ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL: ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಯಶಸ್ವಿ ಜೈಸ್ವಾಲ್‌, ಅಸಿತ ಫೆರ್ನಾಂಡೊಗೆ ದಂಡ!

ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ವೇಳೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ಭಾರತ ತಂಡದ ಯಶಸ್ವಿ ಜೈಸ್ವಾಲ್‌ ಮತ್ತು ಶ್ರೀಲಂಕಾದ ಅಸಿತ ಫೆರ್ನಾಂಡೊ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಕ್ರಮ ಕೈಗೊಂಡಿದೆ. ಈ ಇಬ್ಬರೂ ಆಟಗಾರರೊಗೆ ಪಂದ್ಯದ ಸಂಭಾವನೆಯಲ್ಲಿ ಶೇ 25 ರಂದು ದಂಡ ಹಾಗೂ ಒಂದು ಡೀಮೆರಿಟ್‌ ಅಂಕವನ್ನು ನೀಡಲಾಗಿದೆ.

ಕಿರಿಕ್‌ ಮಾಡಿಕೊಂಡಿದ್ದ ಜೈಸ್ವಾಲ್‌, ಫೆರ್ನಾಂಡೊಗೆ ದಂಡ!

ಯಶಸ್ವಿ ಜೈಸ್ವಾಲ್‌-ಅಸಿತ ಫರ್ನಾಂಡೊಗೆ ದಂಡ ವಿಧಿಸಿದ ಐಸಿಸಿ. -

Profile
Ramesh Kote Aug 24, 2026 4:43 PM

ಕೊಲಂಬೊ: ಇಲ್ಲಿನ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ (IND vs SL) ಮೊದಲ ದಿನ ಜಗಳ ಮಾಡಿಕೊಂಡಿದ್ದ ಭಾರತ ತಂಡದ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ (Yashasvi jaiswal) ಮತ್ತು ಶ್ರೀಲಂಕಾ ವೇಗಿ ಅಸಿತ ಫೆರ್ನಾಂಡೊ (Asitha Fernando) ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಶಿಕ್ಷೆಯನ್ನು ಪ್ರಕಟಿಸಿದೆ. ಇಬ್ಬರೂ ಆಟಗಾರರಿಗೆ ಅವರ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದ್ದು, ತಲಾ ಒಂದು ಡಿಮೆರಿಟ್‌ ಪಾಯಿಂಟ್‌ ನೀಡಲಾಗಿದೆ. ಐಸಿಸಿ ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗಾಗಿ ರೂಪಿಸಿರುವ ನೀತಿ ಸಂಹಿತೆಯ ಆರ್ಟಿಕಲ್‌ 2.12 ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮವು ಆಟಗಾರ, ಆಟಗಾರರ ಸಹಾಯಕ ಸಿಬ್ಬಂದಿ, ಅಂಪೈರ್‌, ಮ್ಯಾಚ್‌ ರೆಫರಿ ಅಥವಾ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಪ್ರೇಕ್ಷಕ ಸೇರಿದಂತೆ ಯಾವುದೇ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದೆ.

ಐಸಿಸಿ ಪ್ರಕಟಣೆಯ ಪ್ರಕಾರ, ಲೆವೆಲ್‌-1 ನೀತಿ ಸಂಹಿತೆ ಉಲ್ಲಂಘನೆಗಾಗಿ ಇಬ್ಬರಿಗೂ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ. ಇದರ ಜೊತೆಗೆ ಇಬ್ಬರ ಶಿಸ್ತು ದಾಖಲೆಯಲ್ಲಿ ತಲಾ ಒಂದು ಡಿಮೆರಿಟ್‌ ಪಾಯಿಂಟ್‌ ಸೇರ್ಪಡೆ ಮಾಡಲಾಗಿದೆ. ಇಬ್ಬರೂ ಆಟಗಾರರು ಕಳೆದ 24 ತಿಂಗಳಲ್ಲಿ ಯಾವುದೇ ಹಿಂದಿನ ಅಪರಾಧ ಎಸಗಿರಲಿಲ್ಲ. ಆದರೂ, ಆಟಗಾರ, ಆಟಗಾರರ ಸಹಾಯಕ ಸಿಬ್ಬಂದಿ, ಅಂಪೈರ್‌, ಮ್ಯಾಚ್‌ ರೆಫರಿ ಅಥವಾ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಪ್ರೇಕ್ಷಕ ಸೇರಿದಂತೆ ಯಾವುದೇ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕ ನಡೆಸುವುದಕ್ಕೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್‌ 2.12 ಉಲ್ಲಂಘಿಸಿರುವುದು ಸಾಬೀತಾಗಿದೆ.

IND vs SL: ಭರ್ಜರಿ ಸಿಕ್ಸರ್‌ನಿಂದ ಸೋಲಾರ್‌ ಪ್ಯಾನೆಲ್‌ ಒಡೆದು ಹಾಕಿದ ರಿಷಭ್‌ ಪಂತ್‌! ವಿಡಿಯೊ

ಜೈಸ್ವಾಲ್‌ ಔಟಾದ ಬಳಿಕ ಕಿರಿಕ್‌

ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಅಸಿತ ಫೆರ್ನಾಂಡೊ ಜೈಸ್ವಾಲ್‌ ಅವರನ್ನು ಔಟ್‌ ಮಾಡಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಜೈಸ್ವಾಲ್‌, ಫೆರ್ನಾಂಡೊ ಬಳಿಗೆ ತೆರಳಿ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಫೆರ್ನಾಂಡೊ, ಜೈಸ್ವಾಲ್‌ ಕಡೆಗೆ ತಲೆಯನ್ನು ಮುಂದಕ್ಕೆ ತಂದರು. ಇದಕ್ಕೆ ಪ್ರತಿಯಾಗಿ ಜೈಸ್ವಾಲ್‌ ಕೂಡ ಮುಂದೆ ಬಾಗಿದ್ದರಿಂದ ಇಬ್ಬರ ತಲೆಗಳು ಪರಸ್ಪರ ತಾಕಿಕೊಂಡಿದ್ದವು.

ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡು, ಎಮಿರೇಟ್ಸ್‌ ಐಸಿಸಿ ಎಲೈಟ್‌ ಪ್ಯಾನೆಲ್‌ನ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಪ್ರಸ್ತಾಪಿಸಿದ ಶಿಕ್ಷೆಯನ್ನು ಸ್ವೀಕರಿಸಿದರು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಔಪಚಾರಿಕ ವಿಚಾರಣೆ ನಡೆಸುವ ಅಗತ್ಯ ಎದುರಾಗಲಿಲ್ಲ.



ಈ ಆರೋಪವನ್ನು ಮೈದಾನದಲ್ಲಿದ್ದ ಅಂಪೈರ್‌ಗಳಾದ ಅಹ್ಸಾನ್‌ ರಝಾ ಮತ್ತು ಶರ್ಫುದ್ದೌಲಾ ಇಬ್ನೆ ಶಾಹಿದ್, ಮೂರನೇ ಅಂಪೈರ್‌ ರಾಡ್‌ ಟಕ್ಕರ್‌ ಹಾಗೂ ನಾಲ್ಕನೇ ಅಂಪೈರ್‌ ಪ್ರಗೀತ್‌ ರಂಬುಕವೆಲ್ಲಾ ದಾಖಲಿಸಿದ್ದರು. ಐಸಿಸಿ ಲೆವೆಲ್‌-1 ಉಲ್ಲಂಘನೆಗಳಿಗೆ ಕನಿಷ್ಠ ಅಧಿಕೃತ ಎಚ್ಚರಿಕೆ, ಗರಿಷ್ಠ ಶೇ.50ರಷ್ಟು ಪಂದ್ಯದ ಶುಲ್ಕದ ದಂಡ ಹಾಗೂ ಒಂದು ಅಥವಾ ಎರಡು ಡಿಮೆರಿಟ್‌ ಪಾಯಿಂಟ್‌ಗಳ ಶಿಕ್ಷೆ ವಿಧಿಸಬಹುದಾಗಿದೆ.

IND vs SL: ಅರ್ಧಶತಕದ ಮೂಲಕ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್‌!

ದೊಡ್ಡ ಮೊತ್ತದತ್ತ ಟೀಮ್‌ ಇಂಡಿಯಾ

ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ 53 ಎಸೆತಗಳಲ್ಲಿ 43 ರನ್‌ ಗಳಿಸಿದರು. ಆ ಮೂಲಕ ಉತ್ತಮ ಆರಂಭ ಪಡೆದಿದ್ದರು. ಆದರೆ, ಅವರನ್ನು ಅಸಿತ ಫೆರ್ನಾಂಡೊ ಕ್ಲೀನ್‌ ಬೌಲ್ಡ್‌ ಮಾಡಿದರು. ಆ ಮೂಲಕ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೂ ದೇವದತ್‌ ಪಡಿಕ್ಕಲ್‌ ಹಾಗೂ ಧ್ರುವ್‌ ಜುರೆಲ್‌ ಅವರ ಶತಕಗಳ ಬಲದಿಂದ ಟೀಮ್‌ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 500ರ ರನ್‌ಗಳ ಸನಿಹದಲ್ಲಿದೆ.