IND vs NZ: ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!
IND vs NZ 4th T20I Highlights: ಟಿಮ್ ಸೀಫರ್ಟ್ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ತಂಡ, ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 50 ರನ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಆರಂಭಿಕ ಮೂರು ಪಂದ್ಯಗಳ ಸೋಲಿನ ಬಳಿಕ ಭಾರತ ತಂಡಕ್ಕೆ ತಿರುಗೇಟು ನೀಡಿತು.
ನ್ಯೂಜಿಲೆಂಡ್ ಎದುರು ಭಾರತ ತಂಡಕ್ಕೆ 50 ರನ್ ಸೋಲು. -
ವಿಶಾಖಪಟ್ಟಣ: ಟಿಮ್ ಸೀಫರ್ಟ್ (Tim Seifert) ಅರ್ಧಶತಕ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಸ್ಪಿನ್ ಮೋಡಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20ಐ ಪಂದ್ಯದಲ್ಲಿ(IND vs NZ) ಭಾರತದ ವಿರುದ್ಧ 50 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಭಾರತ ತಂಡಕ್ಕೆ (India) ಕಿವೀಸ್ ತಿರುಗೇಟು ನೀಡಿತು. ಈ ಪಂದ್ಯದ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಈಗಾಗಲೇ ಟಿ20ಐ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಹಾಗಾಗಿ ಈ ಪಂದ್ಯದ ಸೋಲಿನಿಂದ ಭಾರತಕ್ಕೆ ಯಾವುದೇ ನಷ್ಟವಿಲ್ಲ.
ಬುಧವಾರ ಇಲ್ಲಿನ ಆಂಧ್ರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 216 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಶಿವಂ ದುಬೆ ಅರ್ಧಶತಕದ ಹೊರತಾಗಿಯೂ 18.4 ಓವರ್‌ಗಳಿಗೆ 165 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಈ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು. ಭಾರತದ ಪರ ಶಿವಂ ದುಬೆ (65 ರನ್) ಅವರ ಜೊತೆ ರಿಂಕು ಸಿಂಗ್ ಹಾಗೂ ಸಂಜು ಸ್ಯಾಮ್ಸನ್ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು.
IND vz NZ: 4 ಕ್ಯಾಚ್ ಪಡೆದು ಅಜಿಂಕ್ಯ ರಹಾನೆ ದಾಖಲೆ ಸರಿಗಟ್ಟಿದ ರಿಂಕು ಸಿಂಗ್!
ಶಿವಂ ದುಬೆ ಅರ್ಧಶತಕ ವ್ಯರ್ಥ
ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ವಿಫಲರಾದರು. ಇನ್ನು ಕಳೆದ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್, 24 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿಗಣಿಸುವಲ್ಲಿ ವಿಫಲರಾದರು. ರಿಂಕು ಸಿಂಗ್ 39 ರನ್ ಗಳಿಸಿದ ಬಳಿಕ ಔಟ್ ಆದರು. ಆದರೆ, ಶಿವಂ ದುಬೆ ದೀರ್ಘಾವಧಿ ಬ್ಯಾಟ್ ಮಾಡಿ, ಕೇವಲ 23 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 65 ರನ್ ಗಳಿಸಿ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಮ್ಯಾಟ್ ಹೆನ್ರಿ ರನ್‌ಔಟ್ ಮಾಡಿದರು. ಅಂತಿಮವಾಗಿ ಭಾರತದ ಇನಿಂಗ್ಸ್ ಮುಕ್ತಾಯವಾಯಿತು.
6⃣5⃣ off just 23 deliveries 👌👌
— BCCI (@BCCI) January 28, 2026
End of a blistering knock from Shivam Dube 👏👏
Updates ▶️ https://t.co/GVkrQKKyd6 #TeamIndia | #INDvNZ | @IDFCFIRSTBank pic.twitter.com/L1FKjze4VI
ಕಿವೀಸ್ ಪರ ಅತ್ಯುತ್ತಮ ಬೌಲ್ ಮಾಡಿದ ಮಿಚೆಲ್ ಸ್ಯಾಂಟ್ನರ್ ಮೂರು ವಿಕೆಟ್ ಪಡೆದರೆ, ಜಾಕೋಬ್ ಡಫಿ ಮತ್ತು ಇಶ್ ಸೋಧಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
215 ರನ್ ಕಲೆ ಹಾಕಿದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ನ್ಯೂಜಿಲೆಂಡ್ ತಂಡ, ಟಿಮ್ ಸೀಫರ್ಟ್ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 216 ರನ್‌ಗಳ ಗುರಿಯನ್ನು ನೀಡಿತು.
New Zealand win the 4th T20I by 50 runs in Vizag.#TeamIndia lead the series 3⃣-1⃣
— BCCI (@BCCI) January 28, 2026
Scorecard ▶️ https://t.co/GVkrQKKyd6 #INDvNZ | @IDFCFIRSTBank pic.twitter.com/zkfXdvEwGD
ಟಾಸ್ ಗೆದ್ದು ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಲೆಕ್ಕಾಚಾರವನ್ನು ಆರಂಭಿಕರಾದ ಡೆವೋನ್ ಕಾನ್ವೆ ಹಾಗೂ ಟಿಮ್ ಸೀಫರ್ಟ್ ತಲೆಕೆಳಗಾಗುವಂತೆ ಮಾಡಿದರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟವನ್ನು ಆಡಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ಡೆವೋನ್ ಕಾನ್ವೆ ಅವರು 23 ಎಸೆತಗಳಲ್ಲಿ 44 ರನ್‌ಗಳನ್ನು ಸಿಡಿಸಿ, ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
T20 World Cup 2026: ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ರಾಹುಲ್ ದ್ರಾವಿಡ್!
ಟಿಮ್ ಸೀಫರ್ಟ್ ಅಬ್ಬರ
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಟಿಮ್ ಸೀಫರ್ಟ್ ಅವರು ಆಡಿದ 36 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 62 ರನ್‌ಗಳನ್ನು ಸಿಡಿಸಿದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡ್ಯಾರಿಲ್ ಮಿಚೆಲ್ ಕೇವಲ 18ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿದ್ದರು. ಇದಕ್ಕೂ ಮುನ್ನ ಗ್ಲೆನ್ ಫಿಲಿಪ್ಸ್ ಅವರು 24 ರನ್‌ಗಳ ಕೊಡುಗೆಯನ್ನು ನೀಡಿದರು.
ಭಾರತದ ಪರ ಅರ್ಷದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.