ಕೆವಿನ್ ಪೀಟರ್ಸನ್‌ಗಿಂತ ಹ್ಯಾರಿ ಬ್ರೂಕ್ ಪ್ರತಿಭಾವಂತ ಬ್ಯಾಟ್ಸ್‌ಮನ್ ಎಂದ ಬೆನ್ ಸ್ಟೋಕ್ಸ್!
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 114 ರನ್‌ಗಳನ್ನು ಕಲೆ ಹಾಕಿದ ಹ್ಯಾರಿ ಬ್ರೂಕ್ ಅವರನ್ನು ಹಿರಿಯ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಪ್ರತಿಭೆ ವಿಷಯದಲ್ಲಿ ಕೆವಿನ್ ಪೀಟರ್ಸನ್ ಅವರಿಗಿಂತ ಹ್ಯಾರಿ ಬ್ರೂಕ್ ಮುಂದಿದ್ದಾರೆಂದು ಸ್ಟೋಕ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹ್ಯಾರಿ ಬ್ರೂಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ ಸ್ಟೋಕ್ಸ್. -
ನವದೆಹಲಿ: ಶ್ರೀಲಂಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ (IND vs AFG) ಸ್ಪೋಟಕ ಬ್ಯಾಟ್ ಮಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (Harry Brook) ಅವರನ್ನು ಮಾಜಿ ನಾಯಕ ಬೆನ್ ಸ್ಟೋಕ್ಸ್ (Ben Stokes) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹ್ಯಾರಿ ಬ್ರೂಕ್ ಅವರು ಬ್ಯಾಟಿಂಗ್‌ನಲ್ಲಿನ ಪ್ರತಿಭೆಯ ವಿಚಾರದಲ್ಲಿ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರಿಗಿಂತ ಮುಂದಿದ್ದಾರೆ ಎಂದು ಸ್ಟೋಕ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹ್ಯಾರಿ ಬ್ರೂಕ್ ಸ್ಪೋಟಕ ಶತಕದ ಬಲದಿಂದ ಇಂಗ್ಲೆಂಡ್ ತಂಡ, ಎದುರಾಳಿ ಶ್ರೀಲಂಕಾವನ್ನು 119 ರನ್‌ಗಳಿಂದ ಮಣಿಸಿತು. ಆ ಮೂಲಕ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
ಸೌಥ್‌ಹ್ಯಾಮ್ಟನ್‌ನ ದಿ ರೋಸ್ ಬೌಲ್ ಅಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡದ ಪರ ಹ್ಯಾರಿ ಬ್ರೂಕ್ ಕೇವಲ 49 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 114 ರನ್‌ಗಳನ್ನು ಸಿಡಿಸಿದರು. ಇದು ಇಂಗ್ಲೆಂಡ್ ಪರ ಎರಡನೇ ವೇಗದ ಟಿ20ಐ ಶತಕವಾಗಿದೆ. ಇವರು 42 ಎಸೆತಗಳಲ್ಲಿಯೇ ಶತಕವನ್ನು ಬಾರಿಸಿದ್ದರು. ಇವರ ಶತಕದ ಬಲದಿಂದ ಇಂಗ್ಲೆಂಡ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ 135 ರನ್‌ಗಳಿಗೆ ಆಲ್‌ಔಟ್ ಆಯಿತು.
IND vs AFG: ಸಂಜು ಸ್ಯಾಮ್ಸನ್ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್ ಗವಾಸ್ಕರ್!
ಈ ಪಂದ್ಯವನ್ನು ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಸ್ಟ್ಯಾಂಡ್ಸ್‌ನಿಂದ ವೀಕ್ಷಿಸಿದ್ದಾರೆ. ಮಾಜಿ ಬ್ಯಾಟ್ಸ್‌ಮನ್ ಇತ್ತೀಚೆಗೆ ಇಂಗ್ಲೆಂಡ್ ವೈಟ್‌ಬಾಲ್ ತಂಡದ ಮೆಂಟರ್ ಆಗಿ ಸೇರ್ಪಡೆಯಾಗಿದ್ದರು. ಈ ಪಂದ್ಯಕ್ಕೂ ಮುನ್ನ ಪೀಟರ್ಸನ್ ಅವರ ಬ್ಯಾಟಿಂಗ್ ಹೈಲೈಟ್ಸ್ ವೀಕ್ಷಿಸಿದ್ದಾಗಿ ಬ್ರೂಕ್ ಪಂದ್ಯದ ಬಳಿಕ ಹೇಳಿದ್ದರು. ಮೈದಾನದ ವಿವಿಧ ಕಡೆ ಪೀಟರ್ಸನ್ ಹೇಗೆ ಹೇಗೆ ದಾಳಿ ನಡೆಸುತ್ತಾರೆ ಹಾಗೂ ಅವರ ಬ್ಯಾಟಿಂಗ್ ಸಾಮಾರ್ಥ್ಯ ನಮ್ಮೆಲ್ಲರಿಗೂ ಸ್ಪೂರ್ತಿ ಎಂದು ಹೇಳಿಕೊಂಡಿದ್ದರು.
Harry Brook was simply sensational against Sri Lanka as he brought up his second T20I century 💯💥
— ICC (@ICC) September 16, 2026
Read more ➡️ https://t.co/Ueyy6w0MFx pic.twitter.com/IE6TOFdm31
ಹ್ಯಾರಿ ಬ್ರೂಕ್‌ಗೆ ಬೆನ್ ಸ್ಟೋಕ್ಸ್ ಮೆಚ್ಚುಗೆ
“ಕೆವಿನ್ ಪೀಟರ್ಸನ್ ಅವರ ಅದ್ಭುತ ಪ್ರತಿಭೆಯೂ ಹ್ಯಾರಿ ಬ್ರೂಕ್ ಅವರ ಪ್ರತಿಭೆಗೆ ಹತ್ತಿರ ಬರಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಈ ಆಟಗಾರರು ಹೇಗಿದ್ದಾರೋ ಹಾಗೆಯೇ, ಅವರು ಉತ್ತಮವಾಗಿ ಆಡಿದ ದಿನಗಳಲ್ಲೂ, ಕಳಪೆಯಾಗಿ ಆಡಿದ ದಿನಗಳಲ್ಲೂ ಅವರ ಆಟವನ್ನು ಸುಮ್ಮನೆ ಕುಳಿತು ಮೆಚ್ಚಿಕೊಳ್ಳುವುದು ಅಷ್ಟೊಂದು ಕಷ್ಟವೇ? ನಾವು ಅವರ ಸ್ಥಾನದಲ್ಲಿದ್ದರೆ ಎಂದಿಗೂ ಮಾಡಲು ಸಾಧ್ಯವಾಗದಂತಹ ಕೆಲಸಗಳನ್ನು ಅವರು ಮಾಡುತ್ತಾರೆ. ಆದರೆ ಅವರನ್ನು ಟೀಕಿಸುವುದನ್ನು ನಿಲ್ಲಿಸಬೇಕು. ಏಕೆಂದರೆ ಅವರು ಯೋಚಿಸುವ ರೀತಿಯಲ್ಲಿ ಯೋಚಿಸುವ ಮಟ್ಟದಲ್ಲೇ ನಾವು ಇಲ್ಲ,” ಎಂದು ಬೆನ್ ಸ್ಟೋಕ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
2027ರ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅಕ್ಟೋಬರ್ 28ಕ್ಕೆ ಸಾಧ್ಯತೆ!
“ನೀನು ನಿಜಕ್ಕೂ ಅದ್ಭುತ ಪ್ರತಿಭೆ, ಹ್ಯಾರಿ. ನಿನ್ನ ಆಟವನ್ನು ನೋಡುವುದೇ ಒಂದು ಅದ್ಭುತ ಅನುಭವ,” ಎಂದು ಸ್ಟೋಕ್ಸ್ ಮತ್ತಷ್ಟು ಹೊಗಳಿದ್ದಾರೆ.
ಹ್ಯಾರಿ ಬ್ರೂಕ್ ಅವರ ಪ್ರತಿಭೆಯನ್ನು ಕೆವಿನ್ ಪೀಟರ್ಸನ್ ಅವರೊಂದಿಗೆ ಹೋಲಿಸಿದ ಬೆನ್ ಸ್ಟೋಕ್ಸ್, ತಮ್ಮ ಹೇಳಿಕೆ ಪೀಟರ್ಸನ್‌ಗೆ ಕೊಂಚ ಕಠಿಣವಾಗಿ ಕಾಣಬಹುದು ಎಂದು ಬಳಿಕ ಒಪ್ಪಿಕೊಂಡಿದ್ದಾರೆ. ಆದರೆ ಮಾಜಿ ಇಂಗ್ಲೆಂಡ್ ಸ್ಟಾರ್ ಆಟಗಾರನ ಸಾಮರ್ಥ್ಯವನ್ನು ತಾನು ಪ್ರಶ್ನಿಸುತ್ತಿಲ್ಲ ಎಂದು ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.
“ವಾಸ್ತವವಾಗಿ ಕೆಪಿಗೆ ಹೋಲಿಸಿದರೆ ನನ್ನ ಹೇಳಿಕೆ ಕೊಂಚ ಕಠಿಣವಾಗಿದೆ. ಇಬ್ಬರೂ ಅಸಾಧಾರಣ ಪ್ರತಿಭೆಗಳು. ಆದರೆ ನನ್ನ ಅಭಿಪ್ರಾಯದಲ್ಲಿ ಬ್ರೂಕ್ ಉತ್ತಮ ಎಂಬುದು ನನ್ನ ಹೇಳಿಕೆಯ ಉದ್ದೇಶ,” ಎಂದು ಬೆನ್ ಸ್ಟೋಕ್ಸ್ ನಂತರದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.