ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ನಾಲ್ಕನೇ ಟೆಸ್ಟ್‌ ಪಂದ್ಯದ ವೇಳೆ ಬೆನ್‌ ಸ್ಟೋಕ್ಸ್‌ ವರ್ತನೆಗೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಜುಲೈ 27 ರಂದು ಮುಕ್ತಾಯವಾದ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾ ನಲ್ಲಿ ಅಂತ್ಯವಾಯಿತು. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದರೂ ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿತು. ಆ ಮೂಲಕ ಸೋಲಿನಿಂದ ಭಾರತ ತಂಡ ಪಾರಾಯಿತು. ಪಂದ್ಯದ ಬಳಿಕ ಹತಾಶರಾಗಿ ವರ್ತಿಸಿದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ವಿರುದ್ದ ಸಂಜಯ್‌ ಮಾಂಜ್ರೇಕರ್‌ ಬೇಸರ ವ್ಯಕ್ತಪಡಿಸಿದ್ದಾರೆ.

IND vs ENG: ಬೆನ್‌ ಸ್ಟೋಕ್ಸ್‌ ವರ್ತನೆಗೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

ಬೆನ್‌ ಸ್ಟೋಕ್ಸ್‌ ವಿರುದ್ಧ ಸಂಜಯ್‌ ಮಾಂಜ್ರೇಕರ್‌ ಕಿಡಿ.

Profile Ramesh Kote Jul 28, 2025 5:01 PM

ಮ್ಯಾಂಚೆಸ್ಟರ್‌: ಇಲ್ಲಿನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಜುಲೈ 27 ರಂದು ಅಂತ್ಯವಾದ ಭಾರತ ಹಾಗೂ ಇಂಗ್ಲೆಂಡ್‌ (IND vs ENG) ತಂಡಗಳ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ರೋಚಕವಾಗಿದ್ದರೂ ಡ್ರಾನಲ್ಲಿ ಕೊನೆಯಾಯಿತು. ಈ ಪಂದ್ಯದ ನಾಲ್ಕೂ ದಿನಗಳ ಕಾಲ ಭಾರತ ತಂಡ ಹಿನ್ನಡೆ ಅನುಭವಿಸಿತ್ತು ಹಾಗೂ ಕೊನೆಯ ದಿನದವರೆಗೂ ಇಂಗ್ಲೆಂಡ್‌ ತಂಡ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಭಾರತ ತಂಡ ನಾಲ್ಕನೇ ದಿನದ ಕೊನೆಯ ಸೆಷನ್‌ ಹಾಗೂ ಐದನೇ ದಿನ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿತು ಹಾಗೂ ಸೋಲಿನಿಂದ ಪಾರಾಯಿತು. ಇದರ ಶ್ರೇಯ ಶತಕಗಳನ್ನು ಬಾರಿಸಿದ ಶುಭಮನ್‌ ಗಿಲ್‌, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ಗೆ ಸಲ್ಲಬೇಕಾಗುತ್ತದೆ. ಆದರೆ, ಗೆಲುವಿನ ಸನಿಹ ಬಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದರಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಕ್ರೀಡಾ ಸ್ಪೂರ್ತಿಗೆ ವಿರುದ್ದವಾಗಿ ವರ್ತನೆ ತೋರಿದ್ದರು. ಈ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ (Sanjay Manjrekar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ಕೊನೆಯ ದಿನವಾದ ಭಾನುವಾರ ಇಂಗ್ಲೆಂಡ್‌ಗೆ ಗೆಲುವು ಪಡೆಯಲು ಎಂಟು ವಿಕೆಟ್‌ಗಳು ಅಗತ್ಯವಿತ್ತು. ಆದರೆ, ಬೆನ್‌ ಸ್ಟೋಕ್ಸ್‌ ನಾಯಕತ್ವದ ಇಂಗ್ಲೆಂಡ ಭಾನುವಾರ ಕೇವಲ ಎರಡು ವಿಕೆಟ್‌ ಮಾತ್ರ ಪಡೆಯಲು ಶಕ್ತವಾಯಿತು. ಆದರೆ, ಶತಕಗಳನ್ನು ಸಿಡಿಸಿದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಔಟ್‌ ಮಾಡಲು ಇಂಗ್ಲೆಂಡ್‌ ಬೌಲರ್‌ಗಳಿಂದ ಸಾಧ್ಯವಾಗಿಲ್ಲ. ಐದನೇ ದಿನ ಮುಗಿಯಲು ಇನ್ನೂ 4 ಓವರ್‌ಗಳು ಬಾಕಿ ಇರುವಾಗಲೇ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಪಂದ್ಯವನ್ನು ಡ್ರಾ ಎಂದು ಘೊಷಿಸಿದರು. ಕ್ರೀಸ್‌ನಲ್ಲಿದ್ದ ರವೀಂದ್ರ ಜಡೇಜಾಗೆ ಹ್ಯಾಂಡ್‌ ಶೇಕ್‌ ಮಾಡಿದರು. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನು ಬೆನ್‌ ಸ್ಟೋಕ್ಸ್‌ ಜತೆಗೆ ಹ್ಯಾರಿ ಬ್ರೂಕ್‌ ಕೂಡ ಸ್ಲೆಡ್ಜ್‌ ಮಾಡಿದರು. ಇದರ ಬೆನ್ನಲ್ಲೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರ ವರ್ತನೆಯನ್ನು ಸಂಜಯ್‌ ಮಾಂಜ್ರೇಕರ್‌ ಟೀಕಿಸಿದ್ದಾರೆ.

ENG vs IND: ಅಂತಿಮ ಟೆಸ್ಟ್‌ಗೆ ಸ್ಟಾರ್‌ ಆಲ್‌ರೌಂಡರ್‌ ಕರೆತಂದ ಇಂಗ್ಲೆಂಡ್‌

ಪಂದ್ಯದ ಬಳಿಕ ಜಿಯೊ ಸ್ಟಾರ್‌ ಸಂಭಾಷಣೆಯಲ್ಲಿ ಮಾತನಾಡಿದ ಸಂಜಯ್‌ ಮಾಂಜ್ರೇಕರ್‌, "ಪಂದ್ಯದ ಕೊನೆಯಲ್ಲಿ ಬೆನ್‌ ಸ್ಟೋಕ್ಸ್‌ ಅವರು ತೀವ್ರ ನಿರಾಶೆಯಾಗಿದ್ದರು. ಏಕೆಂದರೆ ಅವರಿಗೆ ಈ ಪಂದ್ಯದ ಫಲಿತಾಂಶ ಇಷ್ಟವಾಗಿರಲಿಲ್ಲ. ಕೊನೆಯಲ್ಲಿ ನಾನು ಹೇಳುವುದೇನೆಂದರೆ, ಅವರು ಕ್ರೀಡೆಯನ್ನು ಹಾಳು ಮಾಡಿದವರ ರೀತಿ ಅಥವಾ ತುಂಬಾ ಹಾನಿಯಾಗಿರುವ ಮಗು ರೀತಿ ಕಾಣುತ್ತಿದ್ದರು. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರು ಹಲವು ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದರು ಹಾಗೂ ಅವರು ಶತಕಗಳನ್ನು ಬಾರಿಸಿದರು. ಆ ಮೂಲಕ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದಕ್ಕೆ ಬೆನ್‌ ಸ್ಟೋಕ್ಸ್‌ ವರ್ತನೆ ಸ್ವಲ್ಪ ಅಸಮಾಧಾನದಿಂದ ಕೂಡಿತ್ತು. ಇದನ್ನು ಒಪ್ಪಲು ಸಾಧ್ಯವಿಲ್ಲ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

IND vs ENG 5th Test: 5ನೇ ಟೆಸ್ಟ್‌ನಲ್ಲೂ ವೇಗಿ ಜಸ್‌ಪ್ರೀತ್‌ ಬುಮ್ರಾ ಕಣಕ್ಕೆ

"ಭಾರತ ತಂಡ 15 ಅಥವಾ 30 ನಿಮಿಷಗಳ ಮುನ್ನ ಡ್ರಾಗೆ ಒಪ್ಪಿಕೊಂಡಿದ್ದರೆ ಅವರಿಗೆ ಭರವಸೆ ನೀಡಿದ್ದರೆ, ಬೆನ್‌ ಸ್ಟೋಕ್ಸ್‌ ಅವರೇ ಸ್ವತಃ ಸಂತೋಷದಿಂದ ಕೈ ಕುಲುಕುತ್ತಿದ್ದರು. ಆದರೆ, ನಡೆದಿಲ್ಲ. ಏಕೆಂದರೆ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರು ಶತಕಗಳ ಸನಿಹದಲ್ಲಿದ್ದರು. ಈ ಕಾರಣದಿಂದಲೇ ಭಾರತ ತಂಡ ಶತಕಗಳಿಗೂ ಮುನ್ನ ಡ್ರಾಗೆ ಒಪ್ಪಿಕೊಂಡಿರಲಿಲ್ಲ. ಈ ಕಾರಣದಿಂದಲೇ ಅವರು ತೀವ್ರ ಹತಾಶೆಯಾಗಿದ್ದರು. ಇದನ್ನು ಟೀಮ್‌ ಇಂಡಿಯಾ ಒಪ್ಪಿಕೊಂಡಿರಲಿಲ್ಲ. ಇದು ಬೆನ್‌ ಸ್ಟೋಕ್ಸ್‌ ಇಷ್ಟವಾಗಿರಲಿಲ್ಲ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 100 ರನ್‌ಗಳ ಸನಿಹದಲ್ಲಿದ್ದರು. ಈ ಕಾರಣದಿಂದಲೇ ಬೆನ್‌ ಸ್ಟೋಕ್ಸ್‌ ಅವರು ಕೊನೆಯಲ್ಲಿ ಹ್ಯಾಂಡ್‌ ಶೇಕ್‌ ಮಾಡಲು ಪೂರ್ಣ ಪ್ರಮಾಣದಲ್ಲಿ ಇಷ್ಟವಿರಲಿಲ್ಲ," ಎಂದು ಸಂಜಯ್‌ ಮಾಂಜ್ರೇಕರ್‌ ತಿಳಿಸಿದ್ದಾರೆ.