ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kane Williamson Retirement: ದೀರ್ಘಾವಧಿ ಉಳಿಯಬಲ್ಲ ಕೇನ್‌ ವಿಲಿಯಮ್ಸನ್‌ರ ಟಾಪ್‌ 5 ದಾಖಲೆಗಳು!

ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯಕ್ಕೆ ನ್ಯೂಜಿಲೆಂಡ್‌ ತಂಡ ಸಜ್ಜಾಗುತ್ತಿರುವಾಗಲೇ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಶಾಕ್‌ ನೀಡಿದ್ದಾರೆ. ಆ ಮೂಲಕ ತಮ್ಮ ರಾಷ್ಟ್ರೀಯ ತಂಡದ ಜೊತೆಗಿನ ಒಂದೂವರೆ ದಶಕದ ಪಯಣವನ್ನು ಅಂತ್ಯಗೊಳಿಸಿದ್ದಾರೆ. ಅವರು ಕಿವೀಸ್‌ ಪರ ಹಲವು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ.

ದೀರ್ಘಾವಧಿ ಉಳಿಯಬಲ್ಲ ಕೇನ್‌ ವಿಲಿಯಮ್ಸನ್‌ರ ಟಾಪ್‌ 5 ದಾಖಲೆಗಳು!

ನ್ಯೂಜಿಲೆಂಡ್‌ ಪರ ಕೇನ್‌ ವಿಲಿಯಮ್ಸನ್‌ರ ಅಗ್ರ 5 ದಾಖಲೆಗಳು. -

Profile
Ramesh Kote Jun 12, 2026 9:11 PM

ನವದೆಹಲಿ: ವಿಶ್ವದ ಫ್ಯಾಬ್‌ ಫೋರ್‌ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ನ್ಯೂಜಿಲೆಂಡ್‌ ಕ್ರಿಕೆಟ್‌ನ ಸಾವರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಕೇನ್‌ ವಿಲಿಯಮ್ಸನ್‌ (Kane Williamson) ಜೂನ್‌ 12 ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳುವ ಮೂಲಕ ಶಾಕ್‌ ನೀಡಿದ್ದಾರೆ. ಅಲ್ಲದೆ ಇಂಗ್ಲೆಂಡ್‌ ಪ್ರವಾಸ ಮಧ್ಯದಲ್ಲಿಯೇ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರುವ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಸಂಖ್ಯಾತ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಶೆಯನ್ನು ತಂದಿದೆ.

ಕೇನ್‌ ವಿಲಿಯಮ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ದಾಖಲೆಗಳನ್ನು ಹೊಂದಿದ್ದಾರೆ.ಅವರು ನ್ಯೂಜಿಲೆಂಡ್‌ ಪರ 93 ಟಿ20ಐ ಪಂದ್ಯಗಳಲ್ಲಿ 2,575 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 175 ಪಂದ್ಯಗಳಲ್ಲಿ 7,256 ರನ್‌ಗಳನ್ನು ದಾಖಲಿಸಿದ್ದು, ಇದರಲ್ಲಿ 15 ಶತಕಗಳೂ ಸೇರಿವೆ. ಅವರ ಅತ್ಯಂತ ದೊಡ್ಡ ಯಶಸ್ಸು ಟೆಸ್ಟ್ ಕ್ರಿಕೆಟ್‌ನಲ್ಲಿ ಮೂಡಿ ಬಂದಿದೆ. ವಿಲಿಯಮ್ಸನ್ 110 ಟೆಸ್ಟ್ ಪಂದ್ಯಗಳಲ್ಲಿ 54.06ರ ಸರಾಸರಿಯಲ್ಲಿ 9,515 ರನ್‌ಗಳನ್ನು ಗಳಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 33 ಶತಕಗಳು ಹಾಗೂ 38 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

Kane Williamson: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ ಕೇನ್‌ ವಿಲಿಯಮ್ಸನ್‌!

ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ 251 ರನ್‌ಗಳು, ಇದು 2020ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಮೂಡಿ ಬಂದಿತ್ತು. ಈ ಸಾಧನೆಗಳು ವಿಲಿಯಮ್ಸನ್ ಅವರನ್ನು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಲು ನೆರವು ನೀಡಿದೆ.



ಅಂದ ಹಾಗೆ ನ್ಯೂಜಿಲೆಂಡ್‌ ತಂಡದ ಕೇನ್‌ ವಿಲಿಯಮ್ಸನ್‌ ಅವರಿಂದ ಅನೇಕ ಶ್ರೇಷ್ಠ ಪ್ರದರ್ಶನಗಳು ಮೂಡಿ ಬಂದಿವೆ. ಇದರಲ್ಲಿ ಕೆಲವು ದಾಖಲೆಗಳು ದೀರ್ಘಾವಧಿ ಉಳಿಯಲಿವೆ. ಅಂಥಾ ಅಗ್ರ ಐದು ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.

1.ನ್ಯೂಜಿಲೆಂಡ್‌ ಪರ ಅತಿ ಹೆಚ್ಚು ಟೆಸ್ಟ್‌ ರನ್‌ಗಳು, ಶತಕಗಳು

ನ್ಯೂಜಿಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೇನ್‌ ವಿಲಿಯಮ್ಸನ್‌ ಅವರ ಹೆಸರಿನಲ್ಲಿದೆ. ಅವರು 110 ಪಂದ್ಯಗಳಿಂದ 54.06ರ ಸರಾಸರಿಯಲ್ಲಿ 9515 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 33 ಶತಕಗಳು ಹಾಗೂ 38 ಅರ್ಧಶತಕಗಳು ಸೇರಿವೆ. ಇವರ ಬಳಿಕ ಎರಡನೇ ಸ್ಥಾನದಲ್ಲಿ ರಾಸ್‌ ಟೇಲರ್‌ (7683 ರನ್‌) ಇದ್ದಾರೆ. ನ್ಯೂಜಿಲೆಂಡ್‌ ತಂಡದ ಪರ ಅತಿ ಹೆಚ್ಚು ಟೆಸ್ಟ್‌ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೂಡ ಕೇನ್‌ ವಿಲಿಯಮ್ಸನ್‌ ಅವರ ಹೆಸರಿನಲ್ಲಿದೆ. ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 33 ಶತಕಗಳನ್ನು ಬಾರಿಸಿದ್ದಾರೆ. 19 ಶತಕಗಳನ್ನು ಗಳಿಸಿರುವ ರಾಸ್‌ ಟೇಲರ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

2.ನ್ಯೂಜಿಲೆಂಡ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳು ಮತ್ತು ಶತಕಗಳು

ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು ಮತ್ತು ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಮಾಜಿ ನಾಯಕ 378 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48.12ರ ಸರಾಸರಿಯಲ್ಲಿ 19,346 ರನ್‌ಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಸ್‌ ಟೇಲರ್‌ ಇದ್ದಾರೆ. ಇವರು 18,199 ರನ್‌ಗಳನ್ನು ದಾಖಲಿಸಿದ್ದರೆ. ಕಿವೀಸ್‌ ಪರ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ ಆಗಿಯೂ ವಿಲಿಯಮ್ಸನ್‌ ಇದ್ದಾರೆ. ಅವರು ಒಟ್ಟು48 ಶತಕಗಳನ್ನು ಬಾರಿಸಿದ್ದರೆ, ಎರಡನೇ ಸ್ಥಾನದಲ್ಲಿ ರಾಸ್‌ ಟೇಲರ್‌ 24 ಶತಕಗಳ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೇನ್‌ ವಿಲಿಯಮ್ಸನ್‌ಗೆ ವಿರಾಟ್‌ ಕೊಹ್ಲಿ ಭಾವನಾತ್ಮಕ ಸಂದೇಶ!

3.ವೇಗವಾಗಿ 9000 ಟೆಸ್ಟ್‌ ರನ್‌ ಗಳಿಸಿದ ಬ್ಯಾಟರ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಪರ ವೇಗವಾಗಿ 9000 ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೇನ್‌ ವಿಲಿಯಮ್ಸನ್‌ ಅವರ ಹೆಸರಿನಲ್ಲಿದೆ. ಅವರು 182 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಒಟ್ಟಾರೆ ಈ ದಾಖಲೆ ಪಟ್ಟಿಯಲ್ಲಿ ಇವರು 8ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ 172 ಇನಿಂಗ್ಸ್‌ಗಳ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

4.ನ್ಯೂಜಿಲೆಂಡ್‌ ನಾಯಕನಾಗಿ ಅತಿ ಹೆಚ್ಚು ಗೆಲುವಿನ ದಾಖಲೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ನಾಯಕನಾಗಿ ಕೇನ್‌ ವಿಲಿಯಮ್ಸನ್‌ ಅವರು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಅವರು 40 ಟೆಸ್ಟ್‌ ಪಂದ್ಯಗಳಲ್ಲಿ ಕಿವೀಸ್‌ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 22ರಲ್ಲಿ ಗೆಲುವು ಸಾಧಿಸಿದ್ದಾರೆ ಹಾಗೂ 10ರಲ್ಲಿ ಸೋಲು ಅನುಭವಿಸಿದ್ದಾರೆ. ಇವರು ಗೆಲುವಿನ ಸರಾಸರಿಯಲ್ಲಿ ಟಾಮ್‌ ಲೇಥಮ್‌ ಅವರೊಂದಿಗೆ ಜಂಟಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.



5.ನಾಯಕನಾಗಿ ಒಡಿಐನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆ

35ರ ವಯಸ್ಸಿನ ಕೇನ್‌ ವಿಲಿಯಮ್ಸನ್‌ ಅವರು ನ್ಯೂಜಿಲೆಂಡ್‌ ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರು 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 578 ರನ್‌ಗಳನ್ನು ಗಳಿಸಿದ್ದರು. ಇವರ ಬಳಿಕ ಎರಡನೇ ಸ್ಥಾನದಲ್ಲಿ ಮೈಕಲ್‌ ಕ್ರೊವ್‌ 1992ರ ವಿಶ್ವಕಪ್‌ ಟೂರ್ನಿಯಲ್ಲಿ 456 ರನ್‌ಗಳನ್ನು ಗಳಿಸಿದ್ದರು.