2027ರ ಐಪಿಎಲ್ ಹರಾಜು ನಡೆಯುವ ಸ್ಥಳವನ್ನು ರಿವೀಲ್ ಮಾಡಿದ ಬಿಸಿಸಿಐ ಕಾರ್ಯದರ್ಶಿ!
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಭಾರತದಲ್ಲೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ಗಾಗಿ ನಡೆಯಲಿರುವ ಮೆಗಾ ಹರಾಜಿನ ಸ್ಥಳದ ಕುರಿತು ಸೈಕಿಯಾ ಮಾಹಿತಿ ನೀಡಿದ್ದಾರೆ. 2027ರ ಹರಾಜು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
2027ರ ಐಪಿಎಲ್ ಮಿನಿ ಹರಾಜು ಸ್ಥಳವನ್ನು ರಿವೀಲ್ ಮಾಡಿದ ಸೈಕಿಯಾ. -
ನವದೆಹಲಿ: ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ಆಟಗಾರರ ಹರಾಜು ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಬುಧವಾರ ತಿಳಿಸಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೈಕಿಯಾ, ಕಳೆದ ಮೂರು ವರ್ಷಗಳಲ್ಲಿ ಸೌದಿ ಅರೇಬಿಯಾ, ದುಬೈ ಮತ್ತು ಅಬುಧಾಬಿ ಸೇರಿದಂತೆ ಮೂರು ವಿದೇಶಿ ಸ್ಥಳಗಳಲ್ಲಿ ಐಪಿಎಲ್ ಹರಾಜು ನಡೆದಿದ್ದರೂ, ಈ ಬಾರಿ ಭಾರತದಲ್ಲೇ ಹರಾಜು ಆಯೋಜಿಸಲಾಗುತ್ತಿದೆ ಎಂದು ಖಚಿತಪಡಿಸಿದ್ದಾರೆ.
“ಈ ವರ್ಷ ಸೌದಿ ಅರೇಬಿಯಾ, ದುಬೈ ಮತ್ತು ಅಬುಧಾಬಿ ಸೇರಿದಂತೆ ಮೂರು ವಿದೇಶಿ ಸ್ಥಳಗಳಲ್ಲಿ ಐಪಿಎಲ್ ಟೂರ್ನಿಯ ಹರಾಜು ನಡೆಸಿದ ನಂತರ, ಡಿಸೆಂಬರ್ ತಿಂಗಳಲ್ಲಿ ಗೋವಾದಲ್ಲಿ ಹರಾಜು ಆಯೋಜಿಸಲಿದ್ದೇವೆ,” ಎಂದು ಸೈಕಿಯಾ ತಿಳಿಸಿದ್ದಾರೆ.
IPL 2027: ಕೋಲ್ಕತಾ ನೈಟ್ ರೈಡರ್ಸ್‌ಗೆ ಮುಂದಿನ ನಾಯಕನನ್ನು ಆರಿಸಿದ ಆಕಾಶ್ ಚೋಪ್ರಾ!
ಧರ್ಮಶಾಲಾದಿಂದ ಮೊಹಾಲಿಗೆ ಭಾರತ-ಆಸ್ಟ್ರೇಲಿಯಾ ‘ಎ’ ಪಂದ್ಯ
ಇದೇ ವೇಳೆ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರವರೆಗೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ‘ಎ’ ಮಹಿಳಾ ಮತ್ತು ಆಸ್ಟ್ರೇಲಿಯಾ ‘ಎ’ ಮಹಿಳಾ ತಂಡಗಳ ನಡುವಿನ ಬಹು ದಿನಗಳ ಪಂದ್ಯವನ್ನು ಮೊಹಾಲಿಗೆ ಸ್ಥಳಾಂತರಿಸಲಾಗಿದೆ.
ಧರ್ಮಶಾಲಾದಲ್ಲಿ ನಿರಂತರ ಮಳೆ ಹಾಗೂ ಮೈದಾನದ ಔಟ್‌ಫೀಲ್ಡ್ ಮತ್ತು ಪರಿಸ್ಥಿತಿಗಳು ಅನುಕೂಲಕರವಾಗಿರದ ಹಿನ್ನೆಲೆಯಲ್ಲಿ ಪಂದ್ಯವನ್ನು ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ‘ಎ’ ಮಹಿಳಾ ತಂಡ 236 ರನ್‌ಗಳ ಗುರಿಯನ್ನು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಧರ್ಮಶಾಲಾದಲ್ಲಿ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಕ್ರಿಕೆಟ್ ಚಟುವಟಿಕೆಗಳಿಗೆ ಅಡಚಣೆ ಉಂಟಾಗದಂತೆ ಪಂದ್ಯಗಳ ಸ್ಥಳಾಂತರದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
IPL 2027: ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆಯಬೇಕೆಂದ ಸುರೇಶ್ ರೈನಾ!
“ಧರ್ಮಶಾಲಾದಲ್ಲಿ ನಡೆಯುತ್ತಿರುವ ಹವಾಮಾನ ಪರಿಸ್ಥಿತಿಗಳು ಕ್ರಿಕೆಟ್‌ಗೆ ಅನುಕೂಲಕರವಾಗಿಲ್ಲ. ಅಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಹವಾಮಾನದಿಂದ ಯಾವುದೇ ಅಡಚಣೆ ಉಂಟಾಗದಂತೆ ಮುಂದಿನ ಪಂದ್ಯಗಳನ್ನು ಮೊಹಾಲಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪರಿಶೀಲನೆ
ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಬಿಸಿಸಿಐ ಮತ್ತೊಮ್ಮೆ ಪರಿಶೀಲನೆ ನಡೆಸಲು ಮುಂದಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿಯಮದ ಬಗ್ಗೆ ಚರ್ಚೆ ನಡೆದಿದ್ದು, ಇದೀಗ ಎಲ್ಲಾ ಫ್ರಾಂಚೈಸಿಗಳಿಂದ ಹೊಸ ಅಭಿಪ್ರಾಯಗಳನ್ನು ಪಡೆಯಲು ಬಿಸಿಸಿಐ ಮುಂದಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಪಂದ್ಯದ ಯಾವುದೇ ಹಂತದಲ್ಲಿ ತಂಡಗಳು ಒಬ್ಬ ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನನ್ನು ಕಣಕ್ಕಿಳಿಸಬಹುದಾಗಿದೆ. ಪ್ರಸ್ತುತ ಈ ನಿಯಮವನ್ನು 2027ರವರೆಗೆ ಮುಂದುವರಿಸಲು ನಿಗದಿಪಡಿಸಲಾಗಿದೆ.
ಆದರೆ, ಈ ನಿಯಮಕ್ಕೆ ಹಲವು ಪ್ರಮುಖ ಆಟಗಾರರಿಂದ ವಿರೋಧ ವ್ಯಕ್ತವಾಗಿದೆ. ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಮಾಜಿ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಹಲವು ಆಟಗಾರರು ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.