ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿಯನ್ನು ಬಹಿರಂಗಪಡಿಸಿದ ಅಜಿಂಕ್ಯ ರಹಾನೆ!

ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದ ಭಾರತದ ಮಾಜಿ ನಾಯಕ ಅಜಿಂಕ್ಯ ರಹಾನೆ, ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿ ಯಾವುದೆಂದು ಬಹಿರಂಗಪಡಿಸಿದ್ದಾರೆ. ಪ್ಲೇಯಿಂಗ್‌ Xiನಲ್ಲಿ ಆಡದೆ ಭಾರತ ತಂಡದ ಜೊತೆ ಪ್ರಯಾಣ ಮಾಡುವುದು ಕಠಿಣ ಸಂಗತಿ ಎಂದು ರಹಾನೆ ತಿಳಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಕಠಿಣ ಅವಧಿಯನ್ನು ಹೆಸರಿಸಿದ ಅಜಿಂಕ್ಯ ರಹಾನೆ!

ತಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿ ತಿಳಿಸಿದ ಅಜಿಂಕ್ಯ ರಹಾನೆ. -

Profile
Ramesh Kote Aug 7, 2026 4:12 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ (Indian Cricket team) ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತವೊಂದನ್ನು ಸ್ಮರಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದೊಂದಿಗೆ ಪ್ರವಾಸ ಮಾಡುತ್ತಿದ್ದರೂ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗದೆ 12ನೇ ಆಟಗಾರನಾಗಿ ಉಳಿದ ದಿನಗಳಲ್ಲಿ ತಾವು ಅನುಭವಿಸಿದ ಕಠಿಣ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಮುಂಬೈ ಮೂಲದ ಅಜಿಂಕ್ಯ ರಹಾನೆ 2011ರಲ್ಲಿ ವೈಟ್‌ಬಾಲ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಇನ್ನೂ ಎರಡು ವರ್ಷ ಕಾಯಬೇಕಾಯಿತು. ಈ ಅವಧಿಯಲ್ಲಿ ಅವರು ಹಲವು ಬಾರಿ ಭಾರತ ತಂಡದ ಭಾಗವಾಗಿದ್ದರೂ, ಸುದೀರ್ಘ ಅವಧಿ 12ನೇ ಆಟಗಾರನಾಗಿ ಇರಬೇಕಾಗಿತ್ತು. ಆದರೆ, ಕೊನೆಗೂ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್‌ ಚೋಪ್ರಾ!

ಆರಂಭಿಕ ಎರಡು ವರ್ಷಗಳು ಕಠಿಣವಾಗಿದ್ದವು: ರಹಾನೆ

"2011ರಲ್ಲಿ ಮೊದಲ ಬಾರಿ ಭಾರತ ತಂಡಕ್ಕೆ ಪ್ರವೇಶಿಸಿದಾಗ ಮೊದಲ ಎರಡು ವರ್ಷಗಳು ನನಗೆ ತುಂಬಾ ಕಠಿಣವಾಗಿದ್ದವು. ಟೆಸ್ಟ್ ಕ್ರಿಕೆಟ್‌ ಪದಾರ್ಪಣೆಗಾಗಿ ನಾನು 20 ಪಂದ್ಯಗಳವರೆಗೆ ಕಾಯಬೇಕಾಯಿತು. ಎರಡು ವರ್ಷಗಳ ಅವಧಿಯಲ್ಲಿ 12ನೇ ಆಟಗಾರನಾಗಿದ್ದೆ. ಅದು ಸವಾಲಿನ ಹಂತವಾಗಿತ್ತು. ಆದರೆ ಆ ಅವಧಿಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ," ಎಂದು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

"ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ಅನುಕಂಪ ಪಡೆಯುವುದು ಅಥವಾ ನನ್ನನ್ನು ನಾನು ಸುಧಾರಿಸಿಕೊಳ್ಳಲು ಪ್ರಯತ್ನಿಸುವುದು. 12ನೇ ಆಟಗಾರನಾಗಿ ನೀರು ನೀಡುವುದರಲ್ಲಿ ಅಥವಾ ತಂಡದ ಸಹ ಆಟಗಾರರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆ."

ಶ್ರೀಲಂಕಾ ಸರಣಿ ಗೆದ್ದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬಹುದೇ?

"ಎಲ್ಲವನ್ನೂ ಗಮನಿಸುತ್ತಿದ್ದೆ. ಅದರಿಂದಲೇ ನಾನು ದೀರ್ಘಕಾಲ ಕ್ರಿಕೆಟ್ ಆಡಲು ಸಾಧ್ಯವಾಯಿತು. ಪಂದ್ಯಗಳನ್ನು ಗಮನಿಸುವುದು ನನ್ನ ಮನೋಭಾವ ಮತ್ತು ಮಾನಸಿಕತೆಯನ್ನು ಉತ್ತಮಗೊಳಿಸಿತು. ಅನುಕಂಪ ಪಡೆಯುವುದು ಸುಲಭವಾಗಿತ್ತು, ಆದರೆ ನಾನು ಅದನ್ನು ಎಂದಿಗೂ ನಿರೀಕ್ಷಿಸಲಿಲ್ಲ," ಎಂದು ಇತ್ತೀಚೆಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಬಲಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

ಆಟಗಾರರಿಗೆ ತಾಳ್ಮೆ ಬಹಳ ಮುಖ್ಯ

ತಮ್ಮ ಕ್ರಿಕೆಟ್ ಪಯಣದಲ್ಲಿ ತಾಳ್ಮೆ ಪ್ರಮುಖ ಪಾತ್ರ ವಹಿಸಿತು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ. ಆರಂಭದಲ್ಲಿ ತಮಗೆ ಅಷ್ಟೊಂದು ತಾಳ್ಮೆ ಇರಲಿಲ್ಲವಾದರೂ, ಅನುಭವದೊಂದಿಗೆ ಅದು ಬೆಳೆಯಿತು ಎಂದು ಅವರು ವಿವರಿಸಿದ್ದಾರೆ.

"ತಾಳ್ಮೆ ನನ್ನಲ್ಲಿ ಮೊದಲಿನಿಂದಲೂ ಇತ್ತು ಎಂದು ಹೇಳುವುದಿಲ್ಲ. ಆದರೆ ಕ್ರಿಕೆಟ್ ಆಡುತ್ತಾ ಅನುಭವ ಹೆಚ್ಚಾದಂತೆ ಅದು ಬೆಳೆಯಿತು. ಮುಂಬೈನ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವುದೇ ಸವಾಲಿನ ಅನುಭವ. ಅಲ್ಲಿಂದಲೇ ಎಲ್ಲೋ ಒಂದು ಕಡೆ ತಾಳ್ಮೆ ಬೆಳೆಯಲು ಆರಂಭವಾಗುತ್ತದೆ. ನಾನು ದೇಶಿ ಕ್ರಿಕೆಟ್ ಆರಂಭಿಸಿ ಸತತವಾಗಿ ರನ್ ಗಳಿಸಲು ಶುರು ಮಾಡಿದಾಗ, ಸಹಜವಾಗಿಯೇ 'ನನ್ನ ಹೆಸರು ಭಾರತ ತಂಡಕ್ಕೆ ಬರಬೇಕು' ಎಂದು ಅನಿಸುತ್ತಿತ್ತು," ಎಂದರು.

600ನೇ ಟೆಸ್ಟ್‌ ಆಡಲಿರುವ ಭಾರತ ತಂಡ; ವಿಶ್ವ ದಾಖಲೆ ಯಾರ ಹೆಸರಿನಲ್ಲಿದೆ?

"ನನಗೂ ಹಾಗೆಯೇ ಅನಿಸುತ್ತಿತ್ತು. ಆದರೆ ಕೆಲವು ಹಿರಿಯ ಆಟಗಾರರೊಂದಿಗೆ ಮಾತನಾಡಿದ ಬಳಿಕ ಮತ್ತು ಸಮಯ ಕಳೆದಂತೆ, 'ಆಗಬೇಕಾದ ಸಮಯದಲ್ಲಿ ಅದು ಖಂಡಿತವಾಗಿಯೂ ಆಗುತ್ತದೆ' ಎಂಬುದನ್ನು ಅರ್ಥಮಾಡಿಕೊಂಡೆ. ನಿಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಮಾತ್ರ ಗಮನಹರಿಸಬೇಕು. ನೀವು ದೀರ್ಘಕಾಲ ಕ್ರಿಕೆಟ್ ಆಡಲು ಬಯಸಿದರೆ ತಾಳ್ಮೆ ಬಹಳ ಮುಖ್ಯ," ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.