ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಇಂಗ್ಲೆಂಡ್‌ ಪರ ಆಡಲು ಇನ್ನೂ ಕಾಯುತ್ತಿದ್ದೇನೆ, ಆಯ್ಕೆದಾರರಿಂದ ಇನ್ನೂ ಕರೆ ಬಂದಿಲ್ಲʼ:ಜಾನಿ ಬೈರ್‌ಸ್ಟೋವ್‌!

ದೀರ್ಘಾವಧಿಯಿಂದ ಇಂಗ್ಲೆಂಡ್‌ ತಂಡದಿಂದ ದೂರ ಉಳಿದಿರುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ ಅವರು ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 2024ರಲ್ಲಿ ಧರ್ಮಶಾಲಾದಲ್ಲಿ ಭಾರತದ ವಿರುದ್ದ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಇಂಗ್ಲೆಂಡ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವಲ್ಲಿ ವಿಫಲರಾಗಿದ್ದಾರೆ.

ಇಂಗ್ಲೆಂಡ್‌ ಪರ ಆಡಲು ಇನ್ನೂ ಕಾಯುತ್ತಿದ್ದೇನೆ: ಬೈರ್‌ಸ್ಟೋವ್‌!

ಇಂಗ್ಲೆಂಡ್‌ ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ ಜಾನಿ ಬೈರ್‌ಸ್ಟೋವ್‌.

Profile Ramesh Kote Jul 19, 2025 7:36 PM

ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ (England) ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ (Jonny Bairstow) ದೀರ್ಘಾವಧಿ ಇಂಗ್ಲೆಂಡ್ ತಂಡದಿಂದ ದೂರ ಉಳಿದಿದ್ದಾರೆ. ಅವರು ಒಂದು ಅವಧಿಯಲ್ಲಿ ಇಂಗ್ಲಿಷ್ ತಂಡಕ್ಕಾಗಿ ಮೂರು ಸ್ವರೂಪಗಳನ್ನು ಆಡುತ್ತಿದ್ದರು. ಆದರೆ, 2024 ರಲ್ಲಿ ಧರ್ಮಶಾಲಾದಲ್ಲಿ ಭಾರತದ (India) ವಿರುದ್ಧ 100ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ, ಅವರಿಗೆ ಇದುವರೆಗೆ ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿಲ್ಲ. 2023ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಅವರು ಏಕದಿನ ತಂಡದಿಂದ ಹೊರಗಿದ್ದಾರೆ. ಆದರೆ, ಜಾನಿ ಬೈರ್‌ಸ್ಟೋವ್‌ ಅವರು ಇಂಗ್ಲೆಂಡ್‌ ತಂಡದ ಪರ ಆಡಲು ಇನ್ನೂ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

ಇನ್ನು ಜಾನಿ ಬೈರ್‌ಸ್ಟೋವ್ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಇಂಗ್ಲೆಂಡ್‌ ಆಟಗಾರನ ಸ್ಥಿತಿ, ಭಾರತದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತೆಯೇ ಉಂಟಾಗಿದೆ. ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್‌ ಪೂಜಾರ ಅವರು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕಾರಣ ಅವರನ್ನು ತಂಡದಿಂದ ಇದ್ದಕ್ಕಿದ್ದಂತೆ ಕೈ ಬಿಡಲಾಗಿತ್ತು. ಜಾನಿ ಬೈರ್‌ಸ್ಟೋವ್ ಇದೀಗ ಸ್ಕೈ ಸ್ಪೋರ್ಟ್ಸ್‌ನಲ್ಲಿ ದೊಡ್ಡ ಹೇಳಿಕೆ ನೀಡಿದ್ದಾರೆ.

"ನಾನು ಇನ್ನೂ ಇಂಗ್ಲೆಂಡ್‌ ತಂಡದ ಒಪ್ಪಂದದಲ್ಲಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅವರಿಂದ ಹೆಚ್ಚಿನದನ್ನು ಕೇಳಿಲ್ಲ. ಆದರೆ ಅದೆಲ್ಲವೂ (ಆಯ್ಕೆ ಮಾಡುವುದು ಅಥವಾ ಬಿಡುವುದು) ಅದರ ಭಾಗವಾಗಿದೆ. ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸಬಲ್ಲ ವಿಶೇಷ ರೀತಿಯ ಆಟಗಾರರ ಅಗತ್ಯವಿದೆ ಎಂದು ಹ್ಯಾರಿ ಬ್ರೂಕ್‌ ಹೇಳಿದ್ದಾರೆ. ನಾನು ಖಂಡಿತವಾಗಿಯೂ ಫಿಟ್‌ ಇದ್ದೇನೆ ಹಾಗೂ ಬಹಳ ಸಮಯದಿಂದ ಹಾಗೆ ಮಾಡುತ್ತಿದ್ದೇನೆ," ಎಂದು ಜಾನಿ ಬೈರ್‌ಸ್ಟೋವ್‌ ತಿಳಿಸಿದ್ದಾರೆ.

IND vs ENG: ʻವಿರಾಟ್‌ ಕೊಹ್ಲಿ ಲಾರ್ಡ್ಸ್‌ ಟೆಸ್ಟ್‌ ಆಡಿದ್ದರೆ ಭಾರತ ಸುಲಭವಾಗಿ ಗೆಲ್ಲುತ್ತಿತ್ತುʼ-ಸ್ಟೀವ್‌ ಹಾರ್ಮಿಸನ್‌!

ಪಾದದ ಗಾಯದಿಂದ ಗುಣಮುಖರಾಗಿ ಬಂದ ಬಳಿಕ ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆಂದು ಜಾನಿ ಬೈರ್‌ಸ್ಟೋವ್‌ ಉಲ್ಲೇಖಿಸಿದ್ದಾರೆ. ಅವರು ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದಾರೆ ಹಾಗೂ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕೊನೆಯು ಹಂತದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು.

"ಫಿಟ್ನೆಸ್ ದೃಷ್ಟಿಕೋನದಿಂದ ಪಾದದ ಗಾಯದಿಂದ ಚೇತರಿಸಿಕೊಂಡ ನಂತರ ನಾನು ಒಂದೇ ಒಂದು ಪಂದ್ಯವನ್ನು ತಪ್ಪಿಸಿಕೊಂಡಿಲ್ಲ. ಅದು ಇದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರಬಹುದಿತ್ತು. ಕೌಂಟಿ ಚಾಂಪಿಯನ್‌ಶಿಪ್ ಮತ್ತು ಹಂಡ್ರೆಡ್‌ಗೆ ಹೋಗುವುದರೊಂದಿಗೆ ಮೈದಾನದಲ್ಲಿ ಸಾಕಷ್ಟು ಸಮಯವನ್ನು ಕಳೆಯಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ದೃಢತೆಯ ದೃಷ್ಟಿಕೋನದಿಂದ, ನಾನು ಖಂಡಿತವಾಗಿಯೂ ಹೊಸಬನಾಗಿದ್ದೇನೆ. ನಾಯಕತ್ವದ ಭಾಗವು ವಿಭಿನ್ನ ಸವಾಲುಗಳನ್ನು ಎಸೆದಿದೆ," ಎಂದು ಜಾನಿ ಬೈರ್‌ಸ್ಟೋವ್‌ ತಿಳಿಸಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಜಾನಿ ಬೈರ್‌ಸ್ಟೋವ್ ಅಂಕಿ ಅಂಶಗಳು

35ರ ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಇಂಗ್ಲೆಂಡ್ ಪರ 100 ಟೆಸ್ಟ್, 107 ಏಕದಿನ ಮತ್ತು 80 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 12 ಶತಕ ಮತ್ತು 26 ಅರ್ಧಶತಕಗಳನ್ನು ಗಳಿಸಿದ್ದಾರೆ, ಇದರ ಸಹಾಯದಿಂದ ಅವರು 6042 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಏಕದಿನ ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ 3868 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಬ್ಯಾಟ್‌ನಿಂದ 11 ಶತಕ ಮತ್ತು 17 ಅರ್ಧಶತಕಗಳು ಮೂಡಿ ಬಂದಿವೆ. ಇನ್ನು ಟಿ20ಐ ಕ್ರಿಕೆಟ್‌ನಲ್ಲಿ ಬೈರ್‌ಸ್ಟೋವ್ 10 ಅರ್ಧಶತಕಗಳಿಂದ 1671 ರನ್ ಗಳಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಇಲ್ಲಿಯವರೆಗೆ 52 ಪಂದ್ಯಗಳನ್ನು ಆಡಿದ್ದಾರೆ.