ಕರೆ, ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತಂಡದ ಪರ ಆಡಿದಂತಾಗುತ್ತದೆ. 2022ರ ನವೆಂಬರ್ನಲ್ಲಿ ಕೊನೆಯ ಬಾರಿ ಅವರು ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಆಡಿದ್ದರು. ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿಯೂ ಭುವನೇಶ್ವರ್ ಕುಮಾರ್ಗೆ ಸ್ಥಾನವನ್ನು ನೀಡಲಾಗಿದೆ.
ವೆಸ್ಟ್ ಇಂಡೀಸ್ ಎದುರು 4ನೇ ಪಂದ್ಯದಲ್ಲಿ ಭಾರತದ ಸೋಲಿಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ಸಂಜು ಸ್ಯಾಮ್ಸನ್!
ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ತೋರಿದ ಫಲವಾಗಿ ಭುವನೇಶ್ವರ್ ಕುಮಾರ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಿದೆ. ಆರ್ಸಿಬಿ ತಂಡ 2025ರಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಲು ಭುವನೇಶ್ವರ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ನಂತರ 2026ರ ಐಪಿಎಲ್ ಟೂರ್ನಿಯಲ್ಲಿಯೂ ಭುವಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಎರಡೂ ಆವೃತ್ತಿಗಳಿಂದ 40 ಕ್ಕೂ ಹೆಚ್ಚಿನ ವಿಕೆಟ್ಗಳನ್ನು ಕಬಳಿಸಿದ್ದರು.
🚨 News 🚨 Arshdeep Singh sustains blow to bowling shoulder; Bhuvneshwar Kumar added to #TeamIndia’s squad for the Bengaluru T20I. More Details ▶️ https://t.co/i18NeqDLrU #INDvWI | @mflone_
— BCCI (@BCCI) October 16, 2026
ಪ್ರಸ್ತುತ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 2-2 ಅಂತರದಲ್ಲಿ ಸಮಬಲವನ್ನು ಕಾಯ್ದುಕೊಂಡಿವೆ. ಈ ನಾಲ್ಕೂ ಪಂದ್ಯಗಳು ಕೂಡ ಹೈಸ್ಕೋರಿಂಗ್ ಆಗಿವೆ. ಭಾರತ ತಂಡದ ಬೌಲರ್ಗಳು ವಿಂಡೀಸ್ ಬ್ಯಾಟರ್ಗಳ ಎದುರು ದುಬಾರಿಯಾಗಿದ್ದಾರೆ. ಇದೀಗ ಟಿ20ಐ ಸರಣಿಯನ್ನು ಗೆಲ್ಲಬೇಕೆಂದರೆ ಶನಿವಾರ ಬೆಂಗಳೂರಿನಲ್ಲಿ ನಡೆಯುವ ಐದನೇ ಹಾಗೂ ಕೊನೆಯ ಪಂದ್ಯವನ್ನು ಗೆಲ್ಲಬೇಕಾಗಿದೆ.
ಐದನೇ ಪಂದ್ಯದಲ್ಲಿ ವಿಂಡೀಸ್ ಬ್ಯಾಟರ್ಗಳನ್ನು, ವಿಶೇಷವಾಗಿ ಶೇಯ್ ಹೋಪ್ ಅವರನ್ನು ಕಟ್ಟಿಹಾಕಲು ಭುವನೇಶ್ವರ್ ಕುಮಾರ್ ಅವರ ಅನುಭವ ನೆರವಾಗಬಹುದು. ಹಾಗಾಗಿ ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್ಮೆಂಟ್ ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ನೇರವಾಗಿ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಬಹುದು.
ನ್ಯೂಜಿಲೆಂಡ್ ಟಿ20ಐ ಸರಣಿಯ ಭಾರತ ತಂಡ
- ಶ್ರೇಯಸ್ ಅಯ್ಯರ್ (ನಾಯಕ)
- ಅಭಿಷೇಕ್ ಶರ್ಮಾ
- ವೈಭವ್ ಸೂರ್ಯವಂಶಿ
- ಇಶಾನ್ ಕಿಶನ್ (ವಿಕೆಟ್ ಕೀಪರ್)
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ತಿಲಕ್ ವರ್ಮಾ (ಉಪನಾಯಕ)
- ಶಿವಂ ದುಬೆ
- ಕುಲದೀಪ್ ಯಾದವ್
- ಅಕ್ಷರ್ ಪಟೇಲ್
- ರವಿ ಬಿಷ್ಣೋಯ್
- ನಿತೀಶ್ ಕುಮಾರ್ ರೆಡ್ಡಿ
- ಅರ್ಷದೀಪ್ ಸಿಂಗ್
- ಪ್ರಿನ್ಸ್ ಯಾದವ್
- ಮಯಾಂಕ್ ಯಾದವ್
- ನಾಮನ್ ಧೀರ್
- ಭುವನೇಶ್ವರ್ ಕುಮಾರ್