IND vs WI: ʻ24 ವರ್ಷಗಳ ಬಳಿಕ ಸರಣಿ ಗೆಲ್ಲುತ್ತೇವೆʼ-ಭಾರತ ತಂಡಕ್ಕೆ ಡೆರೆನ್ ಸಾಮಿ ವಾರ್ನಿಂಗ್!
24 ವರ್ಷಗಳ ಬಳಿಕ ಭಾರತದ ವಿರುದ್ಧ ಅವರದೇ ನೆಲದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲ್ಲುತ್ತೇವೆಂದು ವೆಸ್ಟ್ ಇಂಡೀಸ್ ತಂಡದ ಹೆಡ್ ಕೋಚ್ ಡೆರೆನ್ ಸಾಮಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಏಕದಿನ ಸರಣಿಯ ಮೊದಲನೇ ಪಂದ್ಯ ಸೆಪ್ಟಂಬರ್ 27 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.
ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಡೆರೆನ್ ಸಾಮಿ. -
ತಿರುವನಂತಪುರಂ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ (IND vs WI) ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ ಇದೆ. ಮೊದಲನೇ ಪಂದ್ಯ ಇಲ್ಲಿನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾನಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಸರಣಿಗೂ ಮುನ್ನ ಪ್ರವಾಸಿ ತಂಡದ ಹೆಡ್ ಕೋಚ್ ಡರೆನ್ ಸಾಮಿ (Darren Sammy), ಆತಿಥೇಯ ಭಾರತ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. 24 ವರ್ಷಗಳ ಬಳಿಕ ಭಾರತದ ಎದುರು ಅವರದೇ ನೆಲದಲ್ಲಿ ಏಕದಿನ ಸರಣಿಯನ್ನು ಗೆಲ್ಲುತ್ತೇವೆಂದು ಸಾಮಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡ 2022ರಲ್ಲಿ ಕೊನೆಯ ಬಾರಿ ಭಾರತದಲ್ಲಿ ಏಕದಿನ ಸರಣಿಯನ್ನು ಗೆದ್ದಿತ್ತು. ಆಗ ವಿಂಡೀಸ್ ತಂಡವನ್ನು ಕಾರ್ಲ್ ಹೂಪರ್ ಅವರು ಮುನ್ನಡೆಸಿದ್ದರು ಹಾಗೂ ಈ ತಂಡದಲ್ಲಿ ದಿಗ್ಗಜರಾದ ಕ್ರಿಸ್ ಗೇಲ್, ರಾಮ್‌ನರೇಶ್ ಸರವಣ್ ಹಾಗೂ ಮಾರ್ಲೋನ್ ಸ್ಯಾಮ್ಯೂಲ್ಸ್ ಆಡಿದ್ದರು. ಇದೀಗ ಸಿಕ್ಕಿರುವ ಅವಕಾಶದಲ್ಲಿ ಭಾರತದಲ್ಲಿ 24 ವರ್ಷಗಳ ಬಳಿಕ ಏಕದಿನ ಸರಣಿಯನ್ನು ಗೆಲ್ಲುತ್ತೇವೆಂದು ವೆಸ್ಟ್ ಇಂಡೀಸ್ ಹೆಡ್ ಕೋಚ್ ಡೆರೆನ್ ಸಾಮಿ ಹೇಳಿದ್ದಾರೆ.
IND vs WI 1st ODI: ನಮನ್ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
"ಭಾರತದಲ್ಲಿ ಏಕದಿನ ಸರಣಿಯನ್ನು ಗೆದ್ದು ಸುಮಾರು 24 ವರ್ಷಗಳು ಮುಗಿದಿವೆ. ತಂಡವಾಗಿ ನಾವು ಇಲ್ಲಿ ಬಂದು ನಮ್ಮನ್ನು ನಾವು ಸವಾಲಿಗೆ ಒಡ್ಡಿಕೊಳ್ಳಲು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನಾವು ಯಾವ ಹಂತದಲ್ಲಿದ್ದೇವೆ ಎಂಬುದನ್ನು ಅಳೆಯಲು ಇದು ಉತ್ತಮ ಅವಕಾಶ. ನಮ್ಮಲ್ಲಿರುವ ಆಟಗಾರರು ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಹಾಗೂ ಸರಣಿಯನ್ನು ಗೆಲ್ಲಲು ಇದು ಅತ್ಯುತ್ತಮ ಅವಕಾಶವಾಗಿದೆ. ಕಳೆದ 24 ವರ್ಷಗಳಿಂದ ನಾವು ಮಾಡಲಾಗದ ಸಾಧನೆಯನ್ನು ಈಗ ಮಾಡಲು ಎದುರು ನೋಡುತ್ತಿದ್ದೇವೆ,” ಎಂದು ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ಮಾಜಿ ನಾಯಕ ಡೆರೆನ್ ಸಾಮಿ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡದಿಂದ ಉತ್ತಮ ಸುಧಾರಣೆ
ವೆಸ್ಟ್ ಇಂಡೀಸ್ ತಂಡ ಪ್ರಸ್ತುತ ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಂಡೀಸ್ ತಂಡ ಉತ್ತಮವಾಗಿ ಸುಧಾರಣೆಯನ್ನು ಕಾಣುತ್ತಿದೆ ಎಂದು ಸಾಮಿ ಹೇಳಿದ್ದಾರೆ. “ನಾವು ಹಿಂದೆ ತಿರುಗಿ ನೋಡಿದರೆ, ಏಕದಿನ ತಂಡವಾಗಿ ನಾವು ಯಾವ ಸ್ಥಿತಿಯಲ್ಲಿದ್ದೆವು ಮತ್ತು ಈಗ ಏನು ಸಾಧಿಸಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಿದಾಗ, ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.
24 ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲಲು ವೆಸ್ಟ್ ಇಂಡೀಸ್ ಕಾತರ
ಶೇಯ್ ಹೋಪ್ ಅತ್ಯಂತ ಅನುಭವಿ ಬ್ಯಾಟರ್: ಸಾಮಿ
ಪ್ರಸ್ತುತ ವೆಸ್ಟ್ ಇಂಡೀಸ್ ತಂಡದಲ್ಲಿ ಶೇಯ್ ಹೋಪ್ ಅವರು ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು 19 ಒಡಿಐ ಶತಕಗಳನ್ನು ಬಾರಿಸಿದ್ದಾರೆ. ಆದರೆ, ಸಾಮಿ ಅವರ ಪ್ರಕಾರ, ಭಾರತ ತಂಡದ ಮೇಲೆ ಪ್ರಭಾವ ಬೀರಬಲ್ಲ ಹಲವು ಆಟಗಾರರು ನಮ್ಮ ತಂಡದಲ್ಲಿದ್ದಾರೆ.
"ಶೇಯ್ ಹೋಪ್ ಮಾತ್ರ ವೆಸ್ಟ್ ಇಂಡೀಸ್ ತಂಡದಲ್ಲಿ ಶತಕಗಳನ್ನು ಸಿಡಿಸಿರುವ ಆಟಗಾರನಲ್ಲ. ಶತಕಗಳನ್ನು ಬಾರಿಸಿರುವ ಹಲವು ಆಟಗಾರರು ನಮ್ಮಲ್ಲಿ ಇದ್ದಾರೆ. ಆಮಿರ್ ಜಂಗೋ, ಶೇರ್ಫೆನ್ ಋದರ್‌ಫೋರ್ಡ್ ಇದ್ದಾರೆ. 2024-25ರ ಸಾಲಿನಲ್ಲಿ ಇದ್ದ ಫಾರ್ಮಾ ಅನ್ನು ನಾವು ಈ ಆಟಗಾರರಲ್ಲಿ ಕಾಣಬಹುದು," ಎಂದು ಡೆರೆನ್ ಸಾಮಿ ತಿಳಿಸಿದ್ದಾರೆ.