ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಗ್‌ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ತಂಡಗಳನ್ನು ಖರೀದಿಸಲು ಐಪಿಎಲ್‌ ಫ್ರಾಂಚೈಸಿಗಳಿಗೆ ಅವಕಾಶ?

ಬಿಗ್ ಬ್ಯಾಶ್ ಲೀಗ್‌ ಅನ್ನು ಖಾಸಗಿ ಮಾಲೀಕತ್ವಕ್ಕೆ ಮುಕ್ತಗೊಳಿಸುವ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಭಾರತೀಯ ಪ್ರೀಮಿಯರ್ ಲೀಗ್‌ (IPL) ಫ್ರಾಂಚೈಸಿ ಮಾಲೀಕರಿಗೆ ಮತ್ತೊಂದು ದೊಡ್ಡ ಅವಕಾಶವನ್ನು ಸೃಷ್ಟಿಸಬಹುದು. ಈಗಾಗಲೇ ಹಲವು ಐಪಿಎಲ್ ಫ್ರಾಂಚೈಸಿ ಗುಂಪುಗಳು ವಿದೇಶಗಳಲ್ಲಿನ ವಿವಿಧ ಟಿ20 ಲೀಗ್‌ಗಳಲ್ಲಿ ತಂಡಗಳನ್ನು ಹೊಂದಿವೆ.

ಬಿಗ್‌ ಬ್ಯಾಷ್‌ ಲೀಗ್‌ಗೆ ಪ್ರವೇಶಿಸುವತ್ತ ಐಪಿಎಲ್‌ ಫ್ರಾಂಚೈಸಿಗಳ ಚಿತ್ತ!

ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಖಾಸಗಿ ಮಾಲೀಕತ್ವಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ ಗ್ರೀನ್‌ ಸಿಗ್ನಲ್‌? -

Profile
Ramesh Kote Sep 8, 2026 11:28 PM

ನವದೆಹಲಿ: ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್‌ (BBL) ಇದೀಗ ಖಾಸಗಿ ಮಾಲೀಕತ್ವದ ಹೊಸ ಯುಗಕ್ಕೆ ಕಾಲಿಡಲು ಸಜ್ಜಾಗಿದೆ. ಈ ಬೆಳವಣಿಗೆಯಿಂದ ವಿಶ್ವದ ಪ್ರಮುಖ ಕ್ರಿಕೆಟ್ ಫ್ರಾಂಚೈಸಿ ಗುಂಪುಗಳಿಗೆ ಮತ್ತೊಂದು ದೊಡ್ಡ ಟಿ20 ಮಾರುಕಟ್ಟೆಯ ಬಾಗಿಲು ತೆರೆದಂತಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ (CA) ಮೆಲ್ಬೋರ್ನ್ ರೆನೆಗೇಡ್ಸ್‌ ತಂಡವನ್ನು ಮಾರಾಟ ಮಾಡಲು ಅನುಮೋದನೆ ನೀಡಿದ್ದು, ಇದೀಗ ಭಾರತೀಯ ಪ್ರೀಮಿಯರ್ ಲೀಗ್‌ (IPL) ಫ್ರಾಂಚೈಸಿಗಳು ಆಸ್ಟ್ರೇಲಿಯಾದ ಟಿ20 ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ಮುಂದಾಗುತ್ತವೆಯೇ ಎಂಬ ಕುತೂಹಲ ಮೂಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಮೆಲ್ಬೋರ್ನ್ ರೆನೆಗೇಡ್ಸ್‌ನ ಶೇ 100ರಷ್ಟು ಮಾಲೀಕತ್ವಕ್ಕಾಗಿ ಬಿಡ್‌ಗಳನ್ನು ಆಹ್ವಾನಿಸಲಿದೆ. ಹೊಸ ಮಾಲೀಕರು 2027-28ರ ಬಿಗ್ ಬ್ಯಾಶ್ ಲೀಗ್ ಮತ್ತು ವುಮೆನ್ಸ್ ಬಿಗ್ ಬ್ಯಾಶ್ ಲೀಗ್ (WBBL) ಋತುವಿನಿಂದ ತಂಡದ ನಿಯಂತ್ರಣವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಈ ಮಾರಾಟ ಪ್ರಕ್ರಿಯೆಯಿಂದ ಮುಂಬರುವ ಆಸ್ಟ್ರೇಲಿಯಾ ಕ್ರಿಕೆಟ್ ಋತುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೇ ವೇಳೆ, ಹೊಸದಾಗಿ ಅನುಮೋದಿಸಿರುವ ‘ಸೆಲ್ಫ್-ಡಿಟರ್ಮಿನೇಷನ್’ ಮಾದರಿ ಅಡಿಯಲ್ಲಿ ಇತರ BBL ತಂಡಗಳೂ ಖಾಸಗಿ ಹೂಡಿಕೆಯನ್ನು ಪರಿಗಣಿಸಲು ಅವಕಾಶ ಹೊಂದಿವೆ.

IND vs JAP ಭಾರತ ವಿರುದ್ದದ ಐತಿಹಾಸಿಕ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ ಪ್ರಕಟ!

ಈ ನಿರ್ಧಾರವು ಬಿಗ್ ಬ್ಯಾಶ್ ಲೀಗ್‌ನ ರಚನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಖಾಸಗಿ ಹೂಡಿಕೆದಾರರಿಗೆ ಇದೀಗ ತಂಡಗಳ ಮಾಲೀಕತ್ವ ಪಡೆಯಲು ಅಧಿಕೃತ ಮಾರ್ಗ ಸಿಕ್ಕಿದೆ. ಆದರೆ, ಟೂರ್ನಿಯ ಹಲವು ಪ್ರಮುಖ ಕೇಂದ್ರೀಯ ಅಂಶಗಳ ಮೇಲಿನ ನಿಯಂತ್ರಣವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮುಂದುವರಿಸಲಿದೆ. ಹೀಗಾಗಿ ಮಾಲೀಕತ್ವ ಬದಲಾದರೂ ಹೂಡಿಕೆದಾರರಿಗೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ ಎಂದರ್ಥವಲ್ಲ.

ಬಿಬಿಎಲ್‌ಗೆ ಐಪಿಎಲ್‌ ಫ್ರಾಂಚೈಸಿಗಳು ಪ್ರವೇಶ ಮಾಡಬಹುದಾ?

ಮೆಲ್ಬೋರ್ನ್ ರೆನೆಗೇಡ್ಸ್‌ಗಾಗಿ ಯಾವುದೇ ಐಪಿಎಲ್‌ ಫ್ರಾಂಚೈಸಿ ಬಿಡ್ ಮಾಡಲಿದೆ ಎಂಬ ಅಧಿಕೃತ ದೃಢೀಕರಣ ಇನ್ನೂ ಸಿಕ್ಕಿಲ್ಲ. ಆದರೆ, ಈ ಬೆಳವಣಿಗೆ ಜಾಗತಿಕ ಟಿ20 ಕ್ರಿಕೆಟ್‌ನಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಐಪಿಎಲ್‌ ಫ್ರಾಂಚೈಸಿ ಮಾಲೀಕರ ಗಮನ ಸೆಳೆಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್‌ ಮಾಲೀಕತ್ವದ ಗುಂಪು ಈಗಾಗಲೇ ಜಾಗತಿಕ ಮಟ್ಟದಲ್ಲಿ ದೊಡ್ಡ ನೆಟ್ವರ್ಕ್ ನಿರ್ಮಿಸಿದೆ. ಎಂಐ ಕೇಪ್‌ಟೌನ್‌ (SA20), ಎಂಐ ಎಮಿರೇಟ್ಸ್‌ (ILT20), ಎಂಐ ನ್ಯೂಯಾರ್ಕ್‌ (Major League Cricket) ಮತ್ತು ಎಂಐ ಲಂಡನ್‌ (The Hundred) ತಂಡಗಳನ್ನು ಮುಂಬೈ ಫ್ರಾಂಚೈಸಿ ಹೊಂದಿವೆ.

Duleep Trophy Fianl: ಕಳೆದ 4 ಪಂದ್ಯಗಳಲ್ಲಿ 3 ಶತಕ, 500 ರನ್‌ ಗಳಿಸಿರುವ ದೇವದತ್‌ ಪಡಿಕ್ಕಲ್‌!

ಇದೇ ರೀತಿ, ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ಮಾಲೀಕತ್ವದ ಗುಂಪು ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್‌, ಅಬುದಾಗಿ ನೈಟ್‌ ರೈಡರ್ಸ್‌ ಮತ್ತು ಲಾಸ್‌ ಏಂಜಲೀಸ್‌ ನೈಟ್‌ ರೈಡರ್ಸ್‌ ತಂಡಗಳನ್ನು ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್‌ (CSK) ಮಾಲೀಕತ್ವದ ಗುಂಪು ಜೋಬರ್ಗ್‌ ಸೂಪರ್‌ ಕಿಂಗ್ಸ್‌ ಮತ್ತು ಟೆಕ್ಸಾಸ್‌ ಸೂಪರ್‌ ಕಿಂಗ್ಸ್ ತಂಡಗಳನ್ನು ಹೊಂದಿದ್ದರೆ, ರಾಜಸ್ಥಾನ ರಾಯಲ್ಸ್‌ ಗುಂಪು ಪಾರ್ಲ್‌ ರಾಯಲ್ಸ್‌ ಮತ್ತು ಬಾರ್ಬಡೋಸ್‌ ರಾಯಲ್ಸ್‌ ತಂಡಗಳನ್ನು ಹೊಂದಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ಮಾಲೀಕತ್ವದ ಗುಂಪು ಸನ್‌ರೈಸರ್ಸ್‌ ಈಸ್ಟರ್ನ್‌ ಕೇಪ್‌ ಮತ್ತು ಸನ್‌ರೈಸರ್ಸ್‌ ಲೀಗ್‌ ತಂಡಗಳನ್ನು ನಿರ್ವಹಿಸುತ್ತಿದೆ. ಮತ್ತೊಂದೆಡೆ, ಲಖನೌ ಸೂಪರ್‌ ಜಯಂಟ್ಸ್‌ ಮಾಲೀಕತ್ವದ ಗುಂಪು ಡರ್ಬನ್ಸ್‌ ಸೂಪರ್‌ ಜಯಂಟ್ಸ್‌ ಮತ್ತು ಮ್ಯಾಂಚೆಸ್ಟರ್‌ ಸೂಪರ್‌ ಜಯಂಟ್ಸ್‌ ತಂಡಗಳನ್ನು ಹೊಂದಿದೆ.

ಇಂಡಿಯನ್‌ ನ್ಯಾಷನಲ್‌ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅರ್ಷಿ ಗುಪ್ತಾಗೆ ಡಬಲ್‌ ಧಮಾಕ!

Delhi Capitals ಮಾಲೀಕತ್ವದ ಗುಂಪು ಕೂಡ ವಿದೇಶಿ ಟಿ20 ಕ್ರಿಕೆಟ್‌ನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, Pretoria Capitals, Dubai Capitals, Seattle Orcas ಮತ್ತು Southern Brave ತಂಡಗಳೊಂದಿಗೆ ಸಂಪರ್ಕ ಹೊಂದಿದೆ.

ಹೀಗಾಗಿ, ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಈ ಫ್ರಾಂಚೈಸಿ ಗುಂಪುಗಳ ಬೆಳೆಯುತ್ತಿರುವ ಜಾಗತಿಕ ಟಿ20 ಪೋರ್ಟ್‌ಫೋಲಿಯೊಗೆ ಸಹಜವಾಗಿ ಸೇರ್ಪಡೆಯಾಗಬಹುದಾದ ಮತ್ತೊಂದು ದೊಡ್ಡ ಮಾರುಕಟ್ಟೆಯಾಗಿ ಕಾಣಿಸುತ್ತಿದೆ. ಮೆಲ್ಬೋರ್ನ್ ರೆನೆಗೇಡ್ಸ್‌ ಮಾರಾಟ ಪ್ರಕ್ರಿಯೆ ಆರಂಭವಾದ ಬಳಿಕ IPL ಮಾಲೀಕತ್ವದ ಗುಂಪುಗಳು ಆಸ್ಟ್ರೇಲಿಯಾದ ಟಿ20 ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತವೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.