ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: ಅಂತಿಮ ಟೆಸ್ಟ್‌ಗೆ ಸ್ಟಾರ್‌ ಆಲ್‌ರೌಂಡರ್‌ ಕರೆತಂದ ಇಂಗ್ಲೆಂಡ್‌

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ತಂಡದಿಂದ ಕೈಬಿಟ್ಟಿದ್ದ ಜೋಶ್ ಟಂಗ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಆಡುವ ಬಳಗಲ್ಲಿ ಮಾಡಿದ ಬದಲಾವಣೆಗಳು ಫಲ ನೀಡದ ಕಾರಣ, ಓವಲ್‌ನಲ್ಲಿ ಮತ್ತೆ ಬದಲಾವಣೆ ನಿಶ್ಚಿತ.

5ನೇ ಟೆಸ್ಟ್ ಪಂದ್ಯಕ್ಕೆ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್‌

Profile Abhilash BC Jul 28, 2025 4:29 PM

ಲಂಡನ್‌: ಜುಲೈ 31 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ(ENG vs IND) ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಟಿಸಿದೆ. ಸ್ಟಾರ್‌ ಆಲ್‌ರೌಂಡರ್‌ ಜೇಮಿ ಓವರ್ಟನ್(Jamie Overton) ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಭಾರತ ವಿರುದ್ಧ ನಿರಾಸೆ ಅನುಭವಿಸಿದ ಆತಿಥೇಯರು ಲಂಡನ್‌ನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ.

"ಜುಲೈ 31 ಗುರುವಾರದಿಂದ ಓವಲ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪುರುಷರ ಆಯ್ಕೆ ಸಮಿತಿಯು ಸರ್ರೆ ತಂಡ ಆಲ್‌ರೌಂಡರ್ ಜೇಮಿ ಓವರ್ಟನ್ ಅವರನ್ನು ತಂಡಕ್ಕೆ ಸೇರಿಸಿದೆ" ಎಂದು ಇಂಗ್ಲೆಂಡ್ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ತಂಡದಿಂದ ಕೈಬಿಟ್ಟಿದ್ದ ಜೋಶ್ ಟಂಗ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಆಡುವ ಬಳಗಲ್ಲಿ ಮಾಡಿದ ಬದಲಾವಣೆಗಳು ಫಲ ನೀಡದ ಕಾರಣ, ಓವಲ್‌ನಲ್ಲಿ ಮತ್ತೆ ಬದಲಾವಣೆ ನಿಶ್ಚಿತ.

ಓವರ್ಟನ್ 3 ವರ್ಷಗಳ ನಂತರ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2022 ರಲ್ಲಿ ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದ್ದ ಓವರ್ಟನ್, ಲೀಡ್ಸ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆಯುವುದರ ಜತೆಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 97 ರನ್‌ ಕಲೆಹಾಕಿದ್ದರು. ಆದಾಗ್ಯೂ, ಆ ಒಂದು ಟೆಸ್ಟ್ ನಂತರ, ಓವರ್ಟನ್ ಇಂಗ್ಲೆಂಡ್‌ ಟೆಸ್ಟ್ ತಂಡದಿಂದ ಹೊರಗುಳಿದಿದ್ದರು. ಇದೀಗ ತಂಡಕ್ಕೆ ಮತ್ತೆ ಕಮ್‌ಬ್ಯಾಕ್‌ ಮಾಡಿದಾರೆ.

ಅಂತಿಮ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ

ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್, ಕ್ರಿಸ್ ವೋಕ್ಸ್, ಜ್ಯಾಕ್ ಕ್ರೌಲಿ, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಬ್ರೈಡನ್ ಕಾರ್ಸೆ, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಓಲಿ ಪೋಪ್, ಲಿಯಾಮ್ ಡಾಸನ್, ಜೇಮೀ ಸ್ಮಿತ್, ಜಾಕೋಬ್ ಬೆಥೆಲ್, ಜೋಫ್ರಾ ಆರ್ಚರ್, ಜೋಶ್ ಟಂಗ್.