ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಒಡಿಐ ನಾಯಕನಾದ ಬಳಿಕ ರೋಹಿತ್‌ ಶರ್ಮಾರನ್ನು ಭೇಟಿಯಾದ ಶುಭಮನ್‌ ಗಿಲ್‌!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಕ್ಟೋಬರ್‌ 19 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಸರಣಿಯ ನಿಮಿತ್ತ ಭಾರತ ತಂಡ, ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ಇದಕ್ಕೂ ಮುನ್ನ ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಅವರು ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಭೇಟಿ ಮಾಡಿದರು.

IND vs AUS: ರೋಹಿತ್‌ ಶರ್ಮಾರನ್ನು ಭೇಟಿಯಾದ ಶುಭಮನ್‌ ಗಿಲ್‌!

ರೋಹಿತ್‌ ಶರ್ಮಾರನ್ನು ಭೇಟಿಯಾದ ಶುಭಮನ್‌ ಗಿಲ್‌. -

Profile Ramesh Kote Oct 15, 2025 9:34 PM

ನವದೆಹಲಿ: ಭಾರತ ಕ್ರಿಕೆಟ್ ತಂಡ ಅಕ್ಟೋಬರ್ 19 ರಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು (IND vs AUS) ಆಡಲಿದೆ. ಈ ಸರಣಿಗಾಗಿ ಆಟಗಾರರು ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಮೊದಲ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಂತರ ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಇನ್ನುಳಿದ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಶುಭಮನ್ ಗಿಲ್ (Shubman Gill) ಭಾರತ ಏಕದಿನ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ರೋಹಿತ್ ಶರ್ಮಾ(Rohit Sharma) ಈ ಜವಾಬ್ದಾರಿಯನ್ನು ಹೊಂದಿದ್ದರು. ಈ ಸರಣಿಗೆ ತಂಡವನ್ನು ಘೋಷಿಸುವಾಗ, ರೋಹಿತ್ ಬದಲಿಗೆ ಗಿಲ್ ಅವರನ್ನು ಏಕದಿನ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಆಯ್ಕೆದಾರರು ಪ್ರಕಟಿಸಿದ್ದರು.

ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹೊಸ ನಾಯಕ ಶುಭಮನ್ ಗಿಲ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಈ ಕ್ಷಣವನ್ನು ಸೆರೆಹಿಡಿದಿರುವ ವಿಡಿಯೊವನ್ನು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ವಿಡಿಯೊದಲ್ಲಿ, ಶುಭಮನ್ ಗಿಲ್ ಹಿಂದಿನಿಂದ ಬಂದು ಅವರ ಭುಜದ ಮೇಲೆ ಕೈ ಇಟ್ಟಾಗ ರೋಹಿತ್ ಶರ್ಮಾ ಏನೋ ಮಾಡುತ್ತಿದ್ದರು. ರೋಹಿತ್ ಹಿಂತಿರುಗಿ ನೋಡಿ, "ಹೇ ಹೀರೋ, ಹೇಗಿದ್ದೀಯ ಸಹೋದರ?" ಎಂದು ಹೇಳಿದರು. ಇಬ್ಬರೂ ಮುಗುಳ್ನಗುತ್ತಾ ಪರಸ್ಪರ ಅಪ್ಪಿಕೊಂಡರು.

IND vs AUS: ಮೊದಲ ಬ್ಯಾಚ್‌ನಲ್ಲಿ ಆಸೀಸ್‌ಗೆ ತೆರಳಿದ ಕೊಹ್ಲಿ, ರೋಹಿತ್‌, ರಾಹುಲ್‌

ನಂತರ ಶುಭಮನ್ ಗಿಲ್ ತಂಡದ ಬಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿಯಾದರು. ರೋಹಿತ್ ಅವರಂತೆಯೇ ವಿರಾಟ್ ಕೂಡ ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಹೊಸ ಉಪನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಗಿಲ್ ಬಂದು ಕೊಹ್ಲಿಯೊಂದಿಗೆ ಕೈಕುಲುಕಿದರು, ಅವರು ಕೊಹ್ಲಿಯ ಬೆನ್ನನ್ನು ತಟ್ಟಿದರು. ತಮ್ಮ ಉಪನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಭೇಟಿಯಾದ ನಂತರ, ಗಿಲ್ ಹಿಂತಿರುಗಿದರು.

IND vs AUS: ಆಸ್ಟ್ರೇಲಿಯಾದ ಜನತೆಗೆ ರೋಹಿತ್-ಕೊಹ್ಲಿ ನೋಡಲು ಇದು ಕೊನೆಯ ಅವಕಾಶ: ಪ್ಯಾಟ್ ಕಮ್ಮಿನ್ಸ್

ಏಕದಿನ ವಿಶ್ವಕಪ್ ನಂತರದ ಮೊದಲ ಪಂದ್ಯ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ಅಂದಿನಿಂದ ಈ ಎರಡೂ ತಂಡಗಳು ಟಿ20 ಮತ್ತು ಟೆಸ್ಟ್ ಸರಣಿಗಳಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಇಲ್ಲಿಯವರೆಗೂ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿರಲಿಲ್ಲ. 2023ರ ಏಕದಿನ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಅಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ, ಭಾರತವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದ ನಂತರ ಟೀಮ್ ಇಂಡಿಯಾ ಫೈನಲ್ ತಲುಪಿತ್ತು, ಆದರೆ ಪ್ರಶಸ್ತಿ ಸುತ್ತಿನಲ್ಲಿ ಮಕಾಡೆ ಮಲಗಿತ್ತು.

ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್ ಮೇಲೆ ಅವಲಂಬನೆ) ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್