ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ashitha Maria:`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು, ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ನಟಿ ಆಶಿತಾ

Sarse Seraga Sarse: ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್‌ ಆಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ನೋರಾ ಫತೇಹಿ ಕೂಡ ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟಿ ಆಶಿತಾ ಮಾರಿಯಾ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸರ್ಸೆ ಸೆರಗ ಸರ್ಸೆ ಹಾಡಿಗೆ ನನ್ನನ್ನೇ ತೆಗೊಳ್ಬೋದಿತ್ತು.‌ ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ಎಂದು ನೇರವಾಗಿ ಮಾತನಾಡಿದ್ದಾರೆ.

`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು: ನಟಿ ಆಶಿತಾ

ನಟಿ ಆಶಿತಾ -

Yashaswi Devadiga
Yashaswi Devadiga Mar 26, 2026 7:12 PM

ʻತವರಿನ ಸಿರಿʼ ಖ್ಯಾತಿಯ ನಟಿ ಆಶಿತಾ ಮಾರಿಯಾ (ashitha maria) ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ (Social Media) ಆಕ್ಟೀವ್‌ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್‌ ಆಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' (KD movie) ಚಿತ್ರದ 'ಸರ್ಸೆ ಸರ್ಸೆ' (Sarse Sarse Song) ಸಾಂಗ್ ವಿವಾದ ಸೃಷ್ಟಿಸಿತ್ತು. ನೋರಾ ಫತೇಹಿ ಕೂಡ ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟಿ ಆಶಿತಾ ಮಾರಿಯಾ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸರ್ಸೆ ಸೆರಗ ಸರ್ಸೆ ಹಾಡಿಗೆ ನನ್ನನ್ನೇ ತೆಗೊಳ್ಬೋದಿತ್ತು.‌ ಆ ಹಾಡಿನಲ್ಲಿ (Song) ಅಂಥ ತಪ್ಪೇನಿತ್ತು? ಎಂದು ನೇರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: Amruthadhaare serial: ಜೇಡಿಯಿಂದ ಮಲ್ಲಿ ಬಾಳು ಕಾಪಾಡ್ತಾನಾ ಗೌತಮ್? ಮಕ್ಕಳ ಮಾತಿಗೆ ಓಗೊಡಲೇಬೇಕು ಭೂಮಿ!

ವಿವರಣೆ ಕೊಟ್ಟೇ ಕೊಡ್ತಾರೆ

ನಟಿ ಮಾತನಾಡಿ, `ನೋರಾ ತುಂಬ ಅದ್ಭುತ ಡ್ಯಾನ್ಸರ್‌ ಅದರಲ್ಲಿ ಡೌಟ್‌ ಇಲ್ಲ. ಅವರ ಕಲೆಗೆ ಯಾವುದೇ ರೀತಿ ಜಡ್ಜ್‌ಮೆಂಟ್‌ ಕೊಡಲ್ಲ. ಇನ್ನು ಸಿನಿಮಾ ಅಂತ ಬಂದಾಗ ವಿವರಣೆ ಕೊಟ್ಟೇ ಕೊಡ್ತಾರೆ. ಪ್ರತಿಯೊಂದು ಸಾಹಿತ್ಯವನ್ನೂ ಹೇಳ್ತಾರೆ. ಪ್ರೇಮ್‌ ಅವರೇ ಹೇಳಿದ್ದಾರೆ. ಬಾಟಲ್‌, ಉಪ್ಪಿನಕಾಯಿ ಇಟ್ಟುಕೊಂಡು ಮಾಡಿದೇ ಅಂದಿದ್ದಾರೆ. ಹೀಗಾಗಿ ನೋರಾಗೂ ಸೇಮ್‌ ವಿವರಣೆ ಇತ್ತೇನೋ. ಇನ್ನು ನೋರಾ ಕೂಡ ಎಕ್ಸ್‌ಪ್ರೆಶನ್‌ ಕೊಟ್ಟಿದ್ದಾರೆ.

ಪ್ರೇಮ್‌ ಅವರು ಸಾಕಷ್ಟು ಒಳ್ಳೊಳ್ಳೆ ಸಾಹಿತ್ಯವನ್ನೂ ಬರೆದಿದ್ದಾರೆ. ಆಗ ಕೂಡ ವಿವರಣೆ ಕೊಟ್ಟಿದ್ದಾರೆ. ಒಂದು ಯುವಕರಿಗಾಗಿ ಮಾಡಿದ ಹಾಡಿದು. ಅದೇನೂ ತಪ್ಪಿಲ್ಲ. ಸಿನಿಮಾ ಅಂದರೆ ಹಾಗೇ. ಆದರೆ ಅಲ್ಲಿ ಯಾರದೂ ತಪ್ಪಿಲ್ಲ. ಸ್ವಲ್ಪ misunderstanding ಆಗಿದೆ ಅಷ್ಟೇ ಎಂದಿದ್ದಾರೆ. ನಾವು ಕೂಡ ಮುಂಚಿನಿಂದಲೂ ಡ್ಯಾನ್ಸರ್ಸೇ. ನಮ್ಮನ್ನೂ ತೆಗದುಕೊಳ್ಳಬಹುದಾಗಿತ್ತು. ಇನ್ನು ಮಸ್ತ್‌ ಮಲೈಕಾ ನೋಡಿ ನಮ್ಮವರಿಗೇ ಚಾನ್ಸ್‌ ಕೊಟ್ಟಿದ್ದಾರೆ. ಖುಷಿ ಆಗತ್ತೆ ನೋಡುವಾಗʼ ಎಂದಿದ್ದಾರೆ.



ಅವಕಾಶ ಕೊಟ್ಟರೆ ಮಾತ್ರ ಬೆಳೆಯೋಕೆ ಸಾಧ್ಯ

ʻಹಲವು ಜನ ನನ್ನನ್ನು ಕೇಳ್ತಾರೆ. ಯಾಕೆ ನೀವು ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಹೋಗಬಾರದು? ಡ್ಯಾನ್ಸ್‌ ಗೊತ್ತಲ್ವಾ? ಅಂತ ಕೇಳ್ತಾರೆ. ಆದರೆ ಅದು ಪ್ರೊಡಕ್ಷನ್‌ ಹೌಸ್‌ಗೆ ಗೊತ್ತಿರಬೇಕು.ಅವರು TRP ಹಿಂದೆ ಹೋಗ್ತಾರೆ. ಗೊತ್ತಿರೂ ಫೇಸ್‌ ಅವರಿಗೆ ಬೇಕು. ನಾನು ಹೇಳೋದು ಅವಕಾಶ ಕೊಟ್ಟರೆ ಮಾತ್ರ ಬೆಳೆಯೋಕೆ ಆಗೋದು. ಮಿಕ್ಕಿದವರು ಕೂಡ ಕಲಾವಿದರೇʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sanjay Dutt: ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’ ಫಸ್ಟ್ ಲುಕ್ ಪೋಸ್ಟರ್ ಔಟ್‌!

ಇದಕ್ಕೂ ಮುಂಚೆ ಪ್ರೇಮ್‌ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು, ನೋರಾ ಫತೇಹಿ ಮಾತನಾಡಿರುವುದು ಬಹಳ ತಪ್ಪು. ಯಾವುದೇ ನಟ, ನಟಿ ಸಾಂಗ್ ಕೇಳ್ತಾರೆ, ಅರ್ಥ ತಿಳ್ಕೊತ್ತಾರೆ.. ಸಾಹಿತ್ಯ ಗೊತ್ತಿಲ್ಲದೇ ಎಕ್ಸ್‌ಪ್ರೆಷನ್ ಹೇಗೆ ಬರುತ್ತೆ. ಯಾಕೆ ಆ ರೀತಿ ಮಾತಾಡಿದ್ರೋ ಗೊತ್ತಿಲ್ಲ.. ವಿವಾದ ಆಗ್ತಿದೆ ಅಂತ ತಪ್ಪಿಸಿಕೊಳ್ಳಲು ಆ ರೀತಿ ಹೇಳಿರಬಹುದು.. ಮೊನ್ನೆ ಸಾಂಗ್ ರಿಲೀಸ್ ಆದಾಗಲೂ ಬಹಳ ಖುಷಿ ಆಯ್ತು ಅಂತ ಮಾತನಾಡಿದ್ರು.. ವಿವಾದ ಬೇಡ ಅಂತ ನೊಂದುಕೊಂಡು ಹೀಗೆ ಹೇಳಿರಬಹುದು ಎಂದು ಪ್ರೇಮ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.