Women's World Cup: ಡಿಆರ್‌ಎಸ್ ವಿವಾದಾತ್ಮಕ ಔಟ್ ಬಗ್ಗೆ ಸ್ಮೃತಿ ಮಂಧಾನಾ ಶಾಕ್! ವಿಡಿಯೊ
2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಮೃತಿ ಮಂಧಾನಾ 24 ಎಸೆತಗಳಲ್ಲಿ 24 ರನ್ ಗಳಿಸಿದರು. ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಅವರು ಡಿಆರ್‌ಎಸ್‌ಗೆ ವಿಕೆಟ್ ಒಪ್ಪಿಸಬೇಕಾಯಿತು. ಈ ನಿರ್ಧಾರವನ್ನು ಅವರು ನಂಬಲಾಗದ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಇಲ್ಲಿ ನೋಡಬಹುದು.
ಡಿಆರ್‌ಎಸ್ ವಿವಾದಾತ್ಮಕ ತೀರ್ಪಿಗೆ ಸ್ಮೃತಿ ಮಂಧಾನಾ ಔಟ್! ವಿಡಿಯೊ -
ಮುಂಬೈ: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (SMriti Mandhana) ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಭಾರತದ ಪರ ಪ್ರಮುಖ ರನ್ ಸ್ಕೋರರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅದರಂತೆ ಅವರು ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ (INDW vs AUSW) 24 ಎಸೆತಗಳಲ್ಲಿ 24 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅವರು ಮೂರನೇ ಅಂಪೈರ್‌ನ ವಿವಾದಾತ್ಮಕ ತೀರ್ಪಿಗೆ ಔಟ್ ಆಗಬೇಕಾಯಿತು. ಈ ವೇಳೆ ಅವರು ಆಘಾತ ವ್ಯಕ್ತಪಡಿಸಿದ್ದರು.
ಗುರುವಾರ ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ 10ನೇ ಓವರ್‌ನ ಎರಡನೇ ಎಸೆತವನ್ನು ಆಸೀಸ್ ಸ್ಪಿನ್ನರ್ ಕಿಮ್ ಗಾರ್ತ್ ಲೆಗ್ ಸ್ಟಂಪ್ ಹೊರಗೆ ಎಸೆದಿದ್ದರು. ಸ್ಮೃತಿ ಆ ಎಸೆತವನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದರು ಆದರೆ ಅದು ವಿಕೆಟ್ ಕೀಪರ್ ಕೈಗೆ ಸೇರಿತು. ಈ ವೇಳೆ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಿದರು. ಆದರೆ, ಈ ನಿರ್ಧಾರಕ್ಕೆ ತೃಪ್ತರಾಗದ ಆಸ್ಟ್ರೇಲಿಯಾ ಮೇಲ್ಮನವಿ ಸಲ್ಲಿಸಿತು.
IND vs AUS: ಎರಡನೇ ಟಿ20ಐ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ!
ಆಸೀಸ್ ನಾಯಕಿ ಆಲೀಸಾ ಹೀಲಿ ರಿವ್ಯೂ ತೆಗೆದುಕೊಳ್ಳಲು ನಿರ್ಧರಿಸಿದರು. ರಿವ್ಯೂನಲ್ಲಿ ಚೆಂಡು ಬ್ಯಾಟ್‌ಗೆ ತಗುಲಿರುವುದು ಕಂಡು ಬಂತು. ಆಗ ಮೂರನೇ ಅಂಪೈರ್, ಫೀಲ್ಡ್ ಅಂಪೈರ್ ನಾಟ್‌ಔಟ್ ನಿರ್ಧಾರವನ್ನು ಬದಲಿಸಿ ಔಟ್ ನೀಡುವಂತೆ ಸೂಚನೆ ನೀಡಿದರು. ಸ್ಕೀನ್ ಮೇಲೆ ಔಟ್ ನಿರ್ಧಾರ ಬರುತ್ತಿದ್ದಂತೆ ಸ್ಮೃತಿ ಮಂಧಾನಾ ಆಘಾತ ವ್ಯಕ್ತಪಡಿಸಿದರು.
🚨The ball that dismissed Smriti Mandhana was clocked at 159.6 kmph — absolutely unplayable delivery 🔥#INDvAUS pic.twitter.com/SB3q6osKQM
— ICC Asia Cricket (@ICCAsiaCricket) October 30, 2025
ಅಂಪೈರ್ ನಿರ್ಧಾರ ಬರುತ್ತಿದ್ದಂತೆ ಆಸ್ಟ್ರೇಲಿಯಾದ ಆಟಗಾರ್ತಿಯರು ಕುಣಿದು ಕುಪ್ಪಳಿಸಿದರು. ಮತ್ತೊಂದೆಡೆ, ಸ್ಮೃತಿ ಮಂಧಾನಾ ಔಟ್ ಆಗಿರುವುದನ್ನು ನಂಬಲಿಲ್ಲ. ಅವರ ಮುಖದಲ್ಲಿ ನಗು ಕಾಣಿಸಿಕೊಂಡಿತು ಮತ್ತು ಅವರು ಬೇರೆಡೆ ನೋಡುತ್ತಿದ್ದರು. ಆದಾಗ್ಯೂ, ಅವರಿಗೆ ಪೆವಿಲಿಯನ್‌ಗೆ ಹಿಂತಿರುಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.
𝗜𝗻𝗻𝗶𝗻𝗴𝘀 𝗕𝗿𝗲𝗮𝗸!
— BCCI Women (@BCCIWomen) October 30, 2025
2⃣ wickets each for Sree Charani and Deepti Sharma 👍
1⃣ wicket each for Kranti Gaud, Amanjot Kaur, and Radha Yadav ☝️
Over to our batters now!
Scorecard ▶ https://t.co/ou9H5gNDPT#TeamIndia | #WomenInBlue | #CWC25 | #INDvAUS pic.twitter.com/WRXlvLtfwL
338 ರನ್‌ಗಳನ್ನು ಕಲೆ ಹಾಕಿದ ಆಸ್ಟ್ರೇಲಿಯಾ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ ತನ್ನ ಪಾಲಿನ 49.5 ಓವರ್‌ಗಳಿಗೆ 338 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಭಾರತ ತಂಡಕ್ಕೆ 339 ರನ್‌ಗಳ ಗುರಿಯನ್ನು ನೀಡಿತ್ತು. ಆಸೀಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಪೋಬೆ ಲಿಚ್‌ಫೀಲ್ಡ್ (119 ರನ್) ಶತಕ ಬಾರಿಸಿದರೆ, ಎಲಿಸ್ ಪೆರಿ (77) ಹಾಗೂ ಆಶ್ಲೇ ಗಾರ್ಡನರ್ (63) ಅವರು ಅರ್ಧಶತಕಗಳನ್ನು ಬಾರಿಸಿದರು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಶ್ರೀಚರಣಿ ಹಾಗೂ ದೀಪ್ತಿ ಶರ್ಮಾ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.