ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ಏಕದಿನ ತಂಡದಲ್ಲಿ ನಮನ್‌ ಧೀರ್‌ಗೆ ಸ್ಥಾನ ನೀಡಿದ್ದು ಶಾಕಿಂಗ್‌ ಎಂದ ಹನುಮ ವಿಹಾರಿ!

ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಲ್ಲಿ ನಮನ್‌ ಧೀರ್‌ಗೆ ಸ್ಥಾನ ನೀಡಿರುವುದನ್ನು ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಪ್ರಶ್ನಿಸಿದ್ದಾರೆ. ಇವರಿಂದ ದೇಶಿ ಕ್ರಿಕೆಟ್‌ನಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಆದರೂ ಅವರಿಗೆ ಟೀಮ್‌ ಇಂಡಿಯಾದಲ್ಲಿ ಚೊಚ್ಚಲ ಅವಕಾಶ ನೀಡಿರುವುದು ಆಘಾತ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದಲ್ಲಿ ನಮನ್‌ ದೀರ್ ಸ್ಥಾನವನ್ನು ಪ್ರಶ್ನಿಸಿದ ಹನುಮ ವಿಹಾರಿ!

ಭಾರತ ತಂಡದಲ್ಲಿ ನಮನ್‌ ಧೀರ್‌ಗೆ ಸ್ಥಾನ ನೀಡಿರುವುದನ್ನು ಪ್ರಶ್ನಿಸಿದ ಹನುಮ ವಿಹಾರಿ. -

Profile
Ramesh Kote Sep 18, 2026 10:19 PM

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಸೆಪ್ಟಂಬರ್‌ 27 ರಂದು ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯ (IND vs WI) ಭಾರತ ತಂಡದಲ್ಲಿ ಮುಂಬೈ ಇಂಡಿಯನ್ಸ್‌ ಆಟಗಾರ ನಮನ್‌ ಧೀರ್‌ಗೆ (Naman Dhir) ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಶ್ರೇಯಸ್‌ ಅಯ್ಯರ್‌ ಸೇರಿದಂತೆ ಹಲವು ಕೀ ಆಟಗಾರರು ಜಪಾನ್‌ನಲ್ಲಿ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕಾರಣ, ಹಲವು ಹೊಸ ಮುಖಗಳಿಗೆ ವಿಂಡೀಸ್‌ ಏಕದಿನ ಸರಣಿಯಲ್ಲಿ ಸ್ಥಾನವನ್ನು ನೀಡಲಾಗಿದೆ. ನಮನ್‌ ಧೀರ್‌ಗೆ ಏಕದಿನ ತಂಡದಲ್ಲಿ ಸ್ಥಾನವನ್ನು ನೀಡಿರುವುದಕ್ಕೆ ಮಾಜಿ ಕ್ರಿಕೆಟಿಗ ನಮನ್‌ ಧೀರ್‌ ಪ್ರಶ್ನೆ ಮಾಡಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಹಾಗೂ ಅಕ್ಷರ್‌ ಪಟೇಲ್‌ ಕೂಡ ಭಾರತ ಟಿ20ಐ ತಂಡದ ಜೊತೆಗೆ ಜಪಾನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಹಾಗಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಲ್ಲಿ ಆಲ್‌ರೌಂಡರ್‌ಗಳ ಕೊರತೆ ಇದೆ. ರಿಯಾನ್‌ ಪರಾಗ್‌ ಹಾಗೂ ಹರ್ಷ್‌ ದುಬೇ ಗಾಯಗಳಿಂದ ಗುಣಮುಖರಾಗುತ್ತಿದ್ದಾರೆ. ರವೀಂದ್ರ ಜಡೇಜಾ ಏಕದಿನ ತಂಡಕ್ಕೆ ಮರಳಿದ್ದರೆ, ನಮನ್‌ ಧೀರ್‌ ಭಾರತ ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ.

IND vs WI: ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ, ಟಿ20ಐ ಸರಣಿಗಳಿಗೆ ಭಾರತ ತಂಡ ಪ್ರಕಟ!

ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ ನಮನ್‌ ಧೀರ್‌ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಹೊಂದಿದ್ದು, ಉಪಯುಕ್ತ ಆಫ್‌ ಸ್ಪಿನ್ನರ್‌ ಕೂಡ ಹೌದು. ಭಾರತ ತಂಡದಲ್ಲಿ ಸ್ಥಾನ ಪಡೆಯುವಷ್ಟು ನಮನ್‌ ಧೀರ್‌ ಅವರು ಉತ್ತಮ ಅಂಕಿಅಂಶಗಳನ್ನು ಹೊಂದಿಲ್ಲವೆಂದು ಹನುಮ ವಿಹಾರಿ ಹೇಳಿದ್ದಾರೆ. ಅವರ ಆಯ್ಕೆ ನನಗೆ ಆಘಾತವನ್ನು ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದ ಏಕದಿನ ತಂಡಕ್ಕೆ ನಮನ್ ಧೀರ್ ಆಯ್ಕೆಯಾಗಿರುವ ಬಗ್ಗೆ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಏಷ್ಯನ್ ಗೇಮ್ಸ್ ಇದೇ ಸಮಯದಲ್ಲಿ ನಡೆಯುತ್ತಿರುವ ಕಾರಣ ಏಕದಿನ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ ನಮನ್ ಧೀರ್ ಅವರನ್ನು ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ ಎಂದು ವಿಹಾರಿ ಹೇಳಿದ್ದಾರೆ.



“ಏಷ್ಯನ್ ಗೇಮ್ಸ್ ಇದೇ ಸಮಯದಲ್ಲಿ ನಡೆಯುತ್ತಿರುವುದರಿಂದ ಏಕದಿನ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಅವರು ನಮನ್ ಧೀರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಅವರ ದೇಶಿ ಕ್ರಿಕೆಟ್ ಅಂಕಿಅಂಶಗಳು ಅಷ್ಟೊಂದು ಸಮಾಧಾನಕರವಾಗಿಲ್ಲ. ಹೌದು, ಅವರು ಪಂಜಾಬ್ ಲೀಗ್‌ನಲ್ಲಿ ಉತ್ತಮ ಇನಿಂಗ್ಸ್ ಆಡಿದ್ದಾರೆ. ಮುಂಬೈ ಇಂಡಿಯನ್ಸ್ ಪರವೂ ಕೆಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಅವರ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ನನಗೆ ಈ ಆಯ್ಕೆಯ ಬಗ್ಗೆ ಅನುಮಾನಗಳಿವೆ. ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ,” ಎಂದು ವಿಹಾರಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ರಾಂಚಿ ಟೆಸ್ಟ್ ಪಂದ್ಯ ಸ್ಥಳಾಂತರ ಸಾಧ್ಯತೆ

“ನಾನು ಇದಕ್ಕೆ ನೀಡಬಹುದಾದ ಏಕೈಕ ಕಾರಣವೆಂದರೆ, ಅವರು ಉತ್ತಮ ಬ್ಯಾಟರ್ ಮಾತ್ರವಲ್ಲದೆ ಬೌಲಿಂಗ್ ಕೂಡ ಮಾಡಬಲ್ಲರು. ಏಕದಿನ ತಂಡದ ಟಾಪ್-6ರಲ್ಲಿ ಉತ್ತಮವಾಗಿ ಬೌಲ್‌ ಮಾಡಬಲ್ಲ ಆಟಗಾರರು ಯಾರೂ ಇಲ್ಲ. ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ. ಆದರೆ ಟಾಪ್-6ನಲ್ಲಿ ಅವರ ಹೊರತಾಗಿ ಯಾರು ಬೌಲ್‌ ಮಾಡುತ್ತಾರೆ? ಬಹುಶಃ ಇದೇ ಕಾರಣಕ್ಕಾಗಿ ನಮನ್ ಧೀರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಬಹುದು,” ಎಂದು ಹನುಮ ವಿಹಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.