ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ (IND vs SA) ಎರಡನೇ ಟಿ20ಐ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 51 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಪಂದ್ಯದ ಸೋಲಿನ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ Suryakumar Yadav) ಬೇಸರ ವ್ಯಕ್ತಪಡಿಸಿದರು. ಈ ಸೋಲನ್ನು ನಾವು ಕಲಿಕೆಯ ಪ್ರಕ್ರಿಯೆಯಾಗಿ ತೆಗೆದುಕೊಂಡು ಮುಂದಿನ ಪಂದ್ಯಕ್ಕೆ ಸಾಗುತ್ತೇವೆಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಈ ಕಾರಣದಿಂದ ಭಾರತ ತಂಡ ಸೋಲು ಅನುಭವಿಸಬೇಕಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳು ವಿಫಲರಾದರು. ಆ ಮೂಲಕ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 213 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡಕ್ಕೆ 214 ರನ್‌ಗಳ ಗುರಿಯನ್ನು ನೀಡಿತ್ತು. ಗುರಿ ಬೆನ್ನತ್ತಿದ ಭಾರತ ತಂಡದ ಪರ ತಿಲಕ್ ವರ್ಮಾ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಮೊದಲನೇ ಓವರ್‌ನಲ್ಲೇ ಶೂನ್ಯಕ್ಕೆ ಔಟಾದ ಕಾರಣ ಅತಿಥೇಯ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಇನ್ನು 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬದಲು ಕಣಕ್ಕಿಳಿದ ಅಕ್ಷರ್ ಪಟೇಲ್ ಕೂಡ ಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಒಟ್ನಿಯೆಲ್ ಬಾರ್ಟ್‌ಮನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 162 ರನ್‌ಗಳಿಗೆ ಆಲೌಟ್ ಆಯಿತು.
IND vs SA: ಕ್ವಿಂಟಕ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಪಂದ್ಯದ ಸೋಲಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಪ್ರಮುಖ ಬ್ಯಾಟರ್‌ಗಳ ಪ್ರದರ್ಶನದ ಕುರಿತು ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಸೋಲು ಕಲಿಕೆಯ ಭಾಗ ಎಂದಿದ್ದಾರೆ. ನಾವು ಮೊದಲು ಬೌಲ್ ಮಾಡಿದಾಗ ನಮಗೆ ಹೆಚ್ಚಿನ ಕೆಲಸವಿರಲಿಲ್ಲ. ಬೌಲರ್‌ಗಳು ಪಿಚ್ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು ಎಂದು ಹೇಳಿದ್ದಾರೆ.
ಎರಡನೇ ಪ್ಲ್ಯಾನ್ ರೂಪಿಸಬೇಕಾಗಿತ್ತು: ಸೂರ್ಯ
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, "ಹೌದು, ಇದು ಕಲಿಕೆಯ ಪ್ರಕ್ರಿಯೆ. ನಾವು ಕಲಿಯಬೇಕು ಮತ್ತು ಮುಂದುವರಿಯಬೇಕು ಅಷ್ಟೆ. ಸ್ವಲ್ಪ ಇಬ್ಬನಿ ಬಿದ್ದಿತ್ತು ಮತ್ತು ನಮ್ಮ ಮೊದಲ ಯೋಜನೆ ಕೆಲಸ ಮಾಡದಿದ್ದರೆ, ನಮಗೆ ಎರಡನೇ ಪ್ಲ್ಯಾನ್ ಇರಬೇಕಿತ್ತು, ಆದರೆ ನಾವು ಅದನ್ನು ಅನುಸರಿಸಲಿಲ್ಲ,” ಎಂದು ತಿಳಿಸಿದ ಸೂರ್ಯಕುಮಾರ್ ಯಾದವ್, "ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಹೇಗೆ ಬೌಲ್ ಮಾಡಿದರು ಎಂಬುದನ್ನು ತಾವು ನೋಡಿದ್ದೇವೆ, ಈಗ ಅದರಿಂದ ನಾವು ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇವೆ," ಎಂದು ಹೇಳಿದ್ದಾರೆ.
IND vs SA: ಒಂದೇ ಓವರ್‌ನಲ್ಲಿ 7 ವೈಡ್ ಹಾಕಿದ ಅರ್ಷದೀಪ್ ಸಿಂಗ್ ವಿರುದ್ಧ ಗಂಭೀರ್ ಕಿಡಿ!
ಬ್ಯಾಟಿಂಗ್ ವೈಫಲ್ಯದ ನಾಯಕ ಅಸಮಾಧಾನ
ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಅವರು, "ಗಿಲ್ ಮತ್ತು ನಾನು ಉತ್ತಮ ಆರಂಭ ನೀಡಬೇಕಿತ್ತು, ಏಕೆಂದರೆ ನಾವು ಯಾವಾಗಲೂ ಅಭಿಷೇಕ್ ಅವರನ್ನು ಅವಲಂಬಿಸಲು ಸಾಧ್ಯವಿಲ್ಲ. ನಾನು, ಶುಭಮನ್ ಮತ್ತು ಇತರ ಕೆಲವು ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ದೀರ್ಘ ಸ್ವರೂಪದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದ್ದೇವೆ. ಇಂದು (ಡಿ. 11) ಅವರು ಅದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಬೇಕೆಂದು ನಾವು ಬಯಸಿದ್ದೇವೆ. ದುರದೃಷ್ಟವಶಾತ್, ಅದು ಕೆಲಸ ಮಾಡಲಿಲ್ಲ" ಎಂದು ತಿಳಿಸಿದ್ದಾರೆ.
ಸರಣಿಯ ಮೂರನೇ ಪಂದ್ಯ ಡಿಸೆಂಬರ್ 14ರಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ನಡಯಲಿದೆ. ಈ ಪಂದ್ಯದಲ್ಲಿ ಗೆದ್ದು ಭಾರತ ತಂಡ ಸರಣಿಯಲ್ಲು ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.