ʻನನಗೆ ಏನು ಬೇಕೋ ಅದನ್ನು ಮಾಡುತ್ತೇನೆʼ-ತಮ್ಮ ಬ್ಯಾಟಿಂಗ್ ಸಕ್ಸಸ್‌ಗೆ ಕಾರಣ ತಿಳಿಸಿದ ವಾಷಿಂಗ್ಟನ್ ಸುಂದರ್!
Washington Sundar statement: ಆಸ್ಟ್ರೇಲಿಯಾ ವಿರುದ್ದ ಮೂರನೇ ಟಿ20ಐ ಪಂದ್ಯದಲ್ಲಿ ಅಜೇಯ 49 ರನ್ ಗಳಿಸಿದ ವಾಷಿಂಗ್ಟನ್ ಸುಂದರ್, ಭಾರತ ತಂಡವನ್ನು ಗೆಲ್ಲಿಸಿದರು. ಪಂದ್ಯದ ಬಳಿಕ ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಇವರು 23 ಎಸೆತಗಳಲ್ಲಿ ಅಜೇಯ 47 ರನ್ ಸಿಡಿಸಿದರು.
ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಕಾರಣ ತಿಳಿಸಿದ ವಾಷಿಂಗ್ಟನ್ ಸುಂದರ್. -
ಹೊಬರ್ಟ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ(IND vs AUS) ಸ್ಪೋಟಕ ಅರ್ಧಶತಕ ಬಾರಿಸಿದ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar), ಭಾರತ ತಂಡದ 5 ವಿಕೆಟ್ ಗೆಲುವಿಗೆ ನೆರೆವು ನೀಡಿದರು. ಈ ಪಂದ್ಯದ ಗೆಲುವಿನ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ (India) ಟಿ20ಐ ಸರಣಿಯಲ್ಲಿ ಮೂರು ಪಂದ್ಯಗಳ ಅಂತ್ಯಕ್ಕೆ 1-1 ಸಮಬಲ ಕಾಯ್ದುಕೊಂಡಿತು. ಈ ಪಂದ್ಯದ ಬಳಿಕ ಮಾತನಾಡಿದ ವಾಷಿಂಗ್ಟನ್ ಸುಂದರ್, ಬ್ಯಾಟಿಂಗ್‌ನಲ್ಲಿ ತಾವು ಅನುಸರಿಸಿದ ಗೇಮ್ ಪ್ಲ್ಯಾನ್ ಏನೆಂದು ಬಹಿರಂಗಪಡಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಸ್ಪಿನ್ ಆಲ್‌ರೌಂಡರ್ ಆಗಿದ್ದು, ಅಗತ್ಯವಿದ್ದಾಗ ಬ್ಯಾಟಿಂಗ್‌ನಲ್ಲಿಯೂ ನೆರವಾಗಿದ್ದಾರೆ. ಅಗ್ರ ದರ್ಜೆಯ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಬಲ್ಲ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅದರಂತೆ ಹೊಬರ್ಟ್‌ನಲ್ಲಿ ಭಾನುವಾರ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಆಸೀಸ್ ನೀಡಿದ್ದ 187 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು, ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಸಿಡಿಸಿದರು.
IND vs AUS- ಅರ್ಷದೀಪ್, ವಾಷಿಂಗ್ಟನ್ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!
23 ಎಸೆತಗಳಲ್ಲಿ 49 ರನ್ ಸಿಡಿಸಿದ ವಾಷಿಂಗ್ಟನ್
ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಬ್ಯಾಟಿಂಗ್‌ನಲ್ಲಿ ಸಿಕ್ಕ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡರು. ಅವರು ಆಡಿದ ಕೇವಲ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 49 ರನ್‌ಗಳನ್ನು ಬಾರಿಸಿದರು. ಆ ಮೂಲಕ ಟೀಮ್ ಇಂಡಿಯಾ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 188 ರನ್ ಗಳಿಸಿ ಗೆಲುವಿನ ದಡ ಸೇರಿತು.
ಫಲಿತಾಂಶವನ್ನು ಚೇಸ್ ಮಾಡುವುದಿಲ್ಲ
ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಾಷಿಂಗ್ಟನ್ ಸುಂದರ್, "ನನ್ನ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ಒಂದು ಸಂಗತಿ ಏನೆಂದರೆ ನಾನು ಫಲಿತಾಂಶವನ್ನು ಚೇಸ್ ಮಾಡುವುದಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಸನ್ನಿವೇಶ, ಕಂಡೀಷನ್ಸ್ ಹಾಗೂ ಅಗತ್ಯವನ್ನು ಗಮನಿಸಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ. ಇದು ನನ್ನ ಮನಸಿನಲ್ಲಿ ಸ್ಪಷ್ಟವಾಗಿದೆ ಹಾಗೂ ನಾನು ಇದನ್ನು ನಿಜವಾಗಿಯೂ ಆನಂದಿಸುತ್ತೇನೆ. ಬೌಲಿಂಗ್‌ನಲ್ಲಿ ನಾನು ಏನೂ ಮಾಡಿಲ್ಲ ಹಾಗಾಗಿ, ಬ್ಯಾಟಿಂಗ್‌ನಲ್ಲಿ ನಾನು ಪ್ರದರ್ಶನವನ್ನು ತೋರಬೇಕೆಂದು ಯೋಚನೆ ಮಾಡಿದರೆ, ಇದರಿಂದ ನಾನು ಆಟವನ್ನು ಆನಂದಿಸಲು ಆಗುವುದಿಲ್ಲ. ಸಾಧ್ಯವಾದಷ್ಟು ನನ್ನ ಪ್ರಕ್ರಿಯೆಗಳನ್ನು ಅನುಸರಿಸಿ, ತಂಡಕ್ಕೆ ಅಗತ್ಯವಾಗಿರುವುದನ್ನು ಮಾಡುತ್ತೇನೆ. ಇದು ಮಾತ್ರ ನನಗೆ ಆನಂದವನ್ನು ನೀಡುತ್ತದೆ," ಎಂದು ತಿಳಿಸಿದ್ದಾರೆ.
Game. Set. Done ✅
— BCCI (@BCCI) November 2, 2025
Washington Sundar (49*) and Jitesh Sharma (22*) guide #TeamIndia to a 5-wicket victory in Hobart. 🙌
Scorecard ▶https://t.co/X5xeZ0LEfC #AUSvIND | @Sundarwashi5 | @jiteshsharma_ pic.twitter.com/gRXlryFeEE
ನನ್ನ ಆಟವನ್ನು ನಾನು ಆನಂದಿಸುತ್ತೇನೆ
"ಇವತ್ತು (ಭಾನುವಾರ) ನನ್ನ ಬ್ಯಾಟಿಂಗ್ ಅವಕಾಶಕ್ಕಾಗಿ ತರಾರಿ ನಡೆಸಿದ್ದೆ. ಚೆಂಡನ್ನು ಹತ್ತಿರದಿಂದ ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡುವುದು ನನ್ನ ಗುರಿಯಾಗಿತ್ತು. ಯಾವುದರ ಬಗ್ಗೆಯೂ ನಾನು ಜಾಸ್ತಿ ಯೋಚನೆ ಮಾಡಲಿಲ್ಲ. ಇದರ ಬದಲು ಚೆಂಡನ್ನು ಹಾಗೂ ಅದನ್ನು ಆನಂದಿಸುವುದಾಗಿತ್ತು. ದೇವರು ಇಂದು ತುಂಬಾ ದಯಾಳು," ಎಂದು ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.
"ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ಒಂದು ದೊಡ್ಡ ಗೌರವ. ನನಗೆ ಯಾವುದೇ ಅವಕಾಶ ಬಂದರೂ, ನಾನು ಅದಕ್ಕೆ ಸಿದ್ಧನಾಗಿರಲು ಬಯಸುತ್ತೇನೆ - ಅದು ನಾನು ಪ್ರತಿದಿನ ಹೊಂದಿರುವ ಮನಸ್ಥಿತಿ. ಈ ಮಟ್ಟದಲ್ಲಿ ಆಡುವುದು ತುಂಬಾ ಖುಷಿ ನೀಡುತ್ತದೆ ಮತ್ತು ನಾನು ಅದನ್ನು ಆನಂದಿಸುತ್ತಲೇ ಇರಲು ಬಯಸುತ್ತೇನೆ," ಎಂದರು.