ವೈಭವ್ ಸೂರ್ಯವಂಶಿಯನ್ನು ಕಟ್ಟಿ ಹಾಕಲು ಇಂಗ್ಲೆಂಡ್ ರೂಪಿಸಿರುವ ಗೇಮ್ ಪ್ಲ್ಯಾನ್ ತಿಳಿಸಿದ ಸ್ಯಾಮ್ ಕರನ್!
ವೈಭವ್ ಸೂರ್ಯವಂಶಿಯ ಭಯಮುಕ್ತ ಬ್ಯಾಟಿಂಗ್ ಅನ್ನು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಸ್ಯಾಮ್ ಕರನ್ ಗುಣಗಾಣ ಮಾಡಿದ್ದಾರೆ. ಆದರೆ, ಎಡಗೈ ಬ್ಯಾಟ್ಸ್‌ಮನ್ ಅನ್ನು ಕಟ್ಟಿ ಹಾಕಲು ನಮ್ಮ ಬಳಿಕ ಸೂಕ್ತವಾದ ರಣತಂತ್ರವಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ವೈಭವ್‌ಗೆ ರೂಪಿಸಿರುವ ಗೇಮ್ ಪ್ಲ್ಯಾನ್ ತಿಳಿಸಿದ ಸ್ಯಾಮ್ ಕರನ್. -
ನವದೆಹಲಿ: ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ (Sam Curran) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆದರೆ, ಈ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಡಿದರೆ, ಅವರಿಗೆ ನಾವು ಅತ್ಯುತ್ತಮವಾದ ರಣತಂತ್ರವನ್ನು ರೂಪಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿಯೇ ಭಾರತ ತಂಡದಲ್ಲಿ ಆಗಮಿಸಿದ್ದ ವೈಭವ್‌ಗೆ ಇನೂ ಚೊಚ್ಚಲ ಪಂದ್ಯವನ್ನು ಆಡಲು ಅವಕಾಶ ಸಿಕ್ಕಿಲ್ಲ.
ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬೆಂಚ್ ಕಾದಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ. ಎರಡನೇ ಟಿ20ಐ ಪಂದ್ಯದ ನಿಮಿತ್ತ ಮಾತನಾಡಿದ ಸ್ಯಾಮ್ ಕರನ್ ಅವರು ವಿಶೇಷವಾಗಿ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಸದ್ಯ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಆನಂದಿಸುತ್ತಿದ್ದಾರೆ, ಆದರೆ ಅವರನ್ನು ಕಟ್ಟಿ ಹಾಕಲು ನಾವು ಸೂಕ್ತ ಯೋಜನೆಯನ್ನು ರೂಪಿಸಿದ್ದೇವೆಂದು ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡಲು ತಡ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ಬೌಲಿಂಗ್ ಕೋಚ್!
ಸುದ್ದಿಗಾರರ ಜೊತೆ ಮಾತನಾಡಿದ ಸ್ಯಾಮ್ ಕರನ್, "ಇಂಗ್ಲೆಂಡ್ ತಂಡ ವಿಭಿನ್ನ ಸವಾಲನ್ನು ತಂದೊಡ್ಡಲಿದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಪಿಚ್ ಹಾಗೂ ಕಂಡೀಷನ್ಸ್ ಭಾರತಕ್ಕಿಂತ ತುಂಬಾ ವಿಭಿನ್ನವಾಗಿವೆ. ಬೌಲರ್‌ಗಳಾಗಿ ನಾವು ನಮ್ಮದೇ ಆದ ಯೋಜನೆಗಳನ್ನು ಹೊಂದಿದ್ದೇವೆ. ಆದರೆ, ನಮ್ಮ ಯೋಜನೆಗಳನ್ನು ನಿಖರವಾಗಿ ನಿಮ್ಮ ಹೇಳಲು ಸಾಧ್ಯವಿಲ್ಲ. ಅವರು ಎಷ್ಟು ಚೆನ್ನಾಗಿ ಆಡುತ್ತಿದ್ದಾರೆಂದು ನಿಮಗೆ ಗೊತ್ತಿದೆ. ಅವರಿನ್ನೂ ಕಚ್ಚಾ ವಸ್ತುವಿನ ಆಟಗಾರನಾಗಿದ್ದು, ಅವರು ತಮ್ಮ ಜೀವನವನ್ನು ಆನಂದಿಸುತ್ತಿದ್ದಾರೆ," ಎಂದು ಹೇಳಿದ್ದಾರೆ.
ಸೂರ್ಯವಂಶಿಗೆ ಏರಿಳಿತಗಳು ಸಹಜ
ಭಾರತವನ್ನು ಪ್ರತಿನಿಧಿಸುವಾಗ ಎದುರಾಗುವ ಅಪಾರ ನಿರೀಕ್ಷೆಗಳು ಮತ್ತು ಹೆಚ್ಚಿನ ಗಮನವೇ ವೈಭವ್ ಸೂರ್ಯವಂಶಿಗೆ ಅತ್ಯಂತ ದೊಡ್ಡ ಸವಾಲಾಗಬಹುದು ಎಂದು ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಅಭಿಪ್ರಾಯಪಟ್ಟಿದ್ದಾರೆ.
IND vs ENG: ವೈಭವ್ ಸೂರ್ಯವಂಶಿಗೆ ಆಡಿಸದ ಬಗ್ಗೆ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ!
"ನಾನು ಭಾರತದಲ್ಲಿ ಆಡಿದ ಅನುಭವ ಹೊಂದಿದ್ದೇನೆ. ಆದರೆ ಭಾರತದಲ್ಲಿ ಭಾರತೀಯ ಕ್ರಿಕೆಟಿಗನಾಗಿ ಆಡುವುದು ಸಂಪೂರ್ಣ ವಿಭಿನ್ನ ಮಟ್ಟದ ಅನುಭವ. ಎಲ್ಲರ ಗಮನ ಮತ್ತು ಅಪಾರ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರಿಗೆ ಅತಿದೊಡ್ಡ ಸವಾಲಾಗಲಿದೆ," ಎಂದು ಕರನ್ ಹೇಳಿದ್ದಾರೆ.
"ಅವರು ಇನ್ನೂ ಒಂದು ಅಥವಾ ಎರಡು ಐಪಿಎಲ್ ಋತುಗಳನ್ನು ಮಾತ್ರ ಆಡಿದ್ದಾರೆ. ಈಗಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉತ್ತಮ ವ್ಯಕ್ತಿಗಳು ಸುತ್ತಲೂ ಇದ್ದಾರೆ ಎಂಬ ವಿಶ್ವಾಸವಿದೆ. ಆದರೆ ಒಬ್ಬ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕವೇ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಗೊತ್ತಾಗುತ್ತದೆ. ಇತರ ಎಲ್ಲರಂತೆ ಅವರಿಗೂ ಏರಿಳಿತಗಳು ಸಹಜ," ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.