ʻನಾನು ಮಾತನಾಡಲ್ಲ, ನೀವು ನನ್ನ ಅಪ್ಪನನ್ನು ಹೊಡೆದಿದ್ದೀರಿʼ-ಶ್ರೀಶಾಂತ್ ಘಟನೆ ನೆನೆದ ಹರ್ಭಜನ್ ಸಿಂಗ್!
ಭಾರತದ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಎಸ್ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಈ ಘಟನೆ ನಡೆಯಬಾರದಿತ್ತು ಎಂದಿದ್ದಾರೆ. ನನ್ನಿಂದ ಅಂದು ತಪ್ಪು ನಡೆದಿದೆ, ಶ್ರೀಶಾಂತ್ ಅವರು ಮಗಳು ಕೂಡ ನನ್ನನ್ನು ದೂರುತ್ತಿದ್ದಾಳೆಂದು ಭಜ್ಜಿ ಅಳಲು ತೋಡಿಕೊಂಡಿದ್ದಾರೆ.

ಎಸ್ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನೆನೆದ ಹರ್ಭಜನ್ ಸಿಂಗ್.

ನವದೆಹಲಿ: ಉದ್ಘಾಟನಾ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2008) ಟೂರ್ನಿಯ ಕಿಂಗ್ಸ್ XI ಪಂಜಾಬ್ ಹಾಗೂ ಮುಂಬೈ ಇಂಡಿಯ್ಸ್ ನಡುವಣ (PBKS vs MI) ಪಂದ್ಯದ ವೇಳೆ ವೇಗಿ ಎಸ್ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ದುರ್ಘಟನೆಯನ್ನು ಭಾರತದ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ (Harbhajan Singh) ಸ್ಮರಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಭಜ್ಜಿ ಪಶ್ಚಾತಾಪ ಪಟ್ಟಿದ್ದಾರೆ. ಅಂದಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವೇಗಿ ಎಸ್ ಶ್ರೀಶಾಂತ್ (S Sreesanth) ಅವರ ಕಪಾಲಮೋಕ್ಷ ಮಾಡಬಾರದಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಘಟನೆಯ ಬಳಿಕ ಅನುಭವಿಸಿದ ಹಿನ್ನಡೆಯನ್ನು ಭಜ್ಜಿ ರಿವೀಲ್ ಮಾಡಿದೆ.
ಪಂಜಾಬ್ ಹಾಗೂ ಮುಂಬೈ ನಡುವಣ ಪಂದ್ಯದ ವೇಳೆ ಎಸ್ ಶ್ರೀಶಾಂತ್ ಅವರ ವರ್ತನೆಯಿಂದ ಬೇಸತ್ತು ಹರ್ಭಜನ್ ಸಿಂಗ್ ಈ ರೀತಿ ಮಾಡಿದ್ದರು. ಕಪಾಳಮೋಕ್ಷಕ್ಕೆ ಒಳಗಾದ ಬಳಿಕ ಎಸ್ ಶ್ರೀಶಾಂತ್ ಕಣ್ಣೀರಿಟ್ಟಿದ್ದರು. ಈ ವಿಡಿಯೊ ಅಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಘಟನೆ ಬಳಿಕ ಹರ್ಭಜನ್ ಸಿಂಗ್‌ಗೆ 11 ಪಂದ್ಯಗಳಿಂದ ಅಮಾನತುಗೊಳಿಸಲಾಗಿತ್ತು. ಆರ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನ ʻಕುಟ್ಟಿ ಸ್ಟೋರಿಸ್ ಆಪ್ ಆಶ್ʼ ಅವರ ಇತ್ತೀಚಿನ ಸಂಚಿಕೆಯಲ್ಲಿ ಹರ್ಭಜನ್ ಸಿಂಗ್ 2008ರ ಘಟನೆಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಂಡಿದ್ದಾರೆ.
Anil Kumble: ಭಾರತದ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನಿಂಗ್ ಬೌಲರ್ ಆರಿಸಿದ ಹರ್ಭಜನ್ ಸಿಂಗ್!
"104 -ನನ್ನ ಜೀವನದಲ್ಲಿ ನಾನು ಬದಲಾಯಿಸಲು ಬಯಸುವ ಒಂದು ವಿಷಯವೆಂದರೆ ಶ್ರೀಶಾಂತ್ ಅವರೊಂದಿಗಿನ ಆ ಘಟನೆ. ಹಾಗಾಗಿ, ಹೌದು, ಆ ಘಟನೆಯನ್ನು ನನ್ನ ವೃತ್ತಿಜೀವನದಿಂದ ನನ್ನ ಇಚ್ಛೆಯ ಪಟ್ಟಿಯಿಂದ ತೆಗೆದುಹಾಕಲು ನಾನು ಬಯಸುತ್ತೇನೆ. ತಪ್ಪಾಗಿತ್ತು ಮತ್ತು ನಾನು ಅದನ್ನು ಮಾಡಬಾರದಿತ್ತು. ನಾನು ಸುಮಾರು 200 ಬಾರಿ ಕ್ಷಮೆಯಾಚಿಸಿದ್ದೇನೆ. ನನಗೆ ತುಂಬಾ ಕೆಟ್ಟದಾಗಿ ಅನಿಸಿದ್ದು ಏನೆಂದರೆ... ಆ ಘಟನೆಯ ವರ್ಷಗಳ ನಂತರವೂ, ನನಗೆ ಸಿಗುವ ಪ್ರತಿಯೊಂದು ಅವಕಾಶ ಅಥವಾ ಹಂತಕ್ಕೂ ನಾನು ಕ್ಷಮೆಯಾಚಿಸುತ್ತಿದ್ದೇನೆ," ಎಂದು ಹರ್ಭಜನ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.
"ನಾವೆಲ್ಲರೂ ತಪ್ಪು ಮಾಡುತ್ತೇವೆ ಹಾಗೂ ಭವಿಷ್ಯದಲ್ಲಿ ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ನನ್ನ ಸಹ ಆಟಗಾರ ಹಾಗೂ ನಾವು ಜೊತೆಯಾಗಿ ಆಡಿದ್ದೇವೆ. ಹೌದು, ಆ ಪಂದ್ಯದಲ್ಲಿ ನಾವಿಬ್ಬರು ಎದುರಾಳಿಗಳಾಗಿ ಆಡಿದ್ದೆವು. ಆದರೆ, ನಾವು ಆ ರೀತಿ ವರ್ತಿಸುವ ಮಟ್ಟಕ್ಕೆ ಹೋಗಬಾರದಿತ್ತು," ಎಂದು ಭಜ್ಜಿ ತಿಳಿಸಿದ್ದಾರೆ.
IND vs ENG: ವೀರೇಂದ್ರ ಸೆಹ್ವಾಗ್‌ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
ನೀವು ನನ್ನ ತಂದೆಗೆ ಹೊಡೆದಿದ್ದೀರಿ
“105: -ಆದರೆ ಹಲವು ವರ್ಷಗಳ ನಂತರವೂ ನನಗೆ ನಿಜವಾಗಿಯೂ ನೋವುಂಟುಮಾಡಿದ್ದು, ನಾನು ಅವರ (ಶ್ರೀಶಾಂತ್) ಮಗಳನ್ನು ಭೇಟಿಯಾದಾಗ. ನಾನು ಅವಳೊಂದಿಗೆ ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದೆ. ಅವಳು, “ನಾನು ನಿನ್ನೊಂದಿಗೆ ಮಾತನಾಡಲು ಬಯಸುವುದಿಲ್ಲ. ನೀನು ನನ್ನ ತಂದೆಯನ್ನು ಹೊಡೆದಿದ್ದೀರಿ.” ಎಂದಳು. ಆಗ ನನ್ನ ಹೃದಯ ಛಿದ್ರವಾಯಿತು ಮತ್ತು ನಾನು ಕಣ್ಣೀರಿನ ಅಂಚಿನಲ್ಲಿದ್ದೆ. ನಾನು ಅವಳ ಮೇಲೆ ಯಾವ ಅನಿಸಿಕೆ ಬಿಟ್ಟಿದ್ದೇನೆ? ಅವಳು ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಿರಬೇಕು, ಅಲ್ಲವೇ?” ಎಂದು ಸ್ಪಿನ್ ದಂತಕತೆ ಬೇಸರ ವ್ಯಕ್ತಪಡಿಸಿದ್ದಾರೆ.
ENG vs IND: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ 19 ವರ್ಷದ ಏಷ್ಯನ್ ದಾಖಲೆ ಮೇಲೆ ಕಣ್ಣಿಟ್ಟ ಶುಭ್‌ಮನ್ ಗಿಲ್
ಈ ಘಟನೆಯನ್ನು ನನ್ನ ವೃತ್ತಿ ಜೀವನದಿಂದ ತೆಗೆಯುತ್ತೇನೆ
"ಅವಳು ನನ್ನನ್ನು ತನ್ನ ತಂದೆಗೆ ಹೊಡೆದ ವ್ಯಕ್ತಿಯಂತೆ ನೋಡುತ್ತಾಳೆ. ನನಗೆ ತುಂಬಾ ಬೇಸರವಾಯಿತು. ನಾನು ಇನ್ನೂ ಅವರ(ಎಸ್ ಶ್ರೀಶಾಂತ್) ಮಗಳಿಗೆ ಕ್ಷಮೆಯಾಚಿಸುತ್ತೇನೆ, ನಾನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಿನ್ನನ್ನು ಉತ್ತಮಗೊಳಿಸಲು ಮತ್ತು ನಾನು ಆ ರೀತಿಯ ವ್ಯಕ್ತಿಯಲ್ಲ ಎಂದು ನೀನು ಭಾವಿಸುವಂತೆ ಮಾಡಲು ನಾನು ಏನಾದರೂ ಮಾಡಬಹುದಾದರೆ, ದಯವಿಟ್ಟು ನನಗೆ ಹೇಳಿ. ಅವಳು ದೊಡ್ಡವಳಾದಾಗ, ಅವಳು ನನ್ನನ್ನು ಅದೇ ದೃಷ್ಟಿಯಲ್ಲಿ ನೋಡಬಾರದು ಎಂದು ನಾನು ಬಯಸುತ್ತೇನೆ. ಅವಳ ಚಿಕ್ಕಪ್ಪ ಯಾವಾಗಲೂ ಅವಳೊಂದಿಗೆ ಇರುತ್ತಾರೆ ಮತ್ತು ಅವರು ಸಾಧ್ಯವಾದಷ್ಟು ಬೆಂಬಲವನ್ನು ನೀಡುತ್ತಾರೆ. ನಾನು ಆ ಅಧ್ಯಾಯವನ್ನು ತೆಗೆದುಹಾಕಲು ಬಯಸುತ್ತೇನೆ, ”ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.