IND vs NZ: ಭಾರತ ಪ್ರವಾಸದಿಂದ ನ್ಯೂಜಿಲೆಂಡ್ ವೇಗಿ ಬ್ಲೈರ್ ಟಿಕ್ನರ್ ಔಟ್! ಕಾರಣ ಇಲ್ಲಿದೆ..
ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್ ತಂಡ, ಭಾರತ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಇಲ್ಲಿ ಕಿವೀಸ್ ಸೀಮತ ಓವರ್‌ಗಳ ಸರಣಿಗಳಲ್ಲಿ ಆಡಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಕ್ಕೆ ತುತ್ತಾಗಿರುವ ವೇಗದ ಬೌಲರ್ ಬ್ಕೈರ್ ಟಿಕ್ನರ್ ಭಾರತದ ಪ್ರವಾಸದಿಂದ ಹೊರ ನಡೆದಿದ್ದಾರೆ.
ಭಾರತ ಪ್ರವಾಸದಿಂದ ಬ್ಲೈರ್ ಟಿಕ್ನರ್ ಔಟ್. -
ನವದೆಹಲಿ: ಮುಂದಿನ ಜನವರಿ ತಿಂಗಳಲ್ಲಿ ನ್ಯೂಜಿಲೆಂಡ್ ತಂಡ ಭಾರತದ ಪ್ರವಾಸವನ್ನು ಹಮ್ಮಿಕೊಂಡಿದೆ. ಆದರೆ, ಗಾಯಕ್ಕೆ ತುತ್ತಾಗಿರುವ ಕಿವೀಸ್ ವೇಗದ ಬ್ಲೈರ್ ಟಿಕ್ನರ್ (Blair Tickner) ಅವರು ಭಾರತ ಪ್ರವಾಸದ ಸೀಮಿತ ಓವರ್‌ಗಳ ಸರಣಿಯಿಂದ ಹೊರ ಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಪಂದ್ಯದ (NZ vs WI) ವೇಳೆ ಬ್ಲೈರ್ ಟಿಕ್ನರ್ ಅವರ ಭುಜ ಸ್ಥಾನಪಲ್ಲಟಗೊಂಡಿದೆ. ಹಾಗಾಗಿ ಅವರು ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ (New Zealand) ತಂಡದಿಂದ ದೂರ ಉಳಿಯಲಿದ್ದಾರೆ. ಜನವರಿ 21 ರಂದು ಇವರು ಗುಣಮುಖರಾಗಲಿದ್ದಾರೆಂದು ಹೇಳಲಾಗುತ್ತಿದೆ.
ಬಸಿನ್ ರಿವರ್ ಅಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಆರಂಭಿಕ ದಿನ ಬೌಂಡರಿ ಲೈನ್‌ನಲ್ಲಿ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿ ಡೈವ್ ಹೊಡಯುವ ವೇಳೆ ಅವರ ಭುಜ ಸ್ಥಾನಪಲ್ಲಟಗೊಂಡಿದೆ. ಇದಾದ ತಕ್ಷಣ ಅವರು ಮೈದಾನವನ್ನು ತೊರೆದಿದ್ದಾರೆ ಹಾಗೂ ಟೆಸ್ಟ್ ಸರಣಿಯಿಂದ ಹೊಡೆ ಬಿದ್ದಿದ್ದಾರೆ. ಅವರ ಗಾಯ ಗಂಭೀರವಾಗಿರುವ ಕಾರಣ ಸಂಪೂರ್ಣವಾಗಿ ಗುಣಮುಖರಾಗಲು 6 ಅಥವಾ 12 ವಾರಗಳ ಅಗತ್ಯವಿದೆ. ಜನವರಿ 11 ರಂದು ನ್ಯೂಜಿಲೆಂಡ್ ತಂಡದ ಭಾರತದ ಪ್ರವಾಸ ಆರಂಭವಾಗಲಿದೆ. ಒಡಿಐ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಕಿವೀಸ್ ವೇಗಿ ಸಂಪೂರ್ಣ ಈ ಎರಡೂ ಸರಣಿಗಳಿಂದ ಹೊರ ನಡೆದಿದ್ದಾರೆ.
IND vs SA: ವಿರಾಟ್ ಕೊಹ್ಲಿಯ ಎರಡು ವಿಶೇಷ ದಾಖಲೆಗಳನ್ನು ಮುರಿದ ತಿಲಕ್ ವರ್ಮಾ!
ಬ್ಲೈರ್ ಟಿಕ್ನರ್ ಅವರಿಗೂ ಮುನ್ನ ಮ್ಯಾಟ್ ಹೆನ್ರಿ ಕೂಡ ಗಾಯಕ್ಕೆ ತುತ್ತಾಗಿದ್ದರು. ನೇಥಮ್ ಸ್ಮಿತ್ ಕೂಡ ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ, ವಿಲ್ ಓ ರೌರ್ಕಿ ಹಾಗೂ ಕೈಲ್ ಜೇಮಿಸನ್ ಅವರು ಕೂಡ ಭಾರತದ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹಿರಿಯ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರು ಅಲಭ್ಯರಾಗಿದ್ದಾರೆ. ಹಾಗಾಗಿ ನ್ಯೂಜಿಲೆಂಡ್ ತಂಡದ ಆಯ್ಕೆಗೆ ಇದು ದೊಡ್ಡ ಸವಾಲು ಹುಟ್ಟು ಹಾಕಿದೆ. ಹಾಗಾಗಿ 2020ರ ಬಳಿಕ ಇದೇ ಮೊದಲ ಬಾರಿ ಎಜಾಜ್ ಪಟೇಲ್ ಅವರನ್ನು ಮೊದಲನೇ ಟೆಸ್ಟ್‌ಗೆ ಕರೆಸಿಕೊಳ್ಳಲಾಗಿತ್ತು. ಟಾಮ್ ಬ್ಲಂಡಲ್ ಅವರು ಸ್ನಾಯು ಸೆಳೆತದ ಗಾಯದಿಂದ ಗುಣಮುಖರಾಗಿದ್ದು, ಮೂರನೇ ಟೆಸ್ಟ್ ಪಂದ್ಯಕ್ಕೆ ಕಿವೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ಟಿಕ್ನರ್
ಗಾಯದಿಂದ ಗುಣಮುಖರಾಗಲು ಬ್ಲೈರ್ ಟಿಕ್ನರ್ ಅವರು ಈಗಾಗಲೇ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಜನವರಿ 21 ರಂದು ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆಂದು ಅಧಿಕೃತ ಮಾಹಿತಿ ಸಿಕ್ಕಿದೆ.
IND vs SA: ಮೂರನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡಿದ್ದೇಕೆ? ತಿಲಕ್ ವರ್ಮಾ ಪ್ರತಿಕ್ರಿಯೆ!
"ನಾನು ಈಗಾಗಲೇ ಜಿಮ್‌ಗೆ ಮರಳಿದ್ದೇನೆ, ನನ್ನ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದೇನೆ. ನಾನು ಉತ್ತಮ ಕ್ರಿಕೆಟ್ ಆಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ, ಆದ್ದರಿಂದ ನಾನು ಅಲ್ಲಿಗೆ ಹಿಂತಿರುಗಲು ಬಯಸುತ್ತೇನೆ, ಆದರೆ ನಾನು ಸ್ಪಷ್ಟವಾಗಿಯೂ ಸುರಕ್ಷಿತವಾಗಿರಬೇಕು. ಬಹಳಷ್ಟು ಕ್ರಿಕೆಟ್ ಆಡುವುದು ಬಾಕಿ ಇದೆ," ಎಂದು ಟಿಕ್ನರ್ ಹೇಳಿದ್ದಾರೆ.
"ನನಗೆ ಆರು ವಿಕೆಟ್‌ಗಳಲ್ಲಿ ನಾಲ್ಕು [ವಿಕೆಟ್‌ಗಳು] ಸಿಕ್ಕವು ಮತ್ತು ನಾನು ಹೆಚ್ಚಿನದನ್ನು ಹುಡುಕುತ್ತಿದ್ದೆ, ಆದರೆ ಅದು (ಗಾಯ) ಒಂದು ಕ್ಷಣದಲ್ಲಿ ಸಂಭವಿಸಿತು. ನಾನು ನನ್ನ ಇಡೀ ಜೀವನವನ್ನು ಡೈವ್ ಮಾಡಿದಂತೆ ಸಾಮಾನ್ಯವಾಗಿ ಡೈವ್ ಮಾಡಿದೆ ಮತ್ತು ಸ್ವಲ್ಪ ವಿಭಿನ್ನವಾಗಿ ನೆಲಕ್ಕೆ ಅಪ್ಪಳಿಸಿದೆ. ಅದು ಭುಜದ ಸ್ನಾಯು ಹೊರಬಂದಿತು ಮತ್ತು ಅದು ಉತ್ತಮ ಅನುಭವವಾಗಿರಲಿಲ್ಲ, ಆದರೆ ಅದೃಷ್ಟವಶಾತ್, ಗಂಭೀರ ಗಾಯದಿಂದ ತಪ್ಪಿಸಿಕೊಂಡಿದ್ದೇನೆ," ಎಂದು ಬ್ಲೈರ್ ಟಿಕ್ನರ್ ತಿಳಿಸಿದ್ದಾರೆ.