ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಓವಲ್‌ ಟೆಸ್ಟ್‌ ಗೆಲುವಿನ ಬೆನ್ನಲ್ಲೆ ಮೊಹಮ್ಮದ್ ಸಿರಾಜ್‌ಗೆ ಕಿಂಗ್‌ ಕೊಹ್ಲಿ ವಿಶೇಷ ಸಂದೇಶ!

ಇಂಗ್ಲೆಂಡ್‌ ವಿರುದ್ಧ ಐದನೇ ಟೆಸ್ಟ್‌ ಪಂದ್ಯದಲ್ಲಿ 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡವನ್ನು ಮಾಜಿ ನಾಯಕ ವಿರಾಟ್‌ ಕೊಹ್ಲಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿಶೇಷವಾಗಿ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರನ್ನು ಶ್ಲಾಘಿಸಿದ್ದಾರೆ.

ಮೊಹಮ್ಮದ್‌ ಸಿರಾಜ್‌ಗೆ ವಿರಾಟ್‌ ಕೊಹ್ಲಿ ವಿಶೇಷ ಸಂದೇಶ!

ಮೊಹಮ್ಮದ್‌ ಸಿರಾಜ್‌ ಅವರನ್ನು ಶ್ಲಾಘಿಸಿದ ವಿರಾಟ್‌ ಕೊಹ್ಲಿ.

Profile Ramesh Kote Aug 4, 2025 11:11 PM

ನವದೆಹಲಿ: ಓವಲ್ ಮೈದಾನದಲ್ಲಿ ಸೋಮವಾರ ಅಂತ್ಯವಾದ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ(IND vs ENG) ಇಂಗ್ಲೆಂಡ್ ವಿರುದ್ಧ ಭಾರತ ತಂಡ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಒಂದು ಹಂತದಲ್ಲಿ ಭಾರತ ತಂಡ ಸೋಲುತ್ತದೆ ಎಂದು ಭಾವಿಸಲಾಗಿತ್ತು ಆದರೆ, ಶುಭಮನ್ ಗಿಲ್ ನೇತೃತ್ವದ ತಂಡ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿತು. ಭಾರತ ತಂಡ ಈ ಪಂದ್ಯದ ಗೆಲುವಿನ ಮೂಲಕ ಟೆಸ್ಟ್‌ ಸರಣಿಯನ್ನು 2-2 ಅಂತರದಲ್ಲಿ ಸಮಬಲ ಸಾಧಿಸಿತು. ಅಂದ ಹಾಗೆ ಓವಲ್‌ ಟೆಸ್ಟ್‌ ಗೆದ್ದ ಬೆನ್ನಲ್ಲೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾರತ ತಂಡದ ಗೆಲುವಗೆ ಸಂತಸ ವ್ಯಕ್ತಪಡಿಸಿದರು ಹಾಗೂ ವಿಶೇಷವಾಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಹೊಗಳಿದರು.

ಭಾರತ ತಂಡ ನೀಡಿದ್ದ 374 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಜೋ ರೂಟ್‌ ಹಾಗೂ ಹ್ಯಾರಿ ಬ್ರೂಕ್‌ ಅವರ ಶತಕಗಳ ಬಲದಿಂದ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 339 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಐದನೇ ದಿನ ಇಂಗ್ಲೆಂಡ್‌ಗೆ ಗೆಲ್ಲಲು 35 ರನ್‌ ಅಗತ್ಯವಿತ್ತು. ಆದರೆ, ಸೋಮವಾರ ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿ ನಡೆಸಿ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

IND vs ENG: ʻನಾವೆಂದಿಗೂ ಶರಣಾಗುವುದಿಲ್ಲʼ-ಎದುರಾಳಿ ತಂಡಗಳಿಗೆ ಗೌತಮ್‌ ಗಂಭೀರ್‌ ವಾರ್ನಿಂಗ್‌!

ಮೊಹಮ್ಮದ್‌ ಸಿರಾಜ್‌ಗೆ ವಿರಾಟ್‌ ಕೊಹ್ಲಿ ಮೆಚ್ಚುಗೆ

"ಟೀಮ್ ಇಂಡಿಯಾಗೆ ಅದ್ಭುತ ಗೆಲುವು. ಸಿರಾಜ್ ಮತ್ತು ಪ್ರಸಿಧ್‌ ಅವರ ದೃಢಸಂಕಲ್ಪ ನಮಗೆ ಈ ಅದ್ಭುತ ಗೆಲುವನ್ನು ತಂದು ಕೊಡುತ್ತದೆ. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಮೊಹ್ಮದ್‌ ಸಿರಾಜ್‌ ಅವರನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಅವರಿಗೆ ತುಂಬಾ ಸಂತೋಷವಾಗಿದೆ," ಎಂದು ವಿರಾಟ್‌ ಕೊಹ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



ಕೊಹ್ಲಿ ಟ್ವೀಟ್‌ಗೆ ಸಿರಾಜ್‌ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ ಅವರ ಈ ಟ್ವೀಟ್‌ಗೆ ಮೊಹಮ್ಮದ್‌ ಸಿರಾಜ್ ಪ್ರತಿಕ್ರಿಯಿಸಿದ್ದಾರೆ. "ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ," ಎಂದು ಸಿರಾಜ್ ಕೆಂಪು ಹೃದಯದ ಎಮೋಜಿಯನ್ನು ಸಹ ಸೇರಿಸಿದ್ದಾರೆ.



ಪಂದ್ಯದ ಕೊನೆಯ ದಿನ ಭಾರತ ತಂಡ ಕೇವಲ 35 ರನ್‌ಗಳಿಗೆ 4 ವಿಕೆಟ್‌ ಅಗತ್ಯವಿತ್ತು. ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಪ್ರಸಿಧ್‌ ಕೃಷ್ಣ ಅವರಿಂದಲೂ ಸಿರಾಜ್‌ಗೆ ಸಹಾಯ ಸಿಕ್ಕಿತು. ಪ್ರಸಿಧ್‌ ತಮ್ಮ ಮೊದಲ ಎರಡು ಎಸೆತಗಳಲ್ಲಿ 8 ರನ್‌ಗಳನ್ನು ನೀಡಿದರು. ಇದಾದ ನಂತರ, ಮೊಹಮ್ಮದ್ ಸಿರಾಜ್ ಅವರ ದಾಳಿಯಿಂದ ಕಾರಣ ತಂಡ ಕಮ್‌ಬ್ಯಾಕ್‌ ಮಾಡಿತು. ಅವರು ಮೊದಲು ಜೇಮಿ ಸ್ಮಿತ್ ಮತ್ತು ನಂತರ ಜೇಮಿ ಓವರ್ಟನ್ ಅವರ ವಿಕೆಟ್ ಪಡೆದರು. ನಂತರ ಪ್ರಸಿಧ್‌ ಕೃಷ್ಣ, ಜಾಶ್ ಟಾಂಗ್ ಅವರನ್ನು ಔಟ್‌ ಮಾಡಿದರು. ಅಂತಿಮವಾಗಿ ಗಸ್‌ ಅಟ್ಕಿನ್ಸನ್‌ ಅವರನ್ನು ಸಿರಾಜ್‌ ಭಾರತಕ್ಕೆ ಗೆಲುವಿನ ಮುದ್ರೆ ಹಾಕಿದರು.