ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಔಟ್‌ ಮಾಡಿ ಬೆನ್‌ ಡಕೆಟ್‌ ಭುಜಕ್ಕೆ ಡಿಕ್ಕಿ ಹೊಡೆದ ಮೊಹಮ್ಮದ್‌ ಸಿರಾಜ್‌!

ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ದಿನ ಮೊಹಮ್ಮದ್ ಸಿರಾಜ್, ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ತಂದುಕೊಟ್ಟರು. ಸಿರಾಜ್ ಎಸೆತದಲ್ಲಿ ಡಕೆಟ್‌ ಅವರು ಬುಮ್ರಾಗೆ ಕ್ಯಾಚ್‌ ಕೊಟ್ಟರು. ಈ ವೇಳೆ ಸಿರಾಜ್‌ ಸಂಭ್ರಮಿಸುವ ಭರದಲ್ಲಿ ಬೆನ್‌ ಡಕೆಟ್‌ ಅವರ ಭುಜಕ್ಕೆ ಡಿಕ್ಕಿ ಹೊಡೆದರು.

ಬೆನ್‌ ಡಕೆಟ್‌ ಭುಜಕ್ಕೆ ಡಿಕ್ಕಿ ಹೊಡೆದ ಮೊಹಮ್ಮದ್‌ ಸಿರಾಜ್‌!

ಬೆನ್‌ ಡಕೆಟ್‌ ವಿಕೆಟ್‌ ಕಿತ್ತು ಸಂಭ್ರಮಿಸಿದ ಮೊಹಮ್ಮದ್‌ ಸಿರಾಜ್‌.

Profile Ramesh Kote Jul 13, 2025 7:39 PM

ಲಂಡನ್: ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ (IND vs ENG) ನಾಲ್ಕನೇ ದಿನ ಮೊಹಮ್ಮದ್ ಸಿರಾಜ್ (Mohammed Siraj), ಬೆನ್ ಡಕೆಟ್ (Ben Ducket) ಅವರನ್ನು ಔಟ್ ಮಾಡುವ ಮೂಲಕ ಸಂಚಲನ ಮೂಡಿಸಿದರು. ದ್ವಿತೀಯ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಸಿರಾಜ್ ಎಸೆತದಲ್ಲಿ ಬೆನ್ ಡಕೆಟ್ ಮಿಡ್-ಆನ್ ಕಡೆಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ ಜಸ್‌ಪ್ರೀತ್‌ ಬುಮ್ರಾ ಚುರುಕಿನ ಕ್ಯಾಚ್‌ ಪಡೆಯುವ ಮೂಲಕ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಪಡೆದ ತಕ್ಷಣ ಸಿರಾಜ್ ಸಂಭ್ರಮಿಸಿದರು. ಅಲ್ಲದೆ ಸಂಭ್ರಮದ ವೇಳೆ ಅವರು ಬೆನ್‌ ಡಕೆಟ್‌ಗೆ ಭುಜಕ್ಕೆ ಡಿಕ್ಕಿ ಹೊಡೆರು ತಿರುಗೇಟು ನೀಡಿದರು.

ಇಂಗ್ಲೆಂಡ್‌ ತಂಡದ ಮೊದಲನೇ ವಿಕೆಟ್‌ನೊಂದಿಗೆ ಮೊಹಮ್ಮದ್ ಸಿರಾಜ್ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಂಭ್ರಮಿಸುತ್ತಿರುವಾಗ ಅವರ ಭುಜ ಬೆನ್ ಡಕೆಟ್‌ಗೆ ಡಿಕ್ಕಿ ಹೊಡೆದರು. ಈ ವೇಳೆ ಅಂಪೈರ್ ಭಾರತೀಯ ಬೌಲರ್‌ಗೆ ಎಚ್ಚರಿಕೆ ನೀಡಿದರು. ಆದರೆ ಸಿರಾಜ್ ಅವರ ಈ ಪ್ರತಿಕ್ರಿಯೆಯಿಂದ ಲಾರ್ಡ್ಸ್ ಟೆಸ್ಟ್‌ನಲ್ಲಿ ಎರಡೂ ತಂಡಗಳ ನಡುವೆ ಈಗ ವಿಭಿನ್ನ ರೀತಿಯ ಉತ್ಸಾಹ ಕಾಣಲಿದೆ ಎಂಬುದು ಸ್ಪಷ್ಟವಾಯಿತು. ಇದು ಆಟದ ಮೂರನೇ ದಿನದ ಅಂತ್ಯದ ಸಮಯದಲ್ಲಿ ಪ್ರಾರಂಭವಾಯಿತು. ಏಕೆಂದರೆ ಝ್ಯಾಕ್‌ ಕ್ರಾವ್ಲಿ ಅವರು ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ನಲ್ಲಿ ಉದ್ದೇಶ ಪೂರ್ವಕವಾಗಿ ತಡ ಮಾಡುತ್ತಿದ್ದರು. ಈ ವೇಳೆ ಸಿರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

IND vs ENG: ರಿಷಭ್‌ ಪಂತ್‌ ರನ್‌ಔಟ್‌ ಆದ ಬಗ್ಗೆ ಕೆಎಲ್‌ ರಾಹುಲ್‌ ಪ್ರತಿಕ್ರಿಯೆ!

5 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌

ಬೆನ್‌ ಡಕೆಟ್‌ ಅವರನ್ನು ಔಟ್‌ ಮಾಡಿದ ಬಳಿಕ ಮೊಹಮ್ಮದ್‌ ಸಿರಾಜ್‌, ಮತ್ತೊಂದು ವಿಕೆಟ್‌ ಅನ್ನು ಕಿತ್ತರು. ಅವರು 12ನೇ ಓವರ್‌ನಲ್ಲಿ ಒಲ್ಲಿ ಪೋಪ್‌ ಅವರನ್ನು ಕೂಡ ಔಟ್‌ ಮಾಡಿದರು. ಆ ಮೂಲಕ ಇಂಗ್ಲೆಂಡ್‌ ತಂಡ, ಕೇವಲ 42 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಟೀಮ್‌ ಇಂಡಿಯಾದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.

ಬಳಿಕ ನಿತೀಶ್‌ ರೆಡ್ಡಿ ಕೂಡ ಭಾರತ ತಂಡಕ್ಕೆ ಕೈ ಜೋಡಿಸಿದರು. ಅವರು ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಝ್ಯಾಕ್‌ ಕ್ರಾವ್ಲಿ ಅವರನ್ನು ಔಟ್‌ ಮಾಡಿದರು. ಆ ಮೂಲಕ ಇಂಗ್ಲೆಂಡ್‌ ತಂಡ 50 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಆಕಾಶ ಚೋಪ್ರಾ, ಅಪಾಯಕಾರಿ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್‌ ಅವರನ್ನು ಔಟ್‌ ಮಾಡಿದರು. ಬಳಿಕ ಜೋ ರೂಟ್‌ ಹಾಗೂ ಜೇಮಿ ಸ್ಮಿತ್‌ ಅವರನ್ನು ವಾಷಿಂಗ್ಟನ್‌ ಸುಂದರ್‌ ಸ್ಪಿನ್‌ ಮೋಡಿ ಮಾಡಿ ಔಟ್‌ ಮಾಡಿದರು.

IND vs ENG: ಚೆಂಡು ಬದಲಿಸುವಾಗ ಸಮಯ ವ್ಯರ್ಥ ಮಾಡಿದ ಅಂಪೈರ್‌ ವಿರುದ್ಧ ರವಿ ಶಾಸ್ತ್ರಿ ಕಿಡಿ!

ಇದರೊಂದಿಗೆ 47 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ 165 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕ್ರೀಸ್‌ನಲ್ಲಿ ಇದೀಗ ಬೆನ್‌ ಸ್ಟೋಕ್ಸ್‌ ಹಾಗೂ ಕ್ರಿಸ್‌ ವೋಕ್ಸ್‌ ಬ್ಯಾಟ್‌ ಮಾಡುತ್ತಿದ್ದಾರೆ. ಮೊಹಮ್ಮದ್‌ ಸಿರಾಜ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಎರಡು ವಿಕೆಟ್‌ ಕಿತ್ತಿದ್ದಾರೆ. ನಿತೀಶ್‌ ರೆಡ್ಡಿ ಹಾಗೂ ಆಕಾಶ ದೀಪ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.