IND vs NZ: ಫೈನಲ್‌ನಲ್ಲಿ ಭಾರತಕ್ಕೆ ಅಪಾಯವಿದೆ, ಒಮ್ಮೆ ಮುಖಾಮುಖಿ ದಾಖಲೆ ನೋಡಿ!
2025ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್‌ಗೆ ತಲುಪಿತು. ಭಾರತ ತಂಡ ಈಗಾಗಲೇ ಫೈನಲ್‌ನಲ್ಲಿದೆ. ಇದೀಗ ಮಾರ್ಚ್ 9 ರಂದು ದುಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪ್ರಶಸ್ತಿ ಪಂದ್ಯ ನಡೆಯಲಿದೆ. ಐಸಿಸಿ ಟೂರ್ನಿಗಳ ಫೈನಲ್‌ಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ನ ಮುಖಾಮುಖಿ ದಾಖಲೆಯನ್ನು ಇಲ್ಲಿ ವಿವರಿಸಲಾಗಿದೆ.

ಭಾರತ vs ನ್ಯೂಜಿಲೆಂಡ್ ಫೈನಲ್ ಮುಖಾಮುಖಿ ದಾಖಲೆ

ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಫೈನಲಿಸ್ಟ್ ತಂಡವನ್ನು ಕೂಡ ನಿರ್ಧರಿಸಲಾಗಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 50 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದಕ್ಕೂ ಮುನ್ನ ಮೊದಲನೇ ಸೆಮಿಫೈನಲ್ ಗೆದ್ದಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈಗಾಗಲೇ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈಗ ಮಾರ್ಚ್ 9 ರಂದು ಉಭಯ ತಂಡಗಳ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ. ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದೆ.
1998 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಯಿತು. ಇದನ್ನು ಆರಂಭದಲ್ಲಿ ಐಸಿಸಿ ನಾಕ್ಔಟ್ ಟ್ರೋಫಿ ಎಂದು ಕರೆಯಲಾಗುತ್ತಿತ್ತು. 2000ರಲ್ಲಿ ಕೀನ್ಯಾ ಈ ಟೂರ್ನಿಯನ್ನು ಆಯೋಜಿಸಿತ್ತು. ನಂತರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪ್ರಶಸ್ತಿಗಾಗಿ ಹೋರಾಟ ನಡೆಯಿತು. ನೈರೋಬಿಯಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಭಾರತವನ್ನು ಮಣಿಸಿ ನ್ಯೂಜಿಲೆಂಡ್ ಪ್ರಶಸ್ತಿ ಎತ್ತಿ ಹಿಡಿದಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ, ಸೌರವ್ ಗಂಗೂಲಿ ಅವರ 117 ರನ್‌ಗಳ ನೆರವಿನಿಂದ 264 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್ 132 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಕ್ರಿಸ್ ಕೈರ್ನ್ಸ್ ಶತಕದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಕಿವೀಸ್ ಪಂದ್ಯವನ್ನು ಗೆದ್ದುಕೊಂಡಿತು. ಇದು ನ್ಯೂಜಿಲೆಂಡ್‌ನ ಮೊದಲ ಐಸಿಸಿ ಟ್ರೋಫಿಯಾಗಿತ್ತು.
NZ vs SA: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದ ನ್ಯೂಜಿಲೆಂಡ್!
ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದಿದ್ದ ಕಿವೀಸ್
ಐಸಿಸಿ ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡು ಬಾರಿ ಮುಖಾಮುಖಿಯಾಗಿವೆ. ನ್ಯೂಜಿಲೆಂಡ್ ಎರಡನೇ ಬಾರಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಈ ಎರಡೂ ತಂಡಗಳ ನಡುವೆ ನಡೆದಿತ್ತು. ಸೌಥ್‌ಹ್ಯಾಮ್ಟನ್‌ನ ರೋಸ್ ಬೌಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 217 ರನ್‌ಗಳನ್ನು ಗಳಿಸಿತ್ತು. ನ್ಯೂಜಿಲೆಂಡ್ 249 ರನ್ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಕೇವಲ 170 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಕಿವೀಸ್ ಎರಡು ವಿಕೆಟ್‌ಗಳಿಗೆ 140 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಫೈನಲ್ ಮುಖಾಮುಖಿ ದಾಖಲೆಯನ್ನು ಭಾರತ ತಂಡಕ್ಕೆ ಹಿನ್ನಡೆ
ಒಟ್ಟಾರೆಯಾಗಿ ಐಸಿಸಿ ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡಟೆಸಿವೆ. ಆದರೆ, ಈ ಎರಡೂ ಹಣಾಹಣಿಗಳಲ್ಲಿ ಭಾರತವನ್ನು ಸೋಲಿಸುವ ಮೂಲಕ ಕಿವೀಸ್ ಚಾಂಪಿಯನ್ ಆಗಿತ್ತು. ಹಾಗಾಗಿ ಮಾರ್ಚ್ 9 ರಂದು ನಡೆಯುವ ಫೈನಲ್‌ನಲ್ಲಿ ಭಾರತದ ಎದುರು ಮುಖಾಮುಖಿ ದಾಖಲೆಯ ಆಧಾರದ ಮೇಲೆ ನ್ಯೂಜಿಲೆಂಡ್ ತಂಡ ಮುನ್ನಡೆಯನ್ನು ಪಡೆದಿದೆ. ಆದರೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕಿವೀಸ್ ತಂಡವನ್ನು ಭಾರತ ತಂಡ 44 ರನ್‌ಗಳಿಂದ ಗೆದ್ದಿತ್ತು. ಇದೀಗ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ.
SA vs NZ: 15ನೇ ಶತಕ ಸಿಡಿಸಿ ಎಬಿಡಿ ದಾಖಲೆ ಮುರಿದ ಕೇನ್ ವಿಲಿಯಮ್ಸನ್!
ಸೆಮಿಫೈನಲ್‌ನಲ್ಲಿ 50 ರನ್‌ಗಳಿಂದ ಜಯ
ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 50 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಅವರ ಶತಕಗಳ ಸಹಾಯದಿಂದ 362 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗೆ 312 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯದ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಡೇವಿಡ್ ಮಿಲ್ಲರ್ ತಮ್ಮ ಶತಕವನ್ನು ಪೂರೈಸಿದರು. ಆದರೆ, ದಕ್ಷಿಣ ಆಫ್ರಿಕಾ ತಂಡ ಸೋಲು ಅನುಭವಿಸುವ ಮೂಲಕ ತಾವು ಚೋಕರ್ಸ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.