IND vs ENG: ಐದನೇ ಟೆಸ್ಟ್‌ನಲ್ಲಿ ಎರಡು ಐತಿಹಾಸಿಕ ದಾಖಲೆಗಳ ಮೇಲೆ ಕಣ್ಣಿಟ್ಟಿರುವ ಶುಭ್‌ಮನ್ ಗಿಲ್!
ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮುಂಬರುವ ಐದನೇ ಟೆಸ್ಟ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ. ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್‌ಮನ್ ಅವರ ಸುದೀರ್ಘ 88 ವರ್ಷಗಳ ಹಳೆಯ ದಾಖಲೆಯೊಂದನ್ನು ಓವಲ್ ಮೈದಾನದಲ್ಲಿ ಗಿಲ್ ಮುರಿಯುವ ಸಾಧ್ಯತೆಯಿದೆ. ಐದನೇ ಟೆಸ್ಟ್ ಜುಲೈ 31 ರಂದು ಆರಂಭವಾಗಲಿದೆ.

ಎರಡು ದೊಡ್ಡ ದಾಖಲೆಗಳ ಸನಿಹದಲ್ಲಿ ಶುಭಮನ್ ಗಿಲ್!

ಕೆನಿಂಗ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ(IND vs ENG) ಈಗಾಗಲೇ 4 ಪಂದ್ಯಗಳು ಮುಗಿದಿವೆ. ಕಳೆದ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ಬೃಹತ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ, ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ನಾಯಕ ಶುಭ್‌ಮನ್ ಗಿಲ್ (Shubman Gill), ಸ್ಪಿನ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರ ಶತಕಗಳ ನೆರವಿನಿಂದಾಗಿ ಈ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿತ್ತು. ಇನ್ನು ಸರಣಿಯ ನಿರ್ಣಾಯಕ ಪಂದ್ಯವಾದ ಐದನೇ ಟೆಸ್ಟ್ ಜುಲೈ 31ರಂದು ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯ ಶುರುವಾಗಲು ಇನ್ನೆರಡು ದಿನಗಳು ಮಾತ್ರ ಬಾಕಿಯಿದ್ದು, ಇದು ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಈ ಪಂದ್ಯವನ್ನು ಭಾರತ ತಂಡ ಗೆದ್ದರೆ ಸರಣಿಯನ್ನು ಡ್ರಾನಲ್ಲಿ ಮಗಿಸಬಹುದು. ಇಲ್ಲವಾದಲ್ಲಿ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ತವರಿನಲ್ಲಿ ನಡೆಯುತ್ತಿರುವ ಈ ಸರಣಿಯನ್ನು 3-1 ಅಂತರದಲ್ಲಿ ಮುಡಿಗೇರಿಸಿಕೊಳ್ಳಲಿದೆ. ಹಾಗಾಗಿ ಭಾರತ ತಂಡ ಈ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಇದಕ್ಕೆ ತಕ್ಕಂತೆ ಟೀಮ್ ಇಂಡಿಯಾ ಸಕಲ ಸಿದ್ದತೆಯನ್ನು ನಡಸುತ್ತಿದೆ. ಇದರ ನಡುವೆ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮುಂಬರುವ ಐದನೇ ಟೆಸ್ಟ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ.
IND vs ENG: ತಮ್ಮ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಏನೆಂದು ವಿವರಿಸಿದ ವಾಷಿಂಗ್ಟನ್ ಸುಂದರ್!
ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್‌ಮನ್ ಅವರ ಸುದೀರ್ಘ 88 ವರ್ಷಗಳ ಹಳೆಯ ದಾಖಲೆಯೊಂದನ್ನು ಓವಲ್ ಮೈದಾನದಲ್ಲಿ ಗಿಲ್ ಮುರಿಯುವ ಸಾಧ್ಯತೆಯಿದೆ. ಹಾಗೆಯೇ ಭಾರತ ತಂಡದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿದ ನಾಯಕನೆಂಬ ದಾಖಲೆ ದಿಗ್ಗಜ ಸುನೀಲ್ ಗವಾಸ್ಕರ್ ಹೆಸರಿನಲ್ಲಿದೆ. ಗಿಲ್ ಮುಂದಿನ ಪಂದ್ಯದಲ್ಲಿ ಈ ದಾಖಲೆಯನ್ನು ಮುರಿಯಬಹುದು. ಏಕೆಂದರೆ ಗಿಲ್ ಈ ಸರಣಿಯಲ್ಲಿ ಅದ್ಭುತ ಲಯದಲ್ಲಿದ್ದಾರೆ.
ಐತಿಹಾಸಿಕ ದಾಖಲೆ ಮುರಿಯಲು ಸಜ್ಜಾಗಿರುವ ಗಿಲ್
ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ ನಾಯಕನಾಗಿಯೂ ಅದ್ಭುತ ಫಾರ್ಮ್‌ನಲ್ಲಿದ್ದು, ಹಲವು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಈ ಸರಣಿಯಲ್ಲಿ ಅವರು ಈಗಾಗಲೇ 4 ಶತಕಗಳೊಂದಿಗೆ 722ರನ್ ಬಾರಿಸಿದ್ದಾರೆ. ಇದರ ನಡುವೆ ಕ್ರಿಕೆಟ್ ದಿಗ್ಗಜ ಬ್ರಾಡ್‌ಮನ್ 1937ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯೊಂದರಲ್ಲಿ ನಾಯಕನಾಗಿ 810ರನ್ ಗಳಿಸಿದ್ದರು. ಈ ದಾಖಲೆ ದೀರ್ಘಕಾಲಿಕವಾಗಿ ಬ್ರಾಡ್‌ಮನ್ ಅವರ ಹೆಸರಿನಲ್ಲೇ ಉಳಿದಿದೆ.
IND vs ENG: ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ವರ್ತನೆಗೆ ಸಂಜಯ್ ಮಾಂಜ್ರೇಕರ್ ಕಿಡಿ!
ವಿಶೇಷವೆಂದರೆ ಗಿಲ್ ನಾಯಕನಾಗಿ ತಮ್ಮ ಚೊಚ್ಚಲ ಸರಣಿವೊಂದರಲ್ಲಿ ಈ ಬಹುದೊಡ್ಡ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದು, ಅವರಿಗೆ ಮುಂದಿನ ಪಂದ್ಯದಲ್ಲಿ 89 ರನ್‌ಗಳ ಅವಶ್ಯಕತೆಯಿದೆ. ಇನ್ನು ಮತ್ತೊಂದು ವಿಶೇಷವೆಂದರೆ ಭಾರತ ತಂಡದ ಪರವಾಗಿ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿರುವ ದಾಖಲೆ ದಿಗ್ಗಜ ಸುನೀಲ್ ಗವಾಸ್ಕರ್ ಹೆಸರನಲ್ಲಿದೆ. 1970-71ರಲ್ಲಿ ಗವಾಸ್ಕರ್ ವೆಸ್ಟ್ ಇಂಡೀಸ್ ಸರಣಿಯಲ್ಲಿ 774ರನ್ ಬಾರಿಸಿದ್ದರು.
ಇದೀಗ ಗಿಲ್ ಅವರಿಗೆ ಈ ದಾಖಲೆಯನ್ನು ಮುರಿಯಲು 52ರನ್‌ಗಳ ಅಗತ್ಯವಿದೆ. ಹಾಗಾಗಿ ಗಿಲ್ ಎರಡೂ ದಾಖಲೆಗಳನ್ನು ಉಡೀಸ್ ಮಾಡುವ ಸಾಧ್ಯತೆ ಹೆಚ್ಚಿದೆ. ಇದಲ್ಲದೇ ಭಾರತ ತಂಡದ ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರ ದಾಖಲೆಯೊಂದನ್ನು ಗಿಲ್ ಈಗಾಗಲೇ ಮುರಿದಿದ್ದಾರೆ. ಅದೇನೆಂದರೆ ಜೈಸ್ವಾಲ್ ಅವರು ಈ ಹಿಂದೆ ಇಂಗ್ಲೆಂಡ್ ವಿರುದ್ದದ ಸರಣಿಯೊಂದರಲ್ಲಿ 712ರನ್‌ಗಳನ್ನು ಬಾರಿಸಿದ್ದರು. ಆದರೆ ಗಿಲ್ 722ರನ್ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
IND vs ENG 5th Test: 5ನೇ ಟೆಸ್ಟ್‌ನಲ್ಲೂ ವೇಗಿ ಜಸ್‌ಪ್ರೀತ್ ಬುಮ್ರಾ ಕಣಕ್ಕೆ
ಪ್ರಸಕ್ತ ಸರಣಿಯಲ್ಲಿ ಗಿಲ್ ಇನಿಂಗ್ಸ್‌ವಾರು ಸ್ಕೋರ್
- ಐತಿಹಾಸಿಕ ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಗಿಲ್, ಅಜೇಯರಾಗಿ 127 ರನ್ ಬಾರಿಸಿದರು. ನಂತರ ಎರಡನೇ ಇನಿಂಗ್ಸ್‌ನಲ್ಲಿ ಶೂನ್ಯ ಪ್ರದರ್ಶನ.
- ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟರ್ ಪಿಚ್‌ನಲ್ಲಿ ನಡೆದ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 269ರನ್ ಸಿಡಿಸಿದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 161ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಒಂದೇ ಟೆಸ್ಟ್ ಪಂದ್ಯದಲ್ಲಿ 430ರನ್ ಗಳಿಸಿದ ಭಾರತದ ಐಕೈಕ ಆಟಗಾರ ಎಂದೆನಿಸಿಕೊಂಡರು.
- ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 16ರನ್ ಮತ್ತು 2ನೇ ಇನಿಂಗ್ಸ್‌ನಲ್ಲಿ 6ರನ್ ಗಳಿಸಿ ಆಂಗ್ಲ ಬೌಲರ್‌ಗಳ ವಿರುದ್ಧ ಹಿನ್ನಡೆ ಅನುಭವಿಸಿದರು.
- ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಗಿಲ್ 23 ಎಸೆತಗಳಲ್ಲಿ ಕೇವಲ 12ರನ್ ಗಳಿಸಿ ಅತಿಥೇಯ ಇಂಗ್ಲೆಂಡ್ ತಂಡದ ನಾಯಕ ಬೆನ್‌ಸ್ಟೋಕ್ಸ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟ್ ಹಿಡಿದು ಬಂದ ಗಿಲ್ 103ರನ್‌ಗಳ ಕೊಡುಗೆ ನೀಡಿದರು.
ಬರಹ: ಕೆಎನ್ ರಂಗು, ಚಿತ್ರದುರ್ಗ