IND vs ENG: ಕೆಎಲ್ ರಾಹುಲ್ ಭಾರತದ ಅತ್ಯುತ್ತಮ ಟಸ್ಟ್ ಬ್ಯಾಟ್ಸ್ಮನ್ ಎಂದ ಚೇತೇಶ್ವರ್ ಪೂಜಾರ!
Cheteshwar Pujara Praised on KL Rahul: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಇದರ ನಡುವೆ ಹಿರಿಯ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್ ಅವರನ್ನು ಗುಣಗಾನ ಮಾಡಿದ್ದಾರೆ. ಕೆಎಲ್ ರಾಹುಲ್ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಎಂದು ಶ್ಲಾಘಿಸಿದ್ದಾರೆ.

ಕೆಎಲ್ ರಾಹುಲ್ರನ್ನು ಶ್ಲಾಘಿಸಿದ ಚೇತೇಶ್ವರ್ ಪೂಜಾರ.

ಲೀಡ್ಸ್: ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ( KL Rahul) ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟರ್, ಆದರೆ ಅವರು ಪಂದ್ಯಗಳಲ್ಲಿ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಟೆಸ್ಟ್ ವಿಶೇಷ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ (Cheteshwar Pujara) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ (IND vs ENG) ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸಿ ಆಟವನ್ನು ಮುಂದುವರಿಸಿದ್ದಾರೆ. ಆ ಮೂಲಕ ಈ ಇನಿಂಗ್ಸ್ನಲ್ಲಿ ಅವರು ದೊಡ್ಡ ಮೊತ್ತವನ್ನು ಕಲೆ ಹಾಕುವ ಮುನ್ಸೂಚನೆಯನ್ನು ನೀಡಿದ್ದಾರೆ.
ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ನೋಡಿದ ಬಳಿಕ ಚೇತೇಶ್ವರ್ ಪೂಜಾರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಲೀಡ್ಸ್ ಟೆಸ್ಟ್ ಮೊದಲನೇ ದಿನ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು 42 ರನ್ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಅವರು ಬ್ರೈಡೆನ್ ಕಾರ್ಸ್ ಎಸೆತದಲ್ಲಿ ಸ್ಲಿಪ್ನಲ್ಲಿ ಜೋ ರೂಟ್ಗೆ ಕ್ಯಾಚ್ ಕೊಟ್ಟಿದ್ದರು. ಆ ಮೂಲಕ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ಕನ್ನಡಿಗ ಎಡವಿದ್ದರು.
IND vs ENG: 128 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಕನ್ನಡಿಗ ಪ್ರಸಿಧ್ ಕೃಷ್ಣ!
ಭಾರತ ತಂಡದಲ್ಲಿ ಕೆಎಲ್ ರಾಹುಲ್ ಅತ್ಯಂತ ಹೆಚ್ಚು ತಂತ್ರಗಾರಿಕೆಯ ಬ್ಯಾಟ್ಸ್ಮನ್ ಆಗಿದ್ದಾರೆ. ಯಾವುದೇ ಸನ್ನಿವೇಶದಲ್ಲಿ ಆಡುವ ಪರಿಪೂರ್ಣ ಟೆಸ್ಟ್ ಬ್ಯಾಟ್ಸ್ಮನ್ ಆಗಿದ್ದಾರೆ ಎಂದು ಚೇತೇಶ್ವರ್ ಪೂಜಾರ ಗುಣಗಾನ ಮಾಡಿದ್ದಾರೆ.
ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್
"ತಾಂತ್ರಿಕವಾಗಿ, ಅವರು ಭಾರತ ಟೆಸ್ಟ್ ತಂಡದಲ್ಲಿ ಅತ್ಯಂತ ಸರಿಯಾದ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಮತ್ತು ಅವರು ಚೆಂಡಿಗೆ ಮಾಡುವ ಸಮಯ, ಅವರ ಫುಟ್ವರ್ಕ್, ಲೆನ್ತ್ ಅನ್ನು ನಿರ್ಣಯಿಸುವ ರೀತಿ, ಅವರು ಸಂಪೂರ್ಣ ಟೆಸ್ಟ್ ಆಟಗಾರನಂತೆ ಕಾಣುತ್ತಾರೆ. ಆದರೆ ಅದೇ ಸಮಯದಲ್ಲಿ ಅವರು ದೊಡ್ಡ ರನ್ ಗಳಿಸಬೇಕು ಮತ್ತು ಅದನ್ನು ಮಾಡಲು ಅವರು ಸಾಕಷ್ಟು ಸಮರ್ಥರು. ಆದರೆ, ಅವರು ಉತ್ತಮ ಆರಂಭ ಪಡೆದ ನಂತರ ಔಟ್ ಆದ ಸಾಕಷ್ಟು ಸಂದರ್ಭಗಳು ನಮ್ಮ ಕಣ್ಣ ಮುಂದೆ ಇವೆ," ಎಂದು ಚೇತೇಶ್ವರ್ ಪೂಜಾರ ಸ್ಟಾರ್ ಸ್ಪೋರ್ಡ್ಸ್ ವಾಹಿನಿಯಲ್ಲಿ ತಿಳಿಸಿದ್ದಾರೆ.
IND vs ENG 1st Test: ಅಂಪೈರ್ ತೀರ್ಪಿಗೆ ಚೆಂಡೆಸೆದ ಪಂತ್ಗೆ ದಂಡದ ಭೀತಿ
ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡಬೇಕು
"ನಾವು ಪ್ರಥಮ ಇನಿಂಗ್ಸ್ನಲ್ಲಿ ನೋಡಿದ್ದೇವೆ. ಅವರು ದೊಡ್ಡ ಮೊತ್ತವನ್ನಾಗಿಸಲು ಇದು ಸೂಕ್ತ ಸಮಯವಾಗಿತ್ತು. ಅವರು ನಿಜವಾಗಿಯೂ ಉತ್ತಮವಾಗಿ ಬ್ಯಾಟ್ ಮಾಡಿದರು. ಅವರು ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದರೆ ಅದರ ನಂತರ, ಅವರು ಔಟ್ ಆಗುವುದನ್ನು ನೋಡುವುದು ಸ್ವಲ್ಪ ನಿರಾಶಾದಾಯಕವಾಗಿತ್ತು, ಏಕೆಂದರೆ ಅವರಿಗೆ 100 ರನ್ ಗಳಿಸಲು ಪರಿಪೂರ್ಣ ಅವಕಾಶವಾಗಿತ್ತು. ಆದರೆ ಈಗ ದ್ವಿತೀಯ ಇನಿಂಗ್ಸ್ನಲ್ಲಿಯೂ ಅವರು ಮತ್ತೊಮ್ಮೆ ಉತ್ತಮವಾಗಿ ಪ್ರಾರಂಭಿಸಿದ್ದಾರೆಂದು ತೋರುತ್ತಿದೆ. ಅವರು 47 ರನ್ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಇದೀಗ ಅವರು 50ರ ಗಡಿ ತಲುಪುವ ಆತಂಕದ ಸಮಯವಾಗಿದೆ. ತಮ್ಮ 50 ರನ್ ದಾಟಿದ ಹೆಚ್ಚಿನ ಸಮಯಗಳಲ್ಲಿ ಅವರು ಅದನ್ನು ದೊಡ್ಡದಾಗಿ ಪರಿವರ್ತಿಸುತ್ತಾರೆ. ಆದ್ದರಿಂದ ನಾಳೆ (ಸೋಮವಾರ) ಅವರು ಇಲ್ಲಿಂದ ಮುಂದುವರಿಯುತ್ತಾರೆ ಮತ್ತು ನಂತರ ದೊಡ್ಡದನ್ನು ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇನೆ," ಎಂದು ಅವರು ಹೇಳಿದ್ದಾರೆ.