ಕೊಹ್ಲಿ, ರೋಹಿತ್‌ಗೆ ಹೆಚ್ಚಿನ ಒಡಿಐ ಪಂದ್ಯಗಳು; 2026-27ರ ಸಾಲಿನ ತವರು ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!
ಬಿಸಿಸಿಐ ಮಾರ್ಚ್ 26ರಂದು ಗುರುವಾರ ಭಾರತ ಪುರುಷರ ಹಿರಿಯರ ತಂಡದ 2026-27ರ ತವರು ಸೀಸನ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಅವಧಿಯಲ್ಲಿ ಒಟ್ಟು ಒಂಬತ್ತು ಏಕದಿನ ಪಂದ್ಯಗಳು (ODIs) ನಡೆಯಲಿದ್ದು, ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅವಕಾಶಗಳು ಲಭ್ಯವಾಗಲಿವೆ.
ಭಾರತ ತಂಡದ ತವರು ಸೀಸನ್‌ನ ವೇಳಾಪಟ್ಟಿ. -
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026-27ರ ತವರು ಸೀಸನ್‌ನಲ್ಲಿ ಭಾರತ ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕಾಗಿ ಒಟ್ಟು ಒಂಬತ್ತು ಏಕದಿನ ಪಂದ್ಯಗಳನ್ನು ಘೋಷಿಸಿದೆ. ಆ ಮೂಲಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಕಣ್ತುಂಬಿಸಿಕೊಳ್ಳಲು ಹೆಚ್ಚಿನ ಅವಕಾಶ ಲಭ್ಯವಾಗಲಿವೆ. ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿರುವ ಈ ಇಬ್ಬರು ಸೂಪರ್‌ಸ್ಟಾರ್ ಆಟಗಾರರು ಈಗ ಏಕದಿನ ಕ್ರಿಕೆಟ್ ಕಡೆಗೆ ಮಾತ್ರ ಗಮನಹರಿಸಿದ್ದು, ಆಫ್ರಿಕಾದಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಭಾರತ ತಂಡದ ತವರು ಋತು ತಿರುವನಂತಪುರಂನಲ್ಲಿ ಆರಂಭವಾಗಲಿದ್ದು, ಮೊದಲಿಗೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಒಟ್ಟಾರೆಯಾಗಿ, ಭಾರತ ತಂಡ ಒಂಬತ್ತು ಏಕದಿನ , ಎಂಟು ಟಿ20ಐ ಮತ್ತು ಐದು ಟೆಸ್ಟ್ ಪಂದ್ಯಗಳನ್ನು ಆಡಲು ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಈ ಟೆಸ್ಟ್ ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿದೆ. 2026-27ರ ತವರು ಸೀಸನ್‌ನಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಲಿವೆ.
IND vs AUS: 2026-27ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದ ಬಿಸಿಸಿಐ!
ಐಪಿಎಲ್ ನಂತರ, ಭಾರತ ತಂಡ 2025-26 ಸೀಸನ್‌ನ ಭಾಗವಾಗಿ ಜೂನ್ 6ರಿಂದ 20ರವರೆಗೆ ಅಫ್ಘಾನಿಸ್ತಾನ ವಿರುದ್ಧ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ಆತಿಥ್ಯ ವಹಿಸಲಿದೆ. ತವರು ಸರಣಿಯ ನಂತರ, ಜುಲೈನಲ್ಲಿ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದು, ಇಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ನಂತರ ಅಕ್ಟೋಬರ್–ನವೆಂಬರ್ ಅವಧಿಯಲ್ಲಿ ನ್ಯೂಜಿಲೆಂಡ್‌ಗೆ ತೆರಳಿ ಎರಡು ಟೆಸ್ಟ್, ಮೂರು ಒಡಿಐ ಮತ್ತು ಐದು ಟಿ20ಐ ಪಂದ್ಯಗಳನ್ನು ಆಡಲಿದೆ.
ಈ ವೇಳಾಪಟ್ಟಿಯ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮುಂದಿನ 12 ತಿಂಗಳಲ್ಲಿ ಒಟ್ಟು 18 ಏಕದಿನ ಪಂದ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Presenting the fixtures for #TeamIndia's (Senior Men) international home season 2026-27 🗓️ 👉
— BCCI (@BCCI) March 26, 2026
It all begins with the limited-overs series against West Indies in September 2026 👌 pic.twitter.com/7qCnMiShvB
2026-27ರ ಸಾಲಿನ ಭಾರತ ತಂಡದ ತವರು ವೇಳಾಪಟ್ಟಿ
ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ
ಏಕದಿನ ಸರಣಿ
1ನೇ ಏಕದಿನ ಪಂದ್ಯ – ಸೆಪ್ಟೆಂಬರ್ 27, 2026 – ತಿರುವನಂತಪುರ – ಮಧ್ಯಾಹ್ನ 2:00
2ನೇ ಏಕದಿನ ಪಂದ್ಯ – ಸೆಪ್ಟೆಂಬರ್ 30, 2026 – ಗುವಾಹಟಿ – ಮಧ್ಯಾಹ್ನ 2:00
3ನೇ ಏಕದಿನ ಪಂದ್ಯ – ಅಕ್ಟೋಬರ್ 3, 2026 – ನ್ಯೂ ಚಂಡೀಗಢ – ಮಧ್ಯಾಹ್ನ 2:00
ಟಿ20ಐ ಸರಣಿ
1ನೇ ಟಿ20ಐ – ಅಕ್ಟೋಬರ್ 6, 2026 – ಲಖನೌ – ಸಂಜೆ 7:00
2ನೇ ಟಿ20ಐ – ಅಕ್ಟೋಬರ್ 9, 2026 – ರಾಂಚಿ – ಸಂಜೆ 7:00
3ನೇ ಟಿ20ಐ – ಅಕ್ಟೋಬರ್ 11, 2026 – ಇಂದೋರ್ – ಸಂಜೆ 7:00
4ನೇ ಟಿ20ಐ – ಅಕ್ಟೋಬರ್ 14, 2026 – ಹೈದರಾಬಾದ್ – ಸಂಜೆ 7:00
5ನೇ ಟಿ20ಐ – ಅಕ್ಟೋಬರ್ 17, 2026 – ಬೆಂಗಳೂರು – ಸಂಜೆ 7:00
IPL 2026: ಆರ್‌ಸಿಬಿ ಪರ ಆಡಲಿರುವ ಟ್ರಕ್ ಡ್ರೈವರ್ ಪುತ್ರ ಮಂಗೇಶ್ ಯಾದವ್ ಜೀವನ ಕಥೆ!
ಶ್ರೀಲಂಕಾ ತಂಡದ ಭಾರತ ಪ್ರವಾಸ
ಏಕದಿನ ಸರಣಿ
1ನೇ ಏಕದಿನ – ಡಿಸೆಂಬರ್ 13, 2026 – ದೆಹಲಿ – ಮಧ್ಯಾಹ್ನ 2:00
2ನೇ ಏಕದಿನ – ಡಿಸೆಂಬರ್ 16, 2026 – ಬೆಂಗಳೂರು – ಮಧ್ಯಾಹ್ನ 2:00
3ನೇ ಏಕದಿನ – ಡಿಸೆಂಬರ್ 19, 2026 – ಅಹಮದಾಬಾದ್ – ಮಧ್ಯಾಹ್ನ 2:00
ಟಿ20ಐ ಸರಣಿ
1ನೇ ಟಿ20ಐ – ಡಿಸೆಂಬರ್ 22, 2026 – ರಾಜ್‌ಕೋಟ್ – ಸಂಜೆ 7:00
2ನೇ ಟಿ20ಐ – ಡಿಸೆಂಬರ್ 24, 2026 – ಕಟಕ್ – ಸಂಜೆ 7:00
3ನೇ ಟಿ20ಐ – ಡಿಸೆಂಬರ್ 27, 2026 – ಪುಣೆ – ಸಂಜೆ 7:00
IPL 2026: ಟಿ20 ಕ್ರಿಕೆಟ್‌ನಲ್ಲಿ ಸಕ್ಸಸ್ ಆಗಲು ರಿಷಭ್ ಪಂತ್‌ಗೆ ಡುಪ್ಲೆಸಿಸ್ ಮಹತ್ವದ ಸಲಹೆ!
ಜಿಂಬಾಬ್ವೆ ತಂಡದ ಭಾರತ ಪ್ರವಾಸ
ಏಕದಿನ ಸರಣಿ
1ನೇ ಏಕದಿನ – ಜನವರಿ 3, 2027 – ಕೋಲ್ಕತಾ – ಮಧ್ಯಾಹ್ನ 2:00
2ನೇ ಏಕದಿನ – ಜನವರಿ 6, 2027 – ಹೈದರಾಬಾದ್ – 2:00 PM
3ನೇ ಏಕದಿನ – ಜನವರಿ 9, 2027 – ಮುಂಬೈ – ಮಧ್ಯಾಹ್ನ 2:00
ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ
1ನೇ ಟೆಸ್ಟ್ – ಜನವರಿ 21–25, 2027 – ನಾಗ್ಪುರ – ಬೆಳಿಗ್ಗೆ 9:30
2ನೇ ಟೆಸ್ಟ್ – ಜನವರಿ 29–ಫೆಬ್ರವರಿ 2, 2027 – ಚೆನ್ನೈ – ಬೆಳಿಗ್ಗೆ 9:30
3ನೇ ಟೆಸ್ಟ್ – ಫೆಬ್ರವರಿ 11–15, 2027 – ಗುವಾಹಟಿ – ಬೆಳಿಗ್ಗೆ 9:00
4ನೇ ಟೆಸ್ಟ್ – ಫೆಬ್ರವರಿ 19–23, 2027 – ರಾಂಚಿ – ಬೆಳಿಗ್ಗೆ 9:30
5ನೇ ಟೆಸ್ಟ್ – ಫೆಬ್ರವರಿ 27–ಮಾರ್ಚ್ 3, 2027 – ಅಹಮದಾಬಾದ್ – ಬೆಳಿಗ್ಗೆ 9:30