ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ಚಾಂಪಿಯನ್‌, ರನ್ನರ್‌ ಅಪ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

India vs New Zealand: ಫೈನಲ್‌ಗೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಸಮಾರಂಭ ಆರಂಭಗೊಳ್ಳಲಿದೆ. ಖ್ಯಾತ ಗಾಯಕ ರಿಕಿ ಮಾರ್ಟಿನ್‌, ಬಾಲಿವುಡ್‌ ಹಾಗೂ ಪಂಜಾಬಿ ಗಾಯಕಿ ಸುಖ್‌ಬೀರ್‌, ಗುಜರಾತಿ ಗಾಯಕಿ ಫಲ್ಗುಣಿ ಪಾಠಕ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ.

ಟಿ20 ಚಾಂಪಿಯನ್‌, ರನ್ನರ್‌ ಅಪ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

india vs New Zealand T20 World Cup Final -

Abhilash BC
Abhilash BC Mar 8, 2026 10:01 AM

ಅಹಮದಾಬಾದ್‌, ಮಾ.8: ಭಾರತ ಮತ್ತು ನ್ಯೂಜಿಲೆಂಡ್‌(India vs New Zealand) ನುಡುವಣ ಟಿ20 ವಿಶ್ವಕಪ್‌ ಫೈನಲ್‌(T20 World Cup final) ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇತ್ತಂಡಗಳ ಪ್ರಶಸ್ತಿ ಕಾಳಗಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ ಅಣಿಯಾಗಿದೆ. ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಚಾಂಪಿಯನ್‌ ತಂಡ ಮತ್ತು ರನ್ನರ್‌ ಅಪ್‌ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತದ ವಿವರ ಇಲ್ಲಿದೆ.

ಚಾಂಪಿಯನ್‌ ತಂಡಕ್ಕೆ ₹27.58 ಕೋಟಿ ನಗದು ಬಹುಮಾನ ಸಿಗಲಿದೆ. ರನ್ನರ್‌-ಅಪ್‌ ತಂಡಕ್ಕೆ ಸಿಗಲಿರುವ ನಗದು ಬಹುಮಾನ ₹14.70 ಕೋಟಿ. ಇದಲ್ಲದೆ ಸೂಪರ್‌ 8, ಸೆಮಿಫೈನಲ್‌ ಮತ್ತು ಗುಂಪು ಹಂತದ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ಮೊತ್ತ ಸಿಗಲಿದೆ.

ಟಿ20 ವಿಶ್ವಕಪ್ 2026 ಬಹುಮಾನದ ಮೊತ್ತ

ಚಾಂಪಿಯನ್: ₹27.58 ಕೋಟಿ

ರನ್ನರ್-ಅಪ್: ₹14.70 ಕೋಟಿ

ಸೆಮಿಫೈನಲ್‌ನಲ್ಲಿ ಸೋತ ತಂಡಗಳು: ತಲಾ ₹7.24 ಕೋಟಿ

ಸೂಪರ್ 8 ಹಂತ ತಲುಪಿದ ತಂಡಗಳು: ತಲಾ ₹3.48 ಕೋಟಿ

ಗುಂಪು ಹಂತದಲ್ಲಿ ಹೊರಬಿದ್ದ ತಂಡಗಳು: ತಲಾ ₹2.29 ಕೋಟಿ

ಫೈನಲ್ ಪಂದ್ಯದ ಅಧಿಕಾರಿಗಳ ಪಟ್ಟಿ

ಆನ್‌-ಫೀಲ್ಡ್‌ ಅಂಪೈರ್‌ಗಳು: ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್

ಮೂರನೇ ಅಂಪೈರ್: ಅಲ್ಲಾಹುದ್ದೀನ್ ಪಾಲೇಕರ್

ನಾಲ್ಕನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್

ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್

ಮಿಶ್ರ ಮಣ್ಣಿನ ಪಿಚ್‌ನಲ್ಲಿ ಭಾರತ vs ಕಿವೀಸ್‌ ಟಿ20 ವಿಶ್ವಕಪ್‌ ಫೈನಲ್‌ ಫೈಟ್‌

ಫೈನಲ್‌ಗೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5.30ಕ್ಕೆ ಸಮಾರಂಭ ಆರಂಭಗೊಳ್ಳಲಿದೆ. ಖ್ಯಾತ ಗಾಯಕ ರಿಕಿ ಮಾರ್ಟಿನ್‌, ಬಾಲಿವುಡ್‌ ಹಾಗೂ ಪಂಜಾಬಿ ಗಾಯಕಿ ಸುಖ್‌ಬೀರ್‌, ಗುಜರಾತಿ ಗಾಯಕಿ ಫಲ್ಗುಣಿ ಪಾಠಕ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಲಿದ್ದಾರೆ. ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರ ಪ್ರಯಾಣಕ್ಕಾಗಿ ಪಶ್ವಿಮ ರೈಲ್ವೆ ವಿಭಾಗವು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಪಂದ್ಯ ಟೈಗೊಂಡರೆ

ಒಂದೊಮ್ಮೆ ಪಂದ್ಯ ಟೈಗೊಂಡರೆ ಸೂಪರ್‌ ಓವರ್‌ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈಗೊಂಡರೆ ಫಲಿತಾಂಶ ಬರುವ ತನಕ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಹಾಲಿ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಣ ಲೀಗ್‌ ಪಂದ್ಯ ಎರಡು ಸೂಪರ್‌ ಓವರ್‌ ಕಂಡಿತ್ತು.