ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ರಾಹುಲ್‌-ಜೈಸ್ವಾಲ್‌ ಓಪನರ್ಸ್‌, ಏಕೈಕ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

IND vs AFG one test Match Preview: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಜೂನ್‌ 6 ರಂದು ನವಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

IND vs AFG ಏಕೈಕ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತ vs ಅಫ್ಘಾನಿಸ್ತಾನ ನಡುವಣ ಏಕೈಕ ಟೆಸ್ಟ್‌ ಪಂದ್ಯ. -

Profile
Ramesh Kote Jun 5, 2026 1:28 PM

ಚಂಡೀಗಢ: ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಜೂನ್‌ 6 ರಂದು ಶನಿವಾರ ಆರಂಭವಾಗಲಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಆಫ್ಘನ್‌ ತಂಡದ ಭಾರತದ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಭಾರತ ಹಾಗೂ ಆಫ್ಘನ್‌ ತಂಡಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ಗೆಲವು ಪಡೆದಿತ್ತು.

2026ರ ವರ್ಷದಲ್ಲಿ ಭಾರತ ತಂಡದ ಮೊದಲನೇ ಟೆಸ್ಟ್‌ ಪಂದ್ಯ ಇದಾಗಿದೆ. ಈ ಪಂದ್ಯ 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ವ್ಯಾಪ್ತಿಗೆ ಬರುವುದಿಲ್ಲ. ಕೊನೆಯ ಬಾಗಿ ತವರು ಅಂಗಣದಲ್ಲಿ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಸರಣಿಗಳಲ್ಲಿ ವೈಟ್‌ ವಾಷ್‌ ಆಘಾತವನ್ನು ಅನುಭವಿಸಿತ್ತು. ಇದೀಗ ತವರು ಅಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಮ್‌ಬ್ಯಾಕ್‌ ಮಾಡಲು ಭಾರತ ತಂಡ ಎದುರು ನೋಡುತ್ತಿದೆ.

ʻಕ್ರಾಸ್‌ ಬ್ಯಾಟಿಂಗ್‌ ಶಾಟ್ಸ್‌ ಆಡುವುದನ್ನು ನಿಲ್ಲಿಸಿʼ: ರಿಷಭ್‌ ಪಂತ್‌ಗೆ ಬಾಲ್ಯದ ಕೋಚ್‌ ಸಲಹೆ!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಈಗಾಗಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಶುಭಮನ್‌ ಗಿಲ್‌ ಸಾರಥ್ಯದ ಭಾರತ ಯುವ ತಂಡ, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಆಫ್ಘನ್‌ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಫಾರ್ಮ್‌ ಕಂಡುಕೊಳ್ಳಲು ನೆರವಾಗಬಹುದು. ಈ ಪಂದ್ಯದಲ್ಲಿ ಭಾರತದ ಪರ ಕೆಎಲ್‌ ರಾಹುಲ್‌ ಹಿರಿಯ ಆಟಗಾನಾಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜತೆಗೆ ರಿಷಭ್‌ ಪಂತ್‌ಗೂ ಕೂಡ ಈ ಟೆಸ್ಟ್‌ ಪಂದ್ಯದಲ್ಲಿ ಅಗ್ನಿ ಪರೀಕ್ಷೆ ಎದುರಾಗಲಿದೆ.

ಪಂದ್ಯದ ವಿವರ

ಏಕೈಕ ಟೆಸ್ಟ್‌ ಪಂದ್ಯ

ಭಾರತ vs ಅಫ್ಘಾನಿಸ್ತಾನ

ದಿನಾಂಕ: ಜೂನ್‌ 6, 2026

ಸಮಯ: ಬೆಳಿಗ್ಗೆ 09: 30ಕ್ಕೆ ಆರಂಭ

ಸ್ಥಳ: ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ನವ ಚಂಡೀಗಢ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌

IND vs AFG: ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್‌ ಪಂತ್‌!

ಪಿಚ್‌ ರಿಪೋರ್ಟ್‌

ನವ ಚಂಡೀಗಢದ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಟೆಸ್ಟ್‌ ಪಂದ್ಯವನ್ನು ಆಡಿಸಲಾಗುತ್ತಿದೆ. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿಸಿದ 31ನೇ ಸ್ಥಳ ಇದಾಗಲಿದೆ. ಇಲ್ಲಿನ ಪಿಚ್‌ ಆರಂಭಿಕ ಎರಡು ದಿನಗಳು ವೇಗಿಗಳಿಗೆ ನೆರವು ನೀಡಬಹುದು. ಆದರೆ, ಬಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳಿಗೆ ಇಬ್ಬರಿಗೂ ಸಮತೋಲನವಾಗಿ ನೆರವು ನೀಡಬಹುದು.

ಪಂದ್ಯ ಸಾಗುತ್ತಿದ್ದಂತೆ ಪಿಚ್‌ ಬ್ಯಾಟಿಂಗ್‌ಗೆ ಸುಲಭವಾಗಲಿದೆ. ಪಂದ್ಯದ ಕೊನೆಯವರೆಗೂ ನಡೆದರೆ, ಪಿಚ್‌ ಕೊನೆಯ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಇಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಳ್ಳುವುದು ಉತ್ತಮ, ಏಕೆಂದರೆ ಈ ಅಂಗಣದಲ್ಲಿ ಚೇಸ್‌ ಮಾಡುವುದು ಕಠಿಣವಾಗಬಹುದು.

ಭಾರತ vs ಆಫ್ಘನ್‌ ಮುಖಾಮುಖಿ ದಾಖಲೆ

ಒಟ್ಟು ಆಡಿದ ಪಂದ್ಯಗಳು: 01

ಭಾರತದ ಗೆಲುವು: 01

ಅಫ್ಘಾನಿಸ್ತಾನ: 00

IND vs AFG ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಸ್ಥಾನವನ್ನು ತುಂಬಬಲ್ಲ ನಾಲ್ವರು ಆಟಗಾರರು!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಕೆಎಲ್‌ ರಾಹುಲ್‌, ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌/ದೇವದತ್‌ ಪಡಿಕ್ಕಲ್‌, ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌, ಹರ್ಷ್‌ ದುಬೇ/ ಮಾನವ್‌ ಸುತಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಗುರ್ನೂರ್‌ ಬ್ರಾರ್‌ ಹಾಗೂ ಪ್ರಸಿಧ್‌ ಕೃಷ್ಣ

ಅಫ್ಘಾನಿಸ್ತಾನ: ಅಬದುಲ್‌ ಮಲಿಕ್‌, ಸೆಡಿಕುಲ್ಹಾ ಅಟಲ್‌, ರೆಹಮಾನುಲ್ಹಾ ಗುರ್ಬಾಝ್‌, ಹಷ್ಮತ್‌ವುಲ್ಹಾ ಶಾಹಿಡಿ (ನಾಯಕ), ಅಫ್ಸರ್‌ ಝಝೈ, ರಹಮತ್‌ ಶಾ, ಅಝಮತ್‌ವುಲ್ಹಾ ಒಮರ್ಜಾಯ್‌, ಶರಫುದ್ದೀನ್‌ ಅಶ್ರಫ್‌, ನಂಗೇಲಿಯಾ ಖಾರೋಟೆ, ಖಿಯಾಸ್‌ ಅಹ್ಮದ್‌, ಝಿಔರ್‌ ರಹ್ಮನ್‌