IND vs ENG: ʻಕೇವಲ 5 ವಿಕೆಟ್ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ!
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 5 ವಿಕೆಟ್ಗಳನ್ನು ಕಬಳಿಸಿದರೆ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಸೇನಾ ರಾಷ್ಟ್ರಗಳಲ್ಲಿ 150 ವಿಕೆಟ್ಗಳನ್ನು ಕಬಳಿಸಿದ ಮೊದಲನೇ ಏಷ್ಯಾ ಬೌಲರ್ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ವಿಶೇಷ ದಾಖಲೆಯ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಟೆಸ್ಟ್ ಸರಣಿ (IND vs ENG) ಜೂನ್ 20 ರಂದು ಆರಂಭವಾಗಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡಕ್ಕೆ (Indian Cricket Team) ಇಂಗ್ಲೆಂಡ್ ಕಂಡೀಷನ್ಸ್ನಲ್ಲಿ ಕಠಿಣ ಸವಾಲು ಎದುರಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆಯ ಸನಿಹದಲ್ಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ನೀಡಿರುವ ಕಾರಣ ಹಿರಿಯ ಆಟಗಾರನಾಗಿ ಜಸ್ಪ್ರೀತ್ ಬುಮ್ರಾ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಇದರ ನಡುವೆ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 145 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ಇಂಗ್ಲೆಂಡ್ ಸರಣಿಯಲ್ಲಿ ಅವರು 5 ವಿಕೆಟ್ಗಳನ್ನು ಕಬಳಿಸಿದರೆ, ಆ ಮೂಲಕ ಸೇನಾ ರಾಷ್ಟ್ರಗಳಲ್ಲಿ 150 ವಿಕೆಟ್ಗಳನ್ನು ಕಬಳಿಸಿದ ಏಷ್ಯಾದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು ಎರಡು ವಿಕೆಟ್ ಕಿತ್ತರೆ, ಪಾಕಿಸ್ಥಾನ ದಿಗ್ಗಜ ವಸೀಮ್ ಅಕ್ರಮ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಆ ಮೂಲಕ ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಏಷ್ಯಾದ ಬೌಲರ್ ಎನಿಸಿಕೊಳ್ಳಲಿದ್ದಾರೆ.
IND vs ENG: ಶುಭಮನ್ ಗಿಲ್ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್ ವಾನ್ ಪ್ರತಿಕ್ರಿಯೆ!
ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಏಷ್ಯಾದ ಬೌಲರ್ಗಳು
146 - ವಸಿಂ ಅಕ್ರಮ್
145 - ಜಸ್ಪ್ರೀತ್ ಬುಮ್ರಾ
141 - ಅನಿಲ್ ಕುಂಬ್ಳೆ
130 - ಇಶಾಂತ್ ಶರ್ಮಾ
125 - ಮುತ್ತಯ್ಯ ಮುರಳೀಧರನ್
ಇಂಗ್ಲೆಂಡ್ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಿಗೆ ಬುಮ್ರಾ ಲಭ್ಯರಿಲ್ಲ
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಂತರ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದ ನಂತರ ಜಸ್ಪ್ರೀತ್ ಬುಮ್ರಾ ಮೊದಲ ಬಾರಿ ಭಾರತ ಪರ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆದಾಗ್ಯೂ, ಅವರು ಇಡೀ ಸರಣಿಯಲ್ಲಿ ಆಡುವುದಿಲ್ಲ, ಆದರೆ ಮೂರು ಪಂದ್ಯಗಳಲ್ಲಿ ಮಾತ್ರ ಆಡುತ್ತಾರೆ ಎಂದು ದೃಢಪಡಿಸಲಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಟಾರ್ ವೇಗದ ಬೌಲರ್ ಯಾವ ಮೂರು ಪಂದ್ಯಗಳನ್ನು ಆಡುತ್ತಾರೆ ಎಂಬುದನ್ನು ಖಚಿತಪಡಿಸಿಲ್ಲ.
IND vs ENG ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್ ಆರಿಸಿದ ಮ್ಯಾಥ್ಯೂ ಹೇಡನ್!
"ಅವರು ಆಡಬೇಕೆಂದು ಬಯಸುವ ಮೂರು ಪಂದ್ಯಗಳನ್ನು ನಾವು ಇನ್ನೂ ಆಯ್ಕೆ ಮಾಡಿಕೊಂಡಿಲ್ಲ. ಬುಮ್ರಾ ಅವರಂತಹ ಆಟಗಾರನನ್ನು ಬದಲಾಯಿಸುವುದು ಯಾವಾಗಲೂ ಕಷ್ಟ, ಆದರೆ ನಮ್ಮಲ್ಲಿ ಸಾಕಷ್ಟು ಗುಣಮಟ್ಟವಿದೆಮ" ಎಂದು ಭಾರತ ತಂಡ ಇಂಗ್ಲೆಂಡ್ಗೆ ತೆರಳುವುದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ತಿಳಿಸಿದ್ದರು.
ಭಾರತ ಟೆಸ್ಟ್ ತಂಡ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ, ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಪ್ರಸಿಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.