ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಇಂಗ್ಲೆಂಡ್‌ ವಿರುದ್ದ ತನ್ನ ಐದನೇ ಪಂದ್ಯದಲ್ಲಿಯೂ ಭಾರತ ಮಹಿಳಾ ತಂಡ 4 ರನ್‌ ಸೋಲು ಅನುಭವಿಸಿದೆ. ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳಾ ತಂಡ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಭಾರತಕ್ಕೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ. ಇದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಸೋತ ಭಾರತ ಮಹಿಳಾ ತಂಡದ ಸೆಮೀಸ್‌ ಲೆಕ್ಕಾಚಾರ!

ಇಂಗ್ಲೆಂಡ್‌ ವಿರುದ್ಧ ಸೋತ ಭಾರತ ಮಹಿಳಾ ತಂಡದ ಸೆಮೀಸ್‌ ಲೆಕ್ಕಾಚಾರ! -

Profile Ramesh Kote Oct 20, 2025 12:51 AM

ಇಂದೋರ್‌: ದೀಪ್ತಿ ಶರ್ಮಾ (Deepti sharma) ಅವರ ಆಲ್‌ರೌಂಡರ್‌ ಆಟದ ಹೊರತಾಗಿಯೂ ಭಾರತ ಮಹಿಳಾ ತಂಡ ಕೇವಲ 4 ರನ್‌ಗಳಿಂದ (INDW vs ENGW) ಇಂಗ್ಲೆಂಡ್‌ ವಿರುದ್ಧ ಸೋಲು ಅನುಭವಿಸಿತು. ಆ ಮೂಲಕ 2025ರ ಐಸಿಸಿ ಏಕದಿನ ವಿಶ್ವಕಪ್‌ (Women world Cup 2025) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದಂತಾಯಿತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. ಇದೀಗ ಭಾರತ ತಂಡದ ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ಅಂದ ಹಾಗೆ ಈ ಪಂದ್ಯದಲ್ಲಿ 289 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ 31ನೇ ಓವರ್‌ನಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. 70 ರನ್‌ ಗಳಿಸಿ ಆಡುತ್ತಿದ್ದ ಹರ್ಮನ್‌ಪ್ರೀತ್‌ ಕೌರ್‌ ಔಟ್‌ ಆಗುತ್ತಿದ್ದಂತೆ ಪಂದ್ಯದ ದಿಕ್ಕು ಬದಲಾಯಿತು.

ಸ್ಮೃತಿ ಮಂಧಾನಾ ಹಾಗೂ ದೀಪ್ತಿ ಶರ್ಮಾ ಅವರು ನಿರ್ಣಾಯಕ ಜೊತೆಯಾಟದ ಬಲದಿಂದ ಭಾರತ 42ನೇ ಓವರ್‌ನಲ್ಲಿ 3 ವಿಕೆಟ್‌ ನಷ್ಟಕ್ಕೆ 234 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡ ಗೆಲ್ಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, 88 ರನ್‌ ಗಳಿಸಿದ ಬಳಿಕ ಸ್ಮೃತಿ ಮಂಧಾನಾ ಔಟ್‌ ಆದರು. ಆ ಮೂಲಕ ಭಾರತ ತಂಡದ ಮೇಲೆ ಒತ್ತಡ ಶುರುವಾಯಿತು.

ಅರ್ಧಶತಕದ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ನೂತನ ದಾಖಲೆ ಬರೆದ ಹರ್ಮನ್‌ಪ್ರೀತ್‌ ಕೌರ್‌!

ದೀಪ್ತಿ ಶರ್ಮಾ ನಿರ್ಣಾಯಕ ಅರ್ಧಶತಕ ಗಳಿಸಿದರೂ ಮತ್ತೊಂದು ತುದಿಯಲ್ಲಿ ನಿಯಮಿತವಾಗಿ ವಿಕೆಟ್‌ಗಳು ಉರುಳುತ್ತಿದ್ದ ಕಾರಣ, ಭಾರತ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 284 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 3 ರನ್‌ಗಳಿಂದ ಭಾರತ ಸೋಲು ಒಪ್ಪಿಕೊಂಡಿತು. ಈ ಗೆಲುವಿನ ಮೂಲಕ ಇಂಗ್ಲೆಂಡ್‌ ಸೆಮಿಫೈನಲ್‌ಗೆ ಪ್ರವೇಶ ಮಾಡಿತು. ಆದರೆ, ಭಾರತದ ಸೆಮಿಫೈನಲ್‌ ಹಾದಿ ಕಠಿಣವಾಗಿದೆ.

ಭಾರತ ತಂಡದ ಸೆಮಿಫೈನಲ್‌ ಲೆಕ್ಕಾಚಾರ

ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಮಾಡಿವೆ. ಇದೀಗ ಒಂದೇ ಒಂದು ಸ್ಥಾನ ಖಾಲಿ ಇದೆ. ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಗೆದ್ದಿದ್ದ ಭಾರತ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ವಿರುದ್ಧ ಸೋಲು ಅನುಭವಿಸಿದೆ.

INDW vs ENGW: ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್‌ ಸೋಲು, ಸೆಮಿಫೈನಲ್‌ಗೆ ಇಂಗ್ಲೆಂಡ್‌!

ಸದ್ಯ 4 ಅಂಕವನ್ನು ಕಲೆ ಹಾಕಿರುವ ಭಾರತ ಮಹಿಳಾ ತಂಡ, ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತನ್ನ ಕೊನೆಯ ಎರಡು ಪಂದ್ಯಗಳನ್ನು ಕ್ರಮವಾಗಿ ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ವಿರುದ್ಧ ಭಾರತ ಆಡಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ಭಾರತ 8 ಅಂಕಗಳೊಂದಿಗೆ ಯಾವುದೇ ತಂಡದ ಪೈಪೋಟಿ ಇಲ್ಲದೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ಕಡ್ಡಾಯವಾಗಿ ಗೆಲ್ಲಬೇಕು. ಏಕೆಂದರೆ ಭಾರತದ ವಿರುದ್ಧ ಕಿವೀಸ್‌ ಗೆದ್ದು, ನಂತರ ಇಂಗ್ಲೆಂಡ್‌ ವಿರುದ್ದ ಜಯಿಸಿದರೆ, ಆಗ ನ್ಯೂಜಿಲೆಂಡ್‌ ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ.

ಒಂದು ವೇಳೆ ತನ್ನ ಎರಡು ಪಂದ್ಯದಲ್ಲಿ ಒಂದರಲ್ಲಿ ಗೆದ್ದು, ಇನ್ನುಳಿದ ಒಂದರಲ್ಲಿ ಸೋತರೆ, ಆಗ ಕಿವೀಸ್‌ ಅಥವಾ ಬಾಂಗ್ಲಾದೇಶ ತಂಡಗಳ ಪೈಕಿ ಒಂದು ತಂಡ ಕೂಡ 6 ಅಂಕ ಕಲೆ ಹಾಕಿದರೆ, ಆಗ ರನ್‌ರೇಟ್‌ ಆಧಾರದ ಮೇಲೆ ಒಂದು ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಭಾರತ ಸದ್ಯ +526 ರನ್‌ ರೇಟ್‌ ಅನ್ನು ಹೊಂದಿದೆ. ಬಾಂಗ್ಲಾ ಹಾಗೂ ಕಿವೀಸ್‌ ಋಣಾತ್ಮಕ ರನ್‌ ರೇಟ್‌ ಹೊಂದಿದೆ.