ENG vs PAK: ಟೆಸ್ಟ್ ಕ್ರಿಕೆಟ್ ಕ್ಯಾಚ್‌ಗಳ ಇತಿಹಾಸದಲ್ಲಿ ಸ್ಟೀವನ್ ಸ್ಮಿತ್ ದಾಖಲೆ ಮುರಿದ ಜೋ ರೂಟ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನೂತನ ಮೈಲುಗಲ್ಲು ತಲುಪಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ದಾಖಲೆಯನ್ನು ರೂಟ್ ಬರೆದಿದ್ದಾರೆ. ಆ ಮೂಲಕ ಅವರು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ಫೀಲ್ಡಿಂಗ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ ಜೋ ರೂಟ್. -
ನವದೆಹಲಿ: ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ (Joe Root) ಶುಕ್ರವಾರ (ಆ.21) ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ (Steven Smith) ಅವರ ದಾಖಲೆಯನ್ನು ಮುರಿದಿದ್ದಾರೆ. ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನ ಜೋ ರೂಟ್ ಅವರು ಈ ಸಾಧನೆ ಮಾಡಿದ್ದಾರೆ. ಜೋಫ್ರಾ ಆರ್ಚರ್ ಅವರ ಬೌಲಿಂಗ್‌ನಲ್ಲಿ ಅಝಾನ್ ಅವೈಸ್ ಅವರನ್ನು ಔಟ್ ಮಾಡಲು ಲೆಗ್ ಸ್ಲಿಪ್‌ನಲ್ಲಿ ಅದ್ಭುತ ಕ್ಯಾಚ್ ಪಡೆದ ರೂಟ್, ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಜೋ ರೂಟ್ ಮತ್ತು ಜೋಫ್ರಾ ಆರ್ಚರ್ ರೂಪಿಸಿದ್ದ ಉತ್ತಮ ಫೀಲ್ಡಿಂಗ್ ಯೋಜನೆಯ ಫಲವಾಗಿ ಈ ವಿಕೆಟ್ ಲಭಿಸಿತು. ಕೆಲವೇ ಎಸೆತಗಳಿಗೂ ಮುನ್ನ ರೂಟ್, ಲೆಗ್ ಸ್ಲಿಪ್ ಹಾಗೂ ಶಾರ್ಟ್ ಲೆಗ್ ಫೀಲ್ಡರ್‌ಗಳನ್ನು ನಿಯೋಜಿಸುವಂತೆ ಸಲಹೆ ನೀಡಿದ್ದರು. ಬಳಿಕ ಆರ್ಚರ್ ಎಸೆದ ಚೆಂಡು ಅವೈಸ್ ಕಡೆಗೆ ಇನ್‌ಸ್ವಿಂಗ್ ಆಯಿತು. ಚೆಂಡನ್ನು ಫೈನ್ ಲೆಗ್ ಕಡೆಗೆ ಗೈಡ್ ಮಾಡಲು ಪಾಕಿಸ್ತಾನ ಬ್ಯಾಟರ್ ಪ್ರಯತ್ನಿಸಿದರಾದರೂ, ಅದು ಇನ್‌ಸೈಡ್ ಎಡ್ಜ್ ಆಗಿ ನೇರವಾಗಿ ಲೆಗ್ ಸ್ಲಿಪ್‌ನಲ್ಲಿದ್ದ ರೂಟ್ ಕೈ ಸೇರಿತು.
ಆರ್‌ಸಿಬಿ ವೇಗಿಗೆ ಸ್ಥಾನ; 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ರಾಬಿನ್ ಉತ್ತಪ್ಪ!
ಈ ಕ್ಯಾಚ್‌ನೊಂದಿಗೆ ಜೋ ರೂಟ್ 169* ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 219 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 124 ಪಂದ್ಯಗಳಲ್ಲಿ 218 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ದಿಗ್ಗಜ ರಾಹುಲ್ ದ್ರಾವಿಡ್ 164 ಪಂದ್ಯಗಳಲ್ಲಿ 210 ಕ್ಯಾಚ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರು
219 - ಜೋ ರೂಟ್* (ಇಂಗ್ಲೆಂಡ್)
218 -ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
210 -ರಾಹುಲ್ ದ್ರಾವಿಡ್ (ಭಾರತ)
205 -ಮಹೇಲಾ ಜಯವರ್ದಣೆ (ಶ್ರೀಲಂಕಾ)
200 -ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
ENG vs PAK: ಸಚಿನ್ ತೆಂಡೂಲ್ಕರ್‌ರ ಟೆಸ್ಟ್ ಅರ್ಧಶತಕಗಳ ದಾಖಲೆ ಸರಿಗಟ್ಟಿದ ಜೋ ರೂಟ್!
ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್‌ಗೆ ಬೃಹತ್ ಮುನ್ನಡೆ
ಜೋ ರೂಟ್ ಹೊಸ ದಾಖಲೆ ನಿರ್ಮಿಸಿದ ಬೆನ್ನಲ್ಲೇ, ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಹಿಡಿತವನ್ನು ಮುಂದುವರಿಸಿದೆ. ಮೂರನೇ ದಿನದಾಟವನ್ನು 366/8ರಿಂದ ಆರಂಭಿಸಿದ ಇಂಗ್ಲೆಂಡ್, 409 ರನ್‌ಗಳಿಗೆ ಆಲೌಟ್ ಆಯಿತು. ಕಳೆದ ರಾತ್ರಿ ಮೊತ್ತಕ್ಕೆ ಇಂಗ್ಲೆಂಡ್ 43 ರನ್‌ಗಳನ್ನು ಸೇರಿಸಿತು. ಈ ವೇಳೆ ಜೋಫ್ರಾ ಆರ್ಚರ್ ಉಪಯುಕ್ತ 23 ರನ್‌ಗಳ ಕೊಡುಗೆ ನೀಡಿದರು. ಅವರ ಇನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
ಖುರ್ರಂ ಶಹಜಾದ್ ಇಂಗ್ಲೆಂಡ್‌ನ ಕೊನೆಯ ಎರಡು ವಿಕೆಟ್‌ಗಳನ್ನು ಪಡೆದರು. ಮೊದಲು ಜೇಮಿ ಸ್ಮಿತ್ ಅವರನ್ನು 25 ರನ್‌ಗಳಿಗೆ ಔಟ್ ಮಾಡಿದ ಶಹಜಾದ್, ಬಳಿಕ ಜಾಶ್ ಟಂಗ್ ಅವರನ್ನು 8 ರನ್‌ಗಳಿಗೆ ಬೌಲ್ಡ್ ಮಾಡಿದರು. ಶಹಜಾದ್ 133 ರನ್ ನೀಡಿ 3 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ 409 ರನ್‌ಗಳಿಸಿದ ಇಂಗ್ಲೆಂಡ್, ಭರ್ಜರಿ 238 ರನ್‌ಗಳ ಮುನ್ನಡೆ ಸಾಧಿಸಿತು. ಮೊದಲ ದಿನದಾಟದಲ್ಲೇ ಪಾಕಿಸ್ತಾನ ಕೇವಲ ಎರಡು ಸೆಷನ್‌ಗಳೊಳಗೆ 171 ರನ್‌ಗಳಿಗೆ ಆಲೌಟ್ ಆಗಿತ್ತು.