IND vs NZ: ಸಂಜು ಸ್ಯಾಮ್ಸನ್ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್ ಗೆದ್ದ ಭಾರತ!
IND vs NZ T20 World Cup Final Highlights: ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ಹಾಗೂ ಅಕ್ಷರ್ ಪಟೇಲ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ಪರಿಣಾಮಕಾರಿ ಬೌಲಿಂಗ್ ಸಹಾಯದಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಬಾರಿ ಚುಟುಕು ವಿಶ್ವಕಪ್ ಮುಡಿಗೇರಿಸಿಕೊಂಡಿತು.
ಕಿವೀಸ್ ಎದುರು ಫೈನಲ್‌ಗೆ ಗೆದ್ದ ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಗರಿ. -
ಅಹಮದಾಬಾದ್: ಸಂಜು ಸ್ಯಾಮ್ಸನ್ (Sanju samson) ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ಸಹಾಯದಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೀಮ್ ಇಂಡಿಯಾ ಮೂರನೇ ಚುಟುಕು ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ಸ್ ಆದ ವಿಶ್ವದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಫೈನಲ್ ಸೋಲಿನಿಂದಾಗಿ ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.
ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 256 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ ತನ್ನ ಪಾಲಿನ 19 ಓವರ್‌ಗಳಿಗೆ 159 ರನ್‌ಗಳಿಗೆ ಆಲ್‌ಔಟ್ ಆಯಿತು. ಸ್ಕೋರ್ ಬೋರ್ಡ್ ಒತ್ತಡದಲ್ಲಿ ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಿಲ್ಲ. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್ ಪ್ರತಿರೋಧ ತೋರಿ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ, ಇನ್ನುಳಿದ ಬ್ಯಾಟರ್ಸ್ ವಿಫಲರಾದರು.
IND vs NZ: 89 ರನ್ ಸಿಡಿಸಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಸಂಜು ಸ್ಯಾಮ್ಸನ್!
ಕಿವೀಸ್‌ಗೆ ಆರಂಭಿಕ ಆಘಾತ
ಬೃಹತ್ ಮೊತ್ತದ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಟಿಮ್ ಸೈಫರ್ಟ್ ಹಾಗೂ ಫಿನ್ ಆಲೆನ್, 31 ರನ್‌ಗಳ ಜೊತೆಯಾಟವನ್ನು ಆಡಿದರು. ಸೆಮಿಫೈನಲ್‌ನಲ್ಲಿ ಸ್ಪೋಟಕ ಶತಕ ಬಾರಿಸಿದ್ದ ಫಿನ್ ಆಲೆನ್, ಈ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ಶರಣಾದರು. ನಂತರ ಕ್ರೀಸ್‌ಗೆ ಬಂದ ರಚಿನ್ ರವೀಂದ್ರ ಅವರನ್ನು ಜಸ್‌ಪ್ರೀತ್ ಬುಮ್ರಾ ಕಟ್ಟಿ ಹಾಕಿದರು. ನಂತರ ಅಕ್ಷರ್ ಪಟೇಲ್ ಅಪಾಯಕಾರಿ ಗ್ಲೆನ್ ಫಿಲಿಪ್ಸ್ ಅವರನ್ನು ಔಟ್ ಮಾಡಿದರು. ಕೇವಲ 3 ರನ್‌ಗೆ ಮಾರ್ಕ್ ಚಾಪ್ಮನ್ ಅವರನ್ನು ಹಾರ್ದಿಕ್ ಪಾಂಡ್ಯ ಔಟ್ ಮಾಡಿದರು. ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ಟಿಮ್ ಸೈಫರ್ಟ್, 26 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 52 ರನ್ ಗಳಿಸಿ ಕಿವೀಸ್‌ಗೆ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ವರುಣ್ ಚಕ್ರವರ್ತಿ ಕಟ್ಟಿ ಹಾಕಿದರು. ಆ ಮೂಲಕ 72 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಿವೀಸ್ ಸಂಕಷ್ಟಕ್ಕೆ ಸಿಲುಕಿತು.
𝐂.𝐇.𝐀.𝐌.𝐏.𝐈.𝐎.𝐍.𝐒 🇮🇳#TeamIndia clinch a record 3️⃣rd ICC Men's #T20WorldCup title 🏆
— BCCI (@BCCI) March 8, 2026
Take. A. Bow 🫡#MenInBlue | #Final | #INDvNZ pic.twitter.com/nml1AZY5tK
ಅಕ್ಷರ್ ಪಟೇಲ್‌ಗೆ 3 ವಿಕೆಟ್
ಒಂದು ಆರನೇ ವಿಕೆಟ್‌ಗೆ ಡ್ಯಾರಿಲ್ ಮಿಚೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ 52 ರನ್ ಜೊತಯಾಟವನ್ನು ಆಡಿದ್ದರು. ಆದರೆ, 17 ರನ್ ಗಳಿಸಿದ ಬಳಿಕ ಮಿಚೆಲ್, ಅಕ್ಷರ್ ಪಟೇಲ್‌ಗೆ ಶರಣಾದರು. ಆದರೆ, ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡಿದ ನಾಯಕ ಮಿಚೆಲ್ ಸ್ಯಾಂಟ್ನರ್ 35 ಎಸೆತಗಳಲ್ಲಿ 43 ರನ್‌ಗಳನ್ನು ಗಳಿಸಿದರೂ ಇತರೆ ಬ್ಯಾಟರ್‌ಗಳ ವೈಫಲ್ಯದಿಂದ ತಮ್ಮ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ಭಾರತ ತಂಡದ ಪರ ಅಕ್ಷರ್ ಪಟೇಲ್ ಮೂರು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್‌ಪ್ರೀತ್ ಬುಮ್ರಾ 4 ವಿಕೆಟ್ ಸಾಧನೆ ಮಾಡಿದರು.
Let the celebrations begin 🤩
— ICC (@ICC) March 8, 2026
India are #T20WorldCup 2026 champions 🏆 pic.twitter.com/zGgQtwODwH
255 ರನ್ ಕಲೆ ಹಾಕಿದ್ದ ಟೀಮ್ ಇಂಡಿಯಾ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್ (89 ರನ್), ಅಭಿಷೇಕ್ ಶರ್ಮಾ (52 ರನ್) ಹಾಗೂ ಇಶಾನ್ ಕಿಶನ್ (54 ರನ್) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್‌ತಂಡಕ್ಕೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.
Innings Break!
— BCCI (@BCCI) March 8, 2026
A fiery batting performance takes #TeamIndia to a massive total in the #T20WorldCup #Final 👏🙌
Over to our bowlers! ⌛
Updates ▶️ https://t.co/5LXBod8bl1#MenInBlue | #INDvNZ️ pic.twitter.com/uqNTlARfK7
ಭಾರತಕ್ಕೆ ಸ್ಪೋಟಕ ಆರಂಭ ತಂದುಕೊಟ್ಟಿದ್ದ ಅಭಿ, ಸಂಜು
ಮೊದಲು ಬ್ಯಾಟ್ ಮಾಡಿದ ಭಾರತದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಮೊದಲನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿದ್ದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಕಳೆದ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ಶರ್ಮಾ, ಮಹತ್ವದ ಈ ಫೈನಲ್‌ನಲ್ಲಿ ಆಡಿದ 21 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳ ಮೂಲಕ 52 ರನ್ ಗಳಿಸಿದರು. ಇದಕ್ಕೂ ಮುನ್ನ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ವೇಗದ ಅರ್ಧಶತಕವನ್ನು ಪೂರ್ಣಗೊಳಿಸಿ ರಚಿನ್ ರವೀಂದ್ರಗೆ ಔಟ್ ಆದರು.
Innings Break!
— BCCI (@BCCI) March 8, 2026
A fiery batting performance takes #TeamIndia to a massive total in the #T20WorldCup #Final 👏🙌
Over to our bowlers! ⌛
Updates ▶️ https://t.co/5LXBod8bl1#MenInBlue | #INDvNZ️ pic.twitter.com/uqNTlARfK7
ಇಶಾನ್ ಕಿಶನ್ ಅರ್ಧಶತಕ
ಅಭಿಷೇಕ್ ಔಟ್ ಆದ ಬಳಿಕ ಸಂಜು ಸ್ಯಾಮ್ಸನ್ ಜತೆಗೆ ಆಡಿದ ಇಶಾನ್ ಕಿಶನ್ ಕೂಡ ಅಬ್ಬರಿಸಿದರು. ಅವರು ಆಡಿದ 25 ಎಸೆತಗಳಲ್ಲಿ4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 54 ರನ್ ಗಳಿಸಿದರು. ಅಲ್ಲದೆ ಸಂಜು ಜೊತೆಗೆ ಎರಡನೇ ವಿಕೆಟ್‌ಗೆ 48 ಎಸೆತಗಳಲ್ಲಿ 105 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಇಶಾನ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ 317 ರನ್‌ಗಳನ್ನು ಕಲೆ ಹಾಕಿದರು.
𝗥𝗘𝗖𝗢𝗥𝗗-𝗕𝗥𝗘𝗔𝗞𝗜𝗡𝗚 𝗦𝗧𝗔𝗡𝗗 👏
— BCCI (@BCCI) March 8, 2026
This is also the first 5️⃣0️⃣-plus opening stand in an ICC Men’s #T20WorldCup #Final 🔥
Sanju Samson 🤝 Abhishek Sharma
Updates ▶️ https://t.co/5LXBod8bl1#TeamIndia | #MenInBlue | #INDvNZ | @IamSanjuSamson | @OfficialAbhi04 pic.twitter.com/CgO0aIMsKW
ಸಂಜು ಸ್ಯಾಮ್ಸನ್ ಹ್ಯಾಟ್ರಿಕ್ ಅರ್ಧಶತಕ
ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಕಳೆದ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 97* ರನ್ ಹಾಗೂ 89 ರನ್‌ಗಳನ್ನು ಸಿಡಿಸಿದ್ದ ಸಂಜು ಸ್ಯಾಮ್ಸನ್, ನ್ಯೂಜಿಲೆಂಡ್ ಎದುರು ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಅತ್ಯಂತ ಜವಾಬ್ದಾರಿಯುತವಾಗಿ ಆಡಿದರು. ಅವರು ಆಡಿದ 46 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 89 ರನ್ ಸಿಡಿಸಿದರು. ಆದರೆ, ಕೇವಲ 11 ರನ್ ಅಂತರದಲ್ಲಿ ಶತಕ ವಂಚಿತರಾದರು. ಅವರು ಈ ಟೂರ್ನಿಯಲ್ಲಿ ಆಡಿದ 5 ಇನಿಂಗ್ಸ್‌ಗಳಿಂದ 80.25ರ ಸರಾಸರಿಯಲ್ಲಿ 321 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದರು. ಕಿವೀಸ್ ಪರ ಜೇಮ್ಸ್ ನೀಶಮ್ ಮೂರು ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 255-5 (ಸಂಜು ಸ್ಯಾಮ್ಸನ್ 89, ಇಶಾನ್ ಕಿಶನ್ 54, ಅಭಿಷೇಕ್ ಶರ್ಮಾ 52, ಶಿವಂ ದುಬೆ 26*; ಜೇಮ್ಸ್ ನೀಶಮ್ 46ಕ್ಕೆ 3)
ನ್ಯೂಜಿಲೆಂಡ್: 19 ಓವರ್‌ಗಳಿಗೆ 159-10 (ಟಿಮ್ ಸೈಫರ್ಟ್ 52, ಮಿಚೆಲ್ ಸ್ಯಾಂಟ್ನರ್ 43; ಜಸ್‌ಪ್ರೀತ್ ಬುಮ್ರಾ 15ಕ್ಕೆ 4, ಅಕ್ಷರ್ ಪಟೇಲ್ 27 ಕ್ಕೆ 3)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಸ್‌ಪ್ರೀತ್ ಬುಮ್ರಾ
ಟೂರ್ನಿ ಶ್ರೇಷ್ಠ ಪ್ರಶಸ್ತಿ: ಸಂಜು ಸ್ಯಾಮ್ಸನ್