ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ 4 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ವಾಷಿಂಗ್ಟನ್‌ ಸುಂದರ್‌!

ಇಂಗ್ಲೆಂಡ್‌ ವಿರುದ್ದ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡದ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಅದ್ಭುತ ಬೌಲಿಂಗ್‌ ಸ್ಪೆಲ್‌ ಮಾಡಿದರು. ಬೌಲ್‌ ಮಾಡಿದ 12.1 ಓವರ್‌ಗಳಿಗೆ ಕೇವಲ 21 ರನ್‌ ನೀಡಿ 4 ವಿಕೆಟ್‌ ಕಿತ್ತರು. ಆ ಮೂಲಕ ಲಾರ್ಡ್ಸ್‌ ಅಂಗಣದಲ್ಲಿ ಭಾರತದ ಪರ ನಾಲ್ಕನೇ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಮಾಡಿದರು.

4 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ವಾಷಿಂಗ್ಟನ್‌ ಸುಂದರ್‌!

ಲಾರ್ಡ್ಸ್‌ ಅಂಗಣದಲ್ಲಿ ವಿಶೇಷ ದಾಖಲೆ ಬರೆದ ವಾಷಿಂಗ್ಟನ್‌ ಸುಂದರ್‌.

Profile Ramesh Kote Jul 14, 2025 3:58 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ (IND vs ENG) ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ (Washington Sundar ಸ್ಪಿನ್‌ ಮೋಡಿ ಮಾಡಿದರು. ಅವರು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಣದಲಲಿ ಸ್ಮರಣೀಯ ಸ್ಪೆಲ್‌ ಬೌಲ್‌ ಹಾಕಿದರು. ಆ ಮೂಲಕ ಭಾರತದ ಈ ಅಂಗಣದಲ್ಲಿ ಶ್ರೇಷ್ಠ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಮಾಡಲು ಟೀಮ್‌ ಇಂಡಿಯಾಗೆ ನೆರವು ನೀಡಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 192 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಭಾರತ ತಂಡಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು.

ಭಾನುವಾರ ಬೆಳಿಗ್ಗೆ ವಿಕೆಟ್‌ ನಷ್ಟವಿಲ್ಲದೆ 2 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಇಂಗ್ಲೆಂಡ್‌ಗೆ ಆರಂಭದಲ್ಲಿ ಮೊಹಮ್ಮದ್‌ ಸಿರಾಜ್‌ ಆಘಾತ ನೀಡಿದ್ದರು. ನಂತರ ಸ್ಪಿನ್‌ ಮೋಡಿ ಮಾಡಿದ್ದ ವಾಷಿಂಗ್ಟನ್‌ ಸುಂದರ್‌, ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್‌ (40) ಅವರನ್ನು ಔಟ್‌ ಮಾಡಿದ್ದರು. ನಂತರ ಜೇಮಿ ಸ್ಮಿತ್‌ ಹಾಗೂ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಔಟ್‌ ಮಾಡಿದ್ದರು. ನಂತರ ಕೊನೆಯಲ್ಲಿ ಶೋಯೆಬ್‌ ಬಶೀರ್‌ ಅವರನ್ನು ಔಟ್‌ ಮಾಡಿದ್ದರು. ಆ ಮೂಲಕ ಭಾರತ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟಿದ್ದರು.

IND vs ENG: `ಒಂದು ಗಂಟೆಯಲ್ಲಿ 6 ವಿಕೆಟ್‌ ಪಡೆಯುತ್ತೇವೆ'-ಭಾರತಕ್ಕೆ ಇಂಗ್ಲೆಂಡ್‌ ಕೋಚ್‌ ವಾರ್ನಿಂಗ್‌!

ಲಾರ್ಡ್ಸ್‌ ಅಂಗಣದಲ್ಲಿ ಇತಿಹಾಸ ಬರೆದ ವಾಷಿಂಗ್ಟನ್‌ ಸುಂದರ್‌

ದ್ವಿತೀಯ ಇನಿಂಗ್ಸ್‌ನಲ್ಲಿ ಒಟ್ಟು 12.1 ಓವರ್‌ ಬೌಲ್‌ ಮಾಡಿದ ವಾಷಿಂಗ್ಟನ್‌ ಸುಂದರ್‌ 22 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಲಾರ್ಡ್ಸ್‌ ಅಂಗಣದಲ್ಲಿ ನಾಲ್ಕನೇ ಅತ್ಯಂತ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ ಭಾರತದ ಸ್ಪಿನ್ನರ್‌ ಎನಿಸಿಕೊಂಡರು. ಈ ಅಂಗಣದಲ್ಲಿ ಭಾರತ ತಂಡ 20 ಬಾರಿ ಟೆಸ್ಟ್‌ ಪಂದ್ಯಗಳನ್ನು ಆಡಿದೆ. 21ನೇ ಶತಮಾನದಲ್ಲಿ ವಾಷಿಂಗ್ಟನ್‌ ನಾಲ್ಕನೇ ಅತ್ಯುತ್ತಮ ಸ್ಪೆಲ್‌ ಮಾಡಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಅವರು ಲಾರ್ಡ್ಸ್‌ ಅಂಗಣದಲ್ಲಿ ನಾಲ್ಕು ವಿಕೆಟ್‌ ಪಡೆದ ಐದನೇ ಭಾರತೀಯ ಸ್ಪಿನ್ನರ್‌ ಆಗಿದ್ದಾರೆ. 1971ರ ವೆಂಕಟ ರಾಘವನ್‌ ಬಳಿಕ ನಾಲ್ಕು ವಿಕೆಟ್‌ ಬೌಲರ್‌ ವಾಷಿಂಗ್ಟನ್‌ ಸುಂದರ್.

IND vs ENG: ವಾಷಿಂಗ್ಟನ್‌ ಸ್ಪಿನ್‌ ಮೋಡಿ, ಗೆಲುವಿನ ಸನಿಹದಲ್ಲಿ ಟೀಮ್‌ ಇಂಡಿಯಾ!

ಲಾರ್ಡ್ಸ್‌ ಅಂಗಣದಲ್ಲಿ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಮಾಡಿದ ಭಾರತೀಯ ಸ್ಪಿನ್ನರ್‌ಗಳು

ಬಿಷನ್‌ ಸಿಂಗ್‌ ಬೇಡಿ: 226-6 (1974)

ಬಿಎಸ್‌ ಚಂದ್ರಶೇಖರ್‌: 127-6 (1867)

ವಿನೂ ಮಂಕಡ್‌: 196-6 (1952)

ವಾಷಿಂಗ್ಟನ್‌ ಸುಂದರ್:‌ 22-4 (2025)

ಎಸ್‌ ವೆಂಕಟರಾಘವನ್‌: 52-5 (1971)

ಭಾರತದ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರು ತಮ್ಮ ವೃತ್ತಿ ಜೀವನದಲ್ಲಿ ಎರಡು ಬಾರಿ 3 ವಿಕೆಟ್‌ಗಳನ್ನು ಲಾರ್ಡ್ಸ್‌ ಅಂಗಣದಲ್ಲಿ ಕಬಳಿಸಿದ್ದಾರೆ. 2014ರಲ್ಲಿಯೂ ರವೀಂದ್ರ ಜಡೇಜಾ ಲಾರ್ಡ್ಸ್‌ ಅಂಗಣದಲ್ಲಿ 2 ವಿಕೆಟ್‌ ಸಾಧನೆಯನ್ನು ಮಾಡಿದ್ದರು. 2000ನೇ ಇಸವಿಯ ನಂತರ ಯಾವುದೇ ಭಾರತೀಯ ಸ್ಪಿನ್ನರ್ ಕ್ರಿಕೆಟ್‌ನ ಆಧ್ಯಾತ್ಮಿಕ ನೆಲೆಯಲ್ಲಿ ಒಂದೇ ಬಾರಿಗೆ ಒಂದು ವಿಕೆಟ್‌ಗಿಂತ ಹೆಚ್ಚು ಕಬಳಿಸುವಲ್ಲಿ ಯಶಸ್ವಿಯಾಗಿಲ್ಲ.