ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ ಆಡುವ ಬಗ್ಗೆ ಖಚಿತಪಡಿಸಿದ ದಿನೇಶ್ ಕಾರ್ತಿಕ್, ಶಾನ್ ಮಾರ್ಷ್‌!

ಚೊಚ್ಚಲ ಆವೃತ್ತಿಯ ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ ಟೂರ್ನಿಯು ಮುಂದಿನ ವರ್ಷ ಆರಂಭದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ದಿನೇಶ್‌ ಕಾರ್ತಿಕ್‌, ಶಾನ್‌ ಮಾರ್ಷ್‌, ವಿನಯ್‌ ಕುಮಾರ್‌ ಸೇರಿದಂತೆ ಪ್ರಮುಖ ಆಟಗಾರರು ಈ ಲೀಗ್‌ನಲ್ಲಿ ಆಡಲಿದ್ದಾರೆ. ಈ ಬಗ್ಗೆ ಸ್ವತಃ ಈ ಆಟಗಾರರೇ ಖಚಿತಪಡಿಸಿದ್ದಾರೆ.

ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ಗೆ ದಿನೇಶ್‌ ಕಾರ್ತಿಕ್‌ ಸೇರ್ಪಡೆ!

ಲೆಜೆಂಡ್ಸ್‌ ಪ್ರೊ ಟಿ20 ಲೀಗ್‌ಗೆ ದಿನೇಶ್‌ ಕಾರ್ತಿಕ್. -

Profile
Ramesh Kote Dec 2, 2025 6:00 PM

ಗೋವಾ: ಲೆಜೆಂಡ್ಸ್ ಪ್ರೊ ಟಿ20 ಲೀಗ್ (Legends Pro T20 League) ತನ್ನ ಮುಂದಿನ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಬಾರಿ ಲೀಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟಾರ್‌ ಆಟಗಾರರಾದ ದಿನೇಶ್ ಕಾರ್ತಿಕ್ (Dinesh karthik), ಶಾನ್ ಮಾರ್ಶ್, ಅಮಿತ್ ಮಿಶ್ರಾ, ವಿನಯ್ ಕುಮಾರ್ (Vinay Kumar) ಮತ್ತು ಇಂಗ್ಲೆಂಡ್‌ನ ಪ್ರಸಿದ್ಧ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಗೋವಾದಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯಲ್ಲಿ ಈ ದಿಗ್ಗಜರು ಕಾಣಿಸಿಕೊಳ್ಳಲಿದ್ದಾರೆ.

ಭಾರತದ ಪ್ರಸಿದ್ಧ ಫಿನಿಷರ್‌ಗಳಲ್ಲೊಬ್ಬರಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೆಂಟರ್‌ ದಿನೇಶ್ ಕಾರ್ತಿಕ್ 2018ರ ನಿಧಾಹಾಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ ನೆನಪಿನ ಪ್ರದರ್ಶನಕ್ಕಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. 2024ರಲ್ಲಿ ತಮ್ಮ ಟಿ20 ವೃತ್ತಿಜೀವನವನ್ನು ಮುಗಿಸಿದ ಅವರು ಮತ್ತೆ ಮೈದಾನಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ.

ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, “ಭಾರತವನ್ನು ಪ್ರತಿನಿಧಿಸಿರುವ ವರ್ಷಗಳು ನನಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಕೊಟ್ಟಿವೆ. ಮತ್ತೆ ಆಡುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ವಿಶೇಷ. ಲೆಜೆಂಡ್ಸ್ ಪ್ರೊ ಟಿ20 ಲೀಗ್ ನಮ್ಮಂತಹ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದೆ. ಗೋವಾದಂತಹ ಅದ್ಭುತ ಸ್ಥಳದಲ್ಲಿ ಮತ್ತೆ ಅಭಿಮಾನಿಗಳ ಎದುರು ಆಡುವುದಕ್ಕಾಗಿ ನಾನು ತುಂಬಾ ಉತ್ಸುಕರಾಗಿದ್ದೇನೆ," ಎಂದಿದ್ದಾರೆ.

IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್‌ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!

ಭಾರತದ ಪ್ರೀಮಿಯರ್ ಟಿ20 ಲೀಗ್‌ನ ಮೊದಲ ‘ಆರೇಂಜ್ ಕ್ಯಾಪ್’ ವಿಜೇತರಾಗಿರುವ ಶಾನ್ ಮಾರ್ಶ್ ಹಲವು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಮರಳಲಿದ್ದಾರೆ. ಅವರು ಮಾತನಾಡಿ “ಬಹಳ ವರ್ಷಗಳ ನಂತರ ಭಾರತಕ್ಕೆ ಮರಳುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್ ಮತ್ತೆ ಇಲ್ಲಿ ಆಡಲು ಅವಕಾಶ ನೀಡಿರುವುದು ವಿಶೇಷ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಅತ್ಯುತ್ತಮ ಲೆಗ್-ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅಮಿತ್ ಮಿಶ್ರಾ, ಭಾರತದ ಪ್ರಮುಖ ಟಿ20 ಟೂರ್ನಿಯಲ್ಲಿ ಮೂರು ವಿಭಿನ್ನ ತಂಡಗಳ ಪರವಾಗಿ ಮೂರು ಬಾರಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಏಕೈಕ ಬೌಲರ್. ಈ ಬಗ್ಗೆ ಮಾತನಾಡಿದ ಅವರು “25 ವರ್ಷಗಳ ವೃತ್ತಿಜೀವನದ ನಂತರ ಇದು ನನ್ನ ಕ್ರಿಕೆಟ್‌ನ ಎರಡನೇ ಇನಿಂಗ್ಸ್‌ ಎಂಬ ಭಾವನೆ ಇದೆ. ದಿಗ್ಗಜರ ಜೊತೆ ಮತ್ತೆ ಸ್ಪರ್ಧಿಸುವ ಅವಕಾಶ ದೊರೆತಿರುವುದು ಅತ್ಯಂತ ಸಂತಸ ತಂದಿದೆ," ಎಂದು ತಿಳಿಸಿದ್ದಾರೆ.

IPL 2026 auction: ಐಪಿಎಲ್ 2026ರ ಮಿನಿ ಹರಾಜಿಗೆ 1355 ಆಟಗಾರರು ಹೆಸರು ನೋಂದಣಿ

ಕರ್ನಾಟಕ ತಂಡದ ಮಾಜಿ ವೇಗದ ಬೌಲರ್‌ ವಿನಯ್ ಕುಮಾರ್ ಕೂಡ ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದು“ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನ ಭಾಗವಾಗಿರುವುದು ನನಗೆ ನಿಜವಾದ ಸಂತೋಷ,” ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನ ಅತ್ಯಂತ ಪ್ರೀತಿಸಲ್ಪಡುವ ಎಡಗೈ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಮಾಂಟಿ ಪನೇಸರ್ ಕೂಡ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, “ಭಾರತದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ. ಲೆಜೆಂಡ್ಸ್ ಪ್ರೊಇ T20 ಲೀಗ್‌ನಲ್ಲಿ ಮತ್ತೆ ಮೈದಾನಕ್ಕಿಳಿಯಲು ನಾನು ಕಾತರರಾಗಿದ್ದೇನೆ," ಎಂದು ತಿಳಿಸಿದ್ದಾರೆ.

ಲೆಜೆಂಡ್ಸ್ ಪ್ರೋ T20 ಲೀಗ್‌ನ ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದ ಹೊಸ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆರವೇರುವಂತೆ ಯೋಜಿಸಲಾಗಿದೆ.