ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ವಿರಾಟ್‌ ಕೊಹ್ಲಿಯ ಟಿ20ಐ ದಾಖಲೆ ಮುರಿಯುವ ಸನಿಹದಲ್ಲಿ ಅಭಿಷೇಕ್‌ ಶರ್ಮಾ!

ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದರೂ ಅಭಿಷೇಕ್‌ ಶರ್ಮಾ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾಗಿದ್ದಾರೆ. ಆದರೆ, ಅವರಿಗೆ ಇನ್ನೂ ನಾಲ್ಕು ಇನಿಂಗ್ಸ್‌ಗಳು ಬಾಕಿ ಇವೆ. ಈ ನಾಲ್ಕು ಪಂದ್ಯಗಳಿಂದ 99 ರನ್‌ ಬಾರಿಸಿದರೆ ವಿರಾಟ್‌ ಕೊಹ್ಲಿಯ ದಾಖಲೆ ಮುರಿಯಲಿದ್ದಾರೆ.

ವಿರಾಟ್‌ ಕೊಹ್ಲಿಯ ದೊಡ್ಡ ದಾಖಲೆ ಮೇಲೆ ಅಭಿಷೇಕ್‌ ಶರ್ಮಾ ಕಣ್ಣು!

ವಿರಾಟ್‌ ಕೊಹ್ಲಿಯ ದಾಖಲೆ ಮುರಿಯುವ ಸನಿಹದಲ್ಲಿ ಅಭಿಷೇಕ್‌ ಶರ್ಮಾ. -

Profile
Ramesh Kote Dec 11, 2025 4:29 PM

ಮುಂಬೈ: ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ (IND vs SA) ವಿರುದ್ದದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 101 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಎರಡನೇ ಪಂದ್ಯದಲ್ಲಿ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆರಂಭಿಕ ಅಭಿಷೇಕ್‌ ಶರ್ಮಾ ((Abhishek Sharma)ಕೀ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರು ವಿರಾಟ್‌ ಕೊಹ್ಲಿಯ(Virat Kohli) ವಿಶೇಷ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಅಭಿಷೇಕ್‌ ಶರ್ಮಾ ಅವರು ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿ ಬಾಕಿ ಇರುವ ನಾಲ್ಕು ಇನಿಂಗ್ಸ್‌ಗಳಲ್ಲಿ 99 ರನ್‌ ಬಾರಿಸಿದರೆ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20ಐ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಈ ದಾಖಲೆ ವಿರಾಟ್‌ ಕೊಹ್ಲಿಯವರ ಹೆಸರಿನಲ್ಲಿದೆ. ಅವರು 2016ರಲ್ಲಿ 29 ಇನಿಂಗ್ಸ್‌ಗಳಿಂದ 1614 ರನ್‌ ಕಲೆಹಾಕಿದ್ದರು. ವಿರಾಟ್‌ ಕೊಹ್ಲಿಯ ಈ ದಾಖಲೆಯ ಮೇಲೆ ಅಭಿಷೇಕ್‌ ಶರ್ಮಾ ಕಣ್ಣಿಟ್ಟಿದ್ದಾರೆ. ಅಭಿಷೇಕ್‌ ಶರ್ಮಾ ಅವರು ಈ ವರ್ಷದಲ್ಲಿ 37 ಇನಿಂಗ್ಸ್‌ಗಳನ್ನಾಡಿದ್ದು, 1516 ರನ್‌ ಬಾರಿಸಿದ್ದಾರೆ. ಇನ್ನು 99 ರನ್‌ ಬಾರಿಸಿದರೆ ಅವರು ಈ ದಾಖಲೆಯನ್ನು ಬರೆಯಲಿದ್ದಾರೆ.

IND vs SA 2nd T20I: ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ ವಿವರ!

ಆದರೆ, ಅವರಿಗೆ ಈ ವರ್ಷದಲ್ಲಿ ಆಡಲು ಸಿಗುವುದು ಕೇವಲ 4 ಇನಿಂಗ್ಸ್‌ಗಳು ಮಾತ್ರ. ಏಕೆಂದರೆ ಭಾರತ ಮತ್ತು ದಕ್ಷಿಣ ಆಪ್ರಿಕಾ ನಡುವೆ ನಡೆಯುತ್ತಿರುವ ಟಿ20ಐ ಸರಣಿ ಡಿಸೆಂಬರ್‌ 19ರಂದು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಟೀಮ್‌ ಇಂಡಿಯಾ, ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯನ್ನು ಮುಂದಿನ ವರ್ಷ ಆರಂಭದಲ್ಲಿ ಆಡಲಿದೆ. ನಂತರ ನಡೆಯುವ ಟಿ20ಐ ಸರಣಿಯನ್ನು ಆಡಲಿದೆ. ಅಭಿಷೇಕ್‌ ಶರ್ಮಾ, ಶುಭ್‌ಮನ್‌ ಗಿಲ್‌ ಅವರ ಜೊತೆ ಆರಂಭಿಕರಾಗಿ ಟೀಮ್‌ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸುವುದರಿಂದ ಅವರಿಗೆ ಈ ದಾಖಲೆ ಮುರಿಯಲು ಸಾಕಷ್ಟು ಅವಕಾಶವಿದೆ.

ಇತ್ತೀಚಿಗೆ ಸಿಕ್ಸರ್‌ ದಾಖಲೆ ಬರೆದಿದ್ದ ಅಭಿಷೇಕ್‌ ಶರ್ಮಾ

ಟಿ20 ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಅಭಿಷೇಕ್‌ ಶರ್ಮಾ ತವರು ನೆಲದಲ್ಲಿ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾ, ಯುಎಇ ಹಾಗೂ ಆಸ್ಟ್ರೇಲಿಯಾದಲ್ಲೂ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಕ್ಯಾಲೆಂಡರ್‌ ವರ್ಷದಲ್ಲಿ ನೂರಕ್ಕೂ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ಬರೆದಿದ್ದರು.

IND vs SA: ಭಾರತ ಟಿ20 ತಂಡದಲ್ಲಿ ಸಮಸ್ಯೆ ಹುಟ್ಟು ಹಾಕಿದ ಶುಭಮನ್‌ ಗಿಲ್‌!

ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 47 ಸಿಕ್ಸರ್‌ಗಳು ಹಾಗೂ ದೇಶಿ ಕ್ರಿಕೆಟ್‌ನಲ್ಲಿ 54 ಸಿಕ್ಸರ್‌ ಸಿಡಿಸಿ ಈ ದಾಖಲೆಯನ್ನು ಬರೆದಿದ್ದರು. ಇನ್ನು ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಕಣಕ್ಕಿಳಿಯುವ ಅಭಿಷೇಕ್‌, 2025 ರ ಐಪಿಎಲ್‌ ಸೀಸನ್‌ನ 14 ಇನಿಂಗ್ಸ್‌ಗಳಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಸೈಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ 26 ಸಿಕ್ಸರ್‌ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯ ಇಂದು (ಡಿಸೆಂಬರ್‌ 11) ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.