ಶುಭಮನ್ ಗಿಲ್ ಅಲ್ಲ! ಭಾರತ ಟೆಸ್ಟ್ ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ ಅನಿಲ್ ಕುಂಬ್ಳೆ!
Anil Kumble backs Jasprit bumrah for Test Captaincy: ರೋಹಿತ್ ಶರ್ಮಾ ಟಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಹೊತ್ತಿಗೆ ಬಿಸಿಸಿಐ ನೂತನ ನಾಯಕನನ್ನು ಆರಿಸಲಿದೆ. ಇದರ ನಡುವೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಭಾರತ ಟೆಸ್ಟ್ ತಂಡಕ್ಕೆ ಜಸ್‌ಪ್ರೀತ್ ಬುಮ್ರಾ ನಾಯಕನಾಗಬೇಕೆಂದು ಆಗ್ರಹಿಸಿದ್ದಾರೆ.

ಜಸ್‌ಪ್ರೀತ್ ಬುಮ್ರಾ ಪರ ಅನಿಲ್ ಕುಂಬ್ಳೆ ಬ್ಯಾಟಿಂಗ್.

ಬೆಂಗಳೂರು: ಇಂಗ್ಲೆಂಡ್ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG) ಭಾರತ ತಂಡವನ್ನು ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಮುನ್ನಡೆಸಬೇಕೆಂದು ಸ್ಪಿನ್ ದಿಗ್ಗಜ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಸಲಹೆ ನೀಡಿದ್ದಾರೆ. ಬುಧವಾರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ್ದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಈ ಮಾಹಿತಿಯನ್ನು ತಿಳಿಸಿದ್ದರು ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಅವರು ಖಚಿತಪಡಿಸಿದ್ದರು. ಜೂನ್ 20 ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ಟೆಸ್ಟ್ ತಂಡದ ನಾಯಕತ್ವದ ರೇಸ್‌ನಲ್ಲಿ ಶುಭಮನ್ ಗಿಲ್, ಜಸ್‌ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಇದ್ದಾರೆ.
ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು. ಅದೂ ಜಸ್‌ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಮಾತ್ರ ಭಾರತ ತಂಡ ಪರ್ತ್ ಟೆಸ್ಟ್‌ನಲ್ಲಿ ಗೆಲುವು ಪಡೆದಿತ್ತು. ಅದರಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಜಸ್‌ಪ್ರೀತ್ ಬುಮ್ರಾ ಅರ್ಹರಾಗಿದ್ದಾರೆಂದು ಮಾಜಿ ಹೆಡ್ ಕೋಚ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Rohit sharma Test Retirement: ರೋಹಿತ್ ಶರ್ಮಾರ ಟೆಸ್ಟ್ ಕ್ರಿಕೆಟ್ ದಾಖಲೆಗಳು!
ಜಸ್‌ಪ್ರೀತ್ ಬುಮ್ರಾಗೆ ನಾಯಕತ್ವ ನೀಡಬೇಕೆಂದ ಕುಂಬ್ಳೆ
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಅನಿಲ್ ಕುಂಬ್ಳೆ, "ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಬಹುಶಃ ಜಸ್‌ಪ್ರೀತ್ ಬುಮ್ರಾ ನಾಯಕನಾಗಬೇಕು ಹಾಗೂ ಅವರ ಫಿಟ್‌ನೆಸ್ ಹೇಗಿದೆ ಎಂದು ನೋಡಬೇಕಾಗಿದೆ. ಫಾಸ್ಟ್ ಬೌಲರ್ ಆಗಿ ತಂಡವನ್ನು ಮುನ್ನಡೆಸುವುದು ಸುಲಭವಲ್ಲ ಎಂದು ಗೊತ್ತಿದೆ. ಅವರು ಹಲವು ಗಾಯಗಳಿಂದ ಬಳಲಿದ್ದಾರೆಂದು ಗೊತ್ತಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಅವರಿಗೆ ವಿರಾಮ ಸಿಕ್ಕಿದೆ ಹಾಗೂ ಐಪಿಎಲ್ ಮೂಲಕ ಕ್ರಿಕೆಟ್‌ಗೆ ಮರಳಿದ್ದಾರೆ. ಆದರೂ ನಾನು ಬುಮ್ರಾ ಅವರನ್ನು ನಾಯಕನಾಗಿ ಬಯಸುತ್ತಿದ್ದೇನೆ," ಎಂದು ಹೇಳಿದ್ದಾರೆ.
ವೇಗದ ಬೌಲಿಂಗ್ ದೈಹಿಕವಾಗಿ ಎಷ್ಟು ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ಕುಂಬ್ಳೆ ಒಪ್ಪಿಕೊಂಡರು ಮತ್ತು ಬುಮ್ರಾ ಐದು ಟೆಸ್ಟ್ ಪಂದ್ಯಗಳಲ್ಲೂ ಆಡುತ್ತಾರೆ ಎಂದು ನಿರೀಕ್ಷಿಸುವುದು ವಾಸ್ತವಿಕವಲ್ಲದಿರಬಹುದು ಎಂದು ಹೇಳಿದ್ದಾರೆ. "ಯಾವಾಗಲಾದರೂ ಇದು ನಡೆದರೆ, ಉಪ ನಾಯಕ ತಂಡವನ್ನು ಮುನ್ನಡೆಸಲಿದ್ದಾರೆ," ಎಂದು ಸ್ಪಿನ್ ದಂತಕತೆ ತಿಳಿಸಿದ್ದಾರೆ.
Rohit sharma Retirement: ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ ರೋಹಿತ್ ಶರ್ಮಾ!
ಜಸ್‌ಪ್ರೀತ್ ಬುಮ್ರಾ ಫಿಟ್‌ನೆಸ್ ಕೀ ಸಂಗತಿ
ಜಸ್‌ಪ್ರೀತ್ ಬುಮ್ರಾ ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾರೆ. ಅವರು ವಿಶ್ವದ ಅತ್ಯಂತ ಅಪಾಯಕಾರಿ ವೇಗದ ಬೌಲರ್‌ಗಳನ್ನು ಜಸ್‌ಪ್ರೀತ್ ಬುಮ್ರಾ ಕೂಡ ಒಬ್ಬರು. ಅವರು ಗಾಯದ ಇತಿಹಾಸ ಹಾಗೂ ಇಂಗ್ಲೆಂಡ್ ಕಂಡೀಷನ್ಸ್‌ನಲ್ಲಿನ ದೀರ್ಘಾವಧಿ ಸರಣಿಯು ಅವರು ಫಿಟ್‌ನೆಸ್ ಕೀ ಸಂಗತಿಯಾಗುತ್ತದೆ,"ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಗಾಯದ ಇತಿಹಾಸ ಹಾಗೂ ಫಿಟ್‌ನೆಸ್ ವಿಷಯ ಜಸ್‌ಪ್ರೀತ್ ಬುಮ್ರಾಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಶುಭಮನ್ ಗಿಲ್‌ಗೆ ಭಾರತ ಟೆಸ್ಟ್ ತಂಡದ ನಾಯಕತ್ವ ನೀಡಬಹುದು. ಗಿಲ್ ಈಗಾಗಲೇ ಭಾರತ ಏಕದಿನ ತಂಡಕ್ಕೆ ಉಪ ನಾಯಕರಾಗಿದ್ದಾರೆ. ಭಾರತ ತಂಡದ ಭವಿಷ್ಯವನ್ನು ಆಧಾರವಾಗಿಟ್ಟುಕೊಂಡು ಗಿಲ್‌ಗೆ ಉಪ ನಾಯಕನ ಸ್ಥಾನವನ್ನು ನೀಡಲಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ಟೆಸ್ಟ್ ಭವಿಷ್ಯದ ಬಗ್ಗೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ!
ನಾಯಕನಾಗಿ ಗಿಲ್ ಯಶಸ್ವಿ
ಇನ್ನು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಇವರ ನಾಯಕತ್ವದಲ್ಲಿ ಜಿಟಿ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆದಿದ್ದು, ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇದು ಗಿಲ್‌ಗೆ ಪ್ಲಸ್ ಪಾಯಿಂಟ್ ಆಗಬಹುದು.