ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೊ ವೈರಲ್‌ʼ: ಲಲಿತ್‌ ಮೋದಿ ವಿರುದ್ಧ ಭಜ್ಜಿ ಆಕ್ರೋಶ!

ಉದ್ಘಾಟನಾ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯವೊಂದರಲ್ಲಿ ಶ್ರೀಶಾಂತ್‌ಗೆ ಹರ್ಭಜನ್‌ ಸಿಂಗ್‌ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಇದೀಗ ಹರ್ಭಜನ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊವನ್ನು ಪೋಸ್ಟ್‌ ಮಾಡಿದ ಲಲಿತ್‌ ಮೋದಿ ವಿರುದ್ಧ ಭಜ್ಜಿ ಕಿಡಿಕಾರಿದ್ದಾರೆ.

ʻಶ್ರೀಶಾಂತ್‌ಗೆ ಕಪಾಳ ಮೋಕ್ಷʼ:ಲಲಿತ್‌ ಮೋದಿ ವಿರುದ್ಧ ಭಜ್ಜಿ ಆಕ್ರೋಶ!

ಲಲಿತ್‌ ಮೋದಿ ವಿರುದ್ಧ ಹರ್ಭಜನ್‌ ಸಿಂಗ್‌ ಆಕ್ರೋಶ. -

Profile Ramesh Kote Sep 1, 2025 5:20 PM

ನವದೆಹಲಿ: ಉದ್ಘಾಟನಾ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2008) ಟೂರ್ನಿಯಲ್ಲಿ ಹರ್ಭಜನ್ ಸಿಂಗ್ (Harbhajan Singh) ಮತ್ತು ಎಸ್‌ ಶ್ರೀಶಾಂತ್ (S Sreesanth) ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಹರ್ಭಜನ್‌ ಸಿಂಗ್‌ ಅವರು, ಪಂದ್ಯದ ಬಳಿಕ ಎಸ್‌ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ಇದೀಗ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಐಪಿಎಲ್‌ ಮಾಜಿ ಆಯುಕ್ತ ಲಲಿತ್ ಮೋದಿ ಆ ಘಟನೆಯ ವಿಡಿಯೊವನ್ನು ಮೈಕೆಲ್ ಕ್ಲಾರ್ಕ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಸೋರಿಕೆ ಮಾಡಿದ್ದರು. ಅದರಲ್ಲಿ ಇಡೀ ಘಟನೆಯನ್ನು ಸೆರೆಹಿಡಿಯಲಾಗಿದೆ. ಈ ವೀಡಿಯೊದಲ್ಲಿ ಶ್ರೀಶಾಂತ್ ಅವರ ಪತ್ನಿ ಲಲಿತ್ ಮೋದಿಯನ್ನು ತುಂಬಾ ಗದರಿಸಿದ್ದಾರೆ. ಈಗ ಸೋರಿಕೆಯಾದ ವಿಡಿಯೊದ ಬಗ್ಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಹರ್ಭಜನ್ ಸಿಂಗ್ ಸಂದರ್ಶನವೊಂದರಲ್ಲಿ ಮಾತನಾಡಿ, "ಈ ವೀಡಿಯೊ ಸೋರಿಕೆಯಾದ ರೀತಿ ತಪ್ಪು. ಇದು ಸಂಭವಿಸಬಾರದಿತ್ತು. ಇದರ ಹಿಂದೆ ಕೆಲವು ಸ್ವಾರ್ಥ ಉದ್ದೇಶವಿರಬಹುದು. 18 ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ಜನರಿಗೆ ಮತ್ತೆ ನೆನಪಿಸುತ್ತಿದ್ದಾರೆ, ಅದನ್ನು ಜನರು ಮರೆತಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು," ಎಂದು ಹೇಳಿದ್ದಾರೆ.

Asia Cup 2025: ಭಾರತ ತಂಡ ಕಳೆದುಕೊಂಡಿರುವ ಎಕ್ಸ್‌ ಫ್ಯಾಕ್ಟರ್‌ ಆಟಗಾರರನ್ನು ಹೆಸರಿಸಿದ ಹರ್ಭಜನ್‌ ಸಿಂಗ್‌!

ಹರ್ಭಜನ್ ಸಿಂಗ್‌ ಸಾರ್ವಜನಿಕವಾಗಿ ಕ್ಷಮೆ ಯಾಚನೆ

ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ಕುರಿತಂತೆ ಹಲವಾರು ಬಾರಿ ಸಾರ್ವಜನಿಕವಾಗಿ ಹರ್ಭಜನ್ ಸಿಂಗ್‌ ಕ್ಷಮೆಯಾಚಿಸಿದ್ದಾರೆ. ಆ ಘಟನೆಯನ್ನು ಮರೆತ ನಂತರ, ಇಬ್ಬರೂ ಒಳ್ಳೆಯ ಸ್ನೇಹಿತರಾದರು, ಆದರೆ ಲಲಿತ್ ಮೋದಿ 18 ವರ್ಷದ ಹಿಂದಿನ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ನಂತರ, ಈ ಘಟನೆ ಮತ್ತೊಮ್ಮೆ ಅಭಿಮಾನಿಗಳು ನೆನಪಿಸಿಕೊಳ್ಳುವಂತಾಗಿದೆ.



ಇದರ ಬಗ್ಗೆ ಮಾತನಾಡಿದ ಭಜ್ಜಿ, "ಏನಾಯಿತು ಎಂಬುದರ ಬಗ್ಗೆ ನನಗೆ ಬೇಸರವಾಗಿದೆ. ನಾವು ಆಟವಾಡುತ್ತಿದ್ದೆವು ಮತ್ತು ಎಲ್ಲರ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ. ತಪ್ಪುಗಳು ನಡೆದಿವೆ ಮತ್ತು ಅದರ ಬಗ್ಗೆ ನನಗೆ ನಾಚಿಕೆಯಾಗುತ್ತದೆ. ಹೌದು, ಆ ವಿಡಿಯೊ ವೈರಲ್ ಆಗಿದೆ. ಅದೊಂದು ದುರದೃಷ್ಟಕರ ಘಟನೆ ಮತ್ತು ನಾನು ಅನೇಕ ಸಂದರ್ಭಗಳಲ್ಲಿ ತಪ್ಪು ಮಾಡಿದ್ದೇನೆ ಎಂದು ಹೇಳಿದ್ದೇನೆ. ಮನುಷ್ಯರು ತಪ್ಪು ಮಾಡುತ್ತಾರೆ ಮತ್ತು ನಾನು ಕೂಡ ತಪ್ಪು ಮಾಡಿದ್ದೇನೆ. ನಾನು ಮತ್ತೆ ತಪ್ಪು ಮಾಡಿದರೆ ನನ್ನನ್ನು ಕ್ಷಮಿಸುವಂತೆ ಗಣೇಶನನ್ನು ಕೇಳಿಕೊಂಡಿದ್ದೇನೆ. ತಪ್ಪುಗಳು ಸಂಭವಿಸುತ್ತವೆ, ” ಎಂದು ತಿಳಿಸಿದ್ದಾರೆ.

ʻನಾನು ಮಾತನಾಡಲ್ಲ, ನೀವು ನನ್ನ ಅಪ್ಪನನ್ನು ಹೊಡೆದಿದ್ದೀರಿʼ-ಶ್ರೀಶಾಂತ್‌ ಘಟನೆ ನೆನೆದ ಹರ್ಭಜನ್‌ ಸಿಂಗ್!

ಘಟನೆ ಏನಿದು?

2008ರಲ್ಲಿ ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಉದ್ಘಾಟನಾ ಆವೃತ್ತಿಯ 10ನೇ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಈ ಪಂದ್ಯದ ಬಳಿಕ ಆಟಗಾರರ ನಡುವಣ ಹಸ್ತಲಾಘವ ಸಂದರ್ಭದಲ್ಲಿ ಹರ್ಭಜನ್ ಸಿಂಗ್‌, ಪಂಜಾಬ್‌ ತಂಡದ ಎಸ್‌ ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. ಈ ಘಟನೆ ಕ್ರಿಕೆಟ್ ವಲಯದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು ಮತ್ತು ಆ ಋತುವಿನ ಇನ್ನುಳಿದ ಪಂದ್ಯಗಳಿಂದ ಹರ್ಭಜನ್ ಅವರನ್ನು ನಿಷೇಧಿಸಲಾಗಿತ್ತು.