ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ:ʻಫುಟ್‌ವರ್ಕ್‌ ಸರಿಯಿಲ್ಲʼ-ಸಂಜು ಸ್ಯಾಮ್ಸನ್‌ ವಿರುದ್ಧ ಗುಡುಗಿದ ಸುನೀಲ್‌ ಗವಾಸ್ಕರ್‌!

Sunil gavaskar on Sanju Samson: ನ್ಯೂಜಿಲೆಂಡ್‌ ವಿರುದ್ಧ ನಾಲ್ಕನೇ ಪಂದ್ಯದಲ್ಲಿಯೂ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಅವರು 24 ರನ್‌ ಗಳಿಸಿದ ಬಳಿಕ ಮಿಚೆಲ್‌ ಸ್ಯಾಂಟ್ನರ್‌ ಅವರ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಪಂದ್ಯದ ಬಳಿಕ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌, ಸಂಜು ವೈಫಲ್ಯಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!

Sunil Gavaskar on Sanju samson -

Profile
Ramesh Kote Jan 29, 2026 5:00 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿಯೂ (IND vs NZ) ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ (Sanju Samson) ವಿಫಲರಾದರು. ಅವರು 24 ರನ್‌ ಗಳಿಸಿದ ಬಳಿಕ ಮಿಚೆಲ್‌ ಸ್ಯಾಂಟ್ನರ್‌ ಅವರ ಬೌಲಿಂಗ್‌ನಲ್ಲಿ ಕ್ಕೀನ್‌ ಬೌಲ್ಡ್‌ ಆದರು. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ ಇಟ್ಟಿದ್ದ ನಂಬಿಕೆಯನ್ನು ಮತ್ತೊಮ್ಮೆ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಕಳೆದುಕೊಂಡರು. ಸಂಜು ವಿಕೆಟ್‌ ಒಪ್ಪಿಸಿದ ಬಳಿಕ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಟೀಕಿಸಿದ್ದಾರೆ. ಸಂಜು ಸ್ಯಾಮ್ಸನ್‌ ವೈಫಲ್ಯ ಅನುಭವಿಸಲು ಕಾರಣವೇನೆಂದು ಬ್ಯಾಟಿಂಗ್‌ ದಿಗ್ಗಜ ತಿಳಿಸಿದ್ದಾರೆ.

ಶುಭಮನ್‌ ಗಿಲ್‌ ಅವರನ್ನು ತಂಡದಿಂದ ಕೈ ಬಿಟ್ಟ ಬಳಿಕ ಸಂಜು ಸ್ಯಾಮ್ಸನ್‌ಗೆ ಆರಂಭಿಕ ಸ್ಥಾನವನ್ನು ನೀಡಲಾಯಿತು. ಆದರೆ, ಅವರು ಈ ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಗಳಿಸಿರುವುದು ಕೇವಲ 40 ರನ್‌ಗಳು ಮಾತ್ರ. 15 ಎಸೆತಗಳಲ್ಲಿ 24 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರ ಹೊರತಾಗಿಯೂ ಸಂಜು ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದೀಗ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಅವರ ಸ್ಥಾನದ ಬಗ್ಗೆ ಅನುಮಾನಗಳು ಉಂಟಾಗಿವೆ.

IND vs NZ: ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್‌!

ಸಂಜು ವಿಕೆಟ್‌ ಒಪ್ಪಿಸಲು ಕಾರಣ ತಿಳಿಸಿದ ಗವಾಸ್ಕರ್‌

ಈ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸುನೀಲ್‌ ಗವಾಸ್ಕರ್‌, "ನನ್ನ ಮೊದಲ ಅನಿಸಿಕೆ ಏನೆಂದರೆ, ಸಂಜು ಸ್ಯಾಮ್ಸನ್‌ ಅವರ ಕಡೆಯಿಂದ ಯಾವುದೇ ಫುಟ್‌ವರ್ಕ್ ಇರಲಿಲ್ಲ. ಚೆಂಡಿನಿಂದ ಯಾವುದೇ ಟರ್ನ್‌ ಇದೆಯೋ ಇಲ್ಲವೋ ಎಂದು ನನಗೆ ಖಚಿತವಿಲ್ಲ; ಮೊದಲ ಅನಿಸಿಕೆ ಎಂದರೆ ಅವರು ನಿಂತಲ್ಲಿಯೇ ನಿಂತು, ಸ್ಥಳಾವಕಾಶ ಮಾಡಿಕೊಂಡು ಆಫ್ ಸೈಡ್ ಮೂಲಕ ಆಡುತ್ತಿದ್ದರು," ಎಂದು ಸುನೀಲ್‌ ಗವಾಸ್ಕರ್ ಹೇಳಿದ್ದಾರೆ.

"ನಾನು ಹೇಳಿದಂತೆ, ಅವರ ಪಾದಗಳಲ್ಲಿ ಯಾವುದೇ ಚಲನೆ ಇರಲಿಲ್ಲ. ಲೆಗ್-ಸ್ಟಂಪ್ ಹೊರಗೆ ಹೋಗುವುದು, ಮತ್ತೊಮ್ಮೆ ಮೂರು ಸ್ಟಂಪ್‌ಗಳನ್ನು ಬಿಟ್ಟು ಆಡುವುದು. ಒಂದು ವೇಳೆ ನೀವು ಚೆಂಡನ್ನು ಬಿಟ್ಟು ಆಡಿದಾಗ, ಬೌಲರ್‌ ಸ್ಟಂಪ್ಸ್‌ಗೆ ಚೆಂಡನ್ನು ಹೊಡೆಯುತ್ತಾನೆ. ಸಂಜು ಸ್ಯಾಮ್ಸನ್‌ ಪಾಲಿಗೆ ಎರಡನೇ ಬಾರಿ ಇದು ಸಂಭವಿಸಿದೆ," ಎಂದು ಬ್ಯಾಟಿಂಗ್‌ ದಿಗ್ಗಜ ತಿಳಿಸಿದ್ದಾರೆ.

IND vz NZ: 4 ಕ್ಯಾಚ್‌ ಪಡೆದು ಅಜಿಂಕ್ಯ ರಹಾನೆ ದಾಖಲೆ ಸರಿಗಟ್ಟಿದ ರಿಂಕು ಸಿಂಗ್!‌

50 ರನ್‌ಗಳಿಂದ ಭಾರತವನ್ನು ಮಣಿಸಿದ ಕಿವೀಸ್‌

ಇನ್ನು ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್‌ ತಂಡ, ಟಿಮ್‌ ಸೀಫರ್ಟ್‌ (62 ರನ್)‌, ಡೆವೋನ್‌ ಕಾನ್ವೆ (44 ರನ್‌) ಹಾಗೂ ಡ್ಯಾರಿಲ್‌ ಮಿಚೆಲ್‌ (39 ರನ್‌) ಅವರು ತಮ್ಮ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 215 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 216 ರನ್‌ಗಳ ಗುರಿಯನ್ನು ನೀಡಿತು.

ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶಿವಂ ದುಬೇ ಅರ್ಧಶತಕದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 165 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 50 ಓವರ್‌ಗಳಿಂದ ಸೋಲು ಒಪ್ಪಿಕೊಂಡಿತು. ಭಾರತದ ಪರ ಶಿವಂ ದುಬೆ ಅವರು 23 ಎಸೆತಗಳಲ್ಲಿ 65 ರನ್‌ ಸಿಡಿಸಿದರು. ರಿಂಕು ಸಿಂಗ್‌ 39 ರನ್‌ ಗಳಿಸಿದ್ದರು. ಕಿವೀಸ್‌ ಪರ ಮಿಚೆಲ್‌ ಸ್ಯಾಂಟ್ನರ್‌ 3 ವಿಕೆಟ್‌ ಕಿತ್ತರು.