IND vs AUS: 2026-27ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ 2026-27ರ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾರ್ಚ್ 26 ರಂದು ಪ್ರಕಟಿಸಿದೆ. ಈ ಸರಣಿಯು 2027ರ ಜನವರಿ ಮತ್ತು ಫೆಬ್ರವರಿಯಲ್ಲಿ ಭಾರತದ ಐದು ಸ್ಥಳಗಳಲ್ಲಿ ನಡೆಯಲಿವೆ.
ಭಾರತ vs ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ವೇಳಾಪಟ್ಟಿ. -
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ (BGT 2026-27) ಟ್ರೋಫಿ ಟೆಸ್ಟ್ ಸರಣಿ ಸೇರಿದಂತೆ ಭಾರತ ಕ್ರಿಕೆಟ್ ತಂಡದ 2026-27ರ ಸಾಲಿನ ಅಂತಾರಾಷ್ಟ್ರೀಯ ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾರ್ಚ್ 26 ರಂದು ಪ್ರಕಟಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ (AUS vs IND) ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿವೆ. ಭಾರತ ತಂಡದ ತವರು ಸರಣಿಗಳು ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಹಲವು ಒಟ್ಟು 22 ಅಂತಾರಾಷ್ಟ್ರೀಯ ಪಂದ್ಯಗಳು 17 ನಗರಗಳಲ್ಲಿ ನಡೆಯಲಿವೆ.
ಇವುಗಳ ಪೈಕಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ತುಂಬಾ ಮುಖ್ಯವಾಗಿದೆ. ಟೆಸ್ಟ್ ಸರಣಿಯು 2027ರ ಜನವರಿ 21 ರಂದು ನಾಗ್ಪುರದಲ್ಲಿ ಆರಂಭವಾಗಲಿದೆ, ನಂತರ ಎರಡನೇ ಟೆಸ್ಟ್ ಚೆನ್ನೈನಲ್ಲಿ ಮತ್ತು ಮೂರನೇ ಟೆಸ್ಟ್ ಗುವಾಹಟಿಯಲ್ಲಿ ನಡೆಯಲಿದೆ. ನಾಲ್ಕನೇ ಮತ್ತು ಐದನೇ ಟೆಸ್ಟ್‌ಗಳನ್ನು ಕ್ರಮವಾಗಿ ರಾಂಚಿ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಕೊನೆಯ ಬಾರಿ ಭಾರತದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
IPL 2026: ಆರ್‌ಸಿಬಿ ಪರ ಆಡಲಿರುವ ಟ್ರಕ್ ಡ್ರೈವರ್ ಪುತ್ರ ಮಂಗೇಶ್ ಯಾದವ್ ಜೀವನ ಕಥೆ!
2027ರ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದ ವೇಳಾಪಟ್ಟಿ
ಮೊದಲನೇ ಟೆಸ್ಟ್: ಜನವರಿ 21–25 – ನಾಗ್ಪುರ (ಬೆಳಿಗ್ಗೆ 9:30)
2ನೇ ಟೆಸ್ಟ್: ಜನವರಿ 29–ಫೆಬ್ರವರಿ 2 – ಚೆನ್ನೈ (ಬೆಳಿಗ್ಗೆ 9:30)
3ನೇ ಟೆಸ್ಟ್: ಫೆಬ್ರವರಿ 11–15 – ಗುವಾಹಟಿ (ಬೆಳಿಗ್ಗೆ 9:00)
4ನೇ ಟೆಸ್ಟ್: ಫೆಬ್ರವರಿ 19–23 – ರಾಂಚಿ (ಬೆಳಿಗ್ಗೆ 9:30)
5ನೇ ಟೆಸ್ಟ್: ಫೆಬ್ರವರಿ 27–ಮಾರ್ಚ್ 3 – ಅಹಮದಾಬಾದ್ (ಬೆಳಿಗ್ಗೆ 9:30)
ಇದೀಗ, ಕ್ರಿಕೆಟ್ ಆಸ್ಟ್ರೇಲಿಯಾ 2026-27 ಅಂತಾರಾಷ್ಟ್ರೀಯ ಕ್ಯಾಲೆಂಡರ್ ಅನ್ನು ಈಗಾಗಲೇ ಪ್ರಕಟಿಸಿದೆ, ಭಾರತದ ಪ್ರವಾಸಕ್ಕೂ ಮುನ್ನ ಆಸೀಸ್‌ಗೆ ಹೆಚ್ಚಿನ ಸಮಯವಿಲ್ಲ. ಆಸ್ಟ್ರೇಲಿಯಾ ತಂಡವು ಡಿಸೆಂಬರ್ ಮತ್ತು ಮಾರ್ಚ್ ನಡುವಿನ 14 ವಾರಗಳ ಅವಧಿಯಲ್ಲಿ 10 ಟೆಸ್ಟ್‌ಗಳನ್ನು ಆಡಲು ವೇಳಾಪಟ್ಟಿ ಮಾಡಿಕೊಂಡಿದೆ, ಇದು ಅವರ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಬೇಡಿಕೆಯಿರುವ ಅವಧಿಗಳಲ್ಲಿ ಒಂದಾಗಿದೆ.
Presenting the fixtures for #TeamIndia's (Senior Men) international home season 2026-27 🗓️ 👉
— BCCI (@BCCI) March 26, 2026
It all begins with the limited-overs series against West Indies in September 2026 👌 pic.twitter.com/7qCnMiShvB
"ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್ ಮತ್ತು ನೇಥನ್ ಲಯಾನ್ ಅವರಂತಹ ಆಟಗಾರರು ಇನ್ನೂ ಭಾರತದಲ್ಲಿ ಬಾರ್ಡರ್-ಗವಾಸ್ಕರ್ ಸ್ಟ್ರೋಫಿ ಗೆದ್ದಿಲ್ಲ. ಹಾಗಾಗಿ ಅವರು ಗೆಲ್ಲಲು ಇದು ಕೊನೆಯ ಪ್ರವಾಸವಾಗಿದೆ.ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಟೆಸ್ಟ್ ಮಾರ್ಚ್ 11 ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದೆ,” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ಹೇಳಿದೆ.
IPL 2026: ʻ450 ಕೋಟಿಯಿಂದ 16,500 ಕೋಟಿ ರುʼ-ಆರ್‌ಸಿಬಿ ಮಾರಾಟದ ಬಗ್ಗೆ ವಿಜಯ್ ಮಲ್ಯ ಪ್ರತಿಕ್ರಿಯೆ!
"ಸ್ಟಾರ್ಕ್, ಕಮಿನ್ಸ್ ಮತ್ತು ಹೇಝಲ್‌ವುಡ್ ಅವರನ್ನು ಐಪಿಎಲ್‌ನ ಆರಂಭಿಕ ಸುತ್ತಿನಿಂದ ತಡೆಹಿಡಿಯುವ ನಿರ್ಧಾರವು, ಕೆಲಸದ ಹೊರೆಗಳನ್ನು ನಿರ್ವಹಿಸುವ ಮತ್ತು 2026-27ರ ವೇಳಾಪಟ್ಟಿಯ ಬೇಡಿಕೆಗಳಿಗೆ ಪ್ರಮುಖ ಬೌಲರ್‌ಗಳು ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಕ್ರಿಕೆಟ್ ಆಸ್ಟ್ರೇಲಿಯಾದ ಉದ್ದೇಶವನ್ನು ಒತ್ತಿಹೇಳುತ್ತದೆ," ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.