ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನೀವು ಸೋಲು ಅರ್ಹರುʼ: ಕೋಲ್ಕತಾ ಟೆಸ್ಟ್‌ ಸೋತ ಭಾರತ ತಂಡವನ್ನು ಟೀಕಿಸಿದ ಮೈಕಲ್‌ ವಾನ್‌! ‌

ದಕ್ಷಿಣ ಆಫ್ರಿಕಾ ವಿರುದ್ಧ ಕಡಿಮೆ ಮೊತ್ತವನ್ನು ಚೇಸ್‌ ಮಾಡಲು ಸಾಧ್ಯವಾಗದೆ ಸೋಲು ಅನುಭವಿಸಿದ ಭಾರತ ತಂಡವನ್ನು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಟೀಕಿಸಿದ್ದಾರೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಕಠಿಣವಾಗಿತ್ತು. ಆದರೆ, ಇಂಥಾ ಪಿಚ್‌ನಲ್ಲಿ 124 ರನ್‌ಗಳನ್ನು ಚೇಸ್‌ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಭಾರತ ತಂಡ ಸೋಲಲು ಅರ್ಹವಾಗಿದೆ ಎಂದ ಮೈಕಲ್‌ ವಾನ್‌!

ಕಡಿಮೆ ಚೇಸ್‌ ಮಾಡಲಾಗದೆ ಸೋತ ಭಾರತ ತಂಡವನ್ನು ಟೀಕಿಸಿದ ಮೈಕಲ್‌ ವಾನ್‌. -

Profile
Ramesh Kote Nov 17, 2025 1:18 PM

ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs SA) ಭಾರತ ತಂಡ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಪಿಚ್‌ ಬಗ್ಗೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಟೀಕಿಸಿದ್ದಾರೆ. ಇಲ್ಲಿನ ಪಿಚ್‌ ಬೌನ್ಸ್‌ ಹಾಗೂ ಚೆಂಡು ಹೆಚ್ಚಿನ ತಿರುವು ಪಡೆಯುತ್ತಿತ್ತು, ಈ ಕಾರಣದಿಂದ ಬ್ಯಾಟ್ಸ್‌ಮನ್‌ಗಳ ಪಾಲಿನ ಇಲ್ನಲಿ ಪಿಚ್‌ ಸಿಂಹ ಸ್ವಪ್ನವಾಗಿತ್ತು. ಹರಿಣ ಪಡೆಯ ನಾಯಕ ತೆಂಬಾ ಬವೂಮಾ (Temba Bavuma) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೂ ಪಿಚ್‌ ಯಾವ ರೀತಿ ಇದ್ದರೂ ಆಫ್ರಿಕಾ ನೀಡಿದ್ದ ಕಡಿಮೆ ಮೊತ್ತವನ್ನು ಭಾರತ ತಂಡ ಸುಲಭವಾಗಿ ಮುಟ್ಟಬಹುದಾಗಿತ್ತು. ಹಾಗಾಗಿ ಸೋಲಲು ಭಾರತ ತಂಡ ಅರ್ಹವಾಗಿದೆ ಎಂದು ಮೈಕಲ್‌ ವಾನ್‌ ವ್ಯಂಗ್ಯವಾಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಕೇವಲ 124 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ಗುರಿ ಹಿಂಬಾಲಿಸಿದ್ದ ಭಾರತ ತಂಡ, ಮಾರ್ಕೊ ಯೆನ್ಸನ್‌ ಮಾರಕ ದಾಳಿ ಹಾಗೂ ಸೈಮನ್‌ ಹಾರ್ಮರ್‌ ಸ್ಪಿನ್‌ ಮೋಡಿಗೆ ನಲುಗಿ 93 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ 30 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ತಮ್ಮ ಎಕ್ಸ್‌ ಖಾತೆಯಲ್ಲಿ ಮೈಕಲ್‌ ವಾನ್‌, "ನೀವು ಈ ರೀತಿಯ ಪಿಚ್‌ ಅನ್ನು ತಯಾರಿ ನಡೆಸಿದರೆ, ನೀವು ವಿಶ್ವ ಚಾಂಪಿಯನ್ಸ್‌ ಎದುರು ಸೋಲಲು ಕೂಡ ಅರ್ಹರಾಗಿರುತ್ತೀರಿ," ಎಂದು ಟೀಕಿಸಿದ್ದಾರೆ.

IND vs SA: 124 ರನ್‌ ಚೇಸ್‌ ಮಾಡಲಾಗದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!

ಭಾರತ ತಂಡಕ್ಕೆ ನಾಯಕ ಶುಭಮನ್‌ ಗಿಲ್‌ ಸೇಲೆ ಇರಲಿಲ್ಲ. ಅವರು ಪ್ರಥಮ ಇನಿಂಗ್ಸ್‌ನಲ್ಲಿ ಕುತ್ತಿಗೆಯ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರು ಬ್ಯಾಟ್‌ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಭಾರತ ಕೇವಲ 10 ಬ್ಯಾಟ್ಸ್‌ಮನ್‌ಗಳನ್ನು ಮಾತ್ರ ಬಳಿಸಿಕೊಂಡಿತ್ತು. ಇದು ಭಾರತ ತಂಡಕ್ಕೆ ಹಿನ್ನಡೆಯನ್ನು ತಂದುಕೊಟ್ಟಿತ್ತು. ಮೈಕಲ್‌ ವಾನ್‌ ಮಾತ್ರವಲ್ಲ ಹಲವು ಕ್ರಿಕೆಟಿಗರು ಕೂಡ ಪಿಚ್‌ ಅನ್ನು ಟೀಕಿಸಿದ್ದರು. ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, "ಟೆಸ್ಟ್‌ ಕ್ರಿಕೆಟ್‌ನ ಅಪಹಾಸ್ಯ" ಎಂದು ವ್ಯಂಗ್ಯವಾಡಿದ್ದರು.

ಕೋಲ್ಕತಾ ಪಿಚ್‌ ಅನ್ನು ಬೆಂಬಲಿಸಿದ ಗಂಭೀರ್‌

ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಿಚ್‌ ಬಗ್ಗೆ ಪ್ರಶ್ನೆಗಳು ಹಾಗೂ ಟೀಕೆಗಳು ಬಂದ ಬೆನ್ನಲ್ಲೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಇಲ್ಲಿನ ಪಿಚ್‌ ಅನ್ನು ಸಮರ್ಥಿಸಿಕೊಂಡರು. "ಸ್ಪಿನ್‌ಗೆ ಹೇಗೆ ಆಡಬೇಕೆಂಬುದು ಈ ಪಿಚ್‌ನಿಂದ ನಿಮಗೆ ಗೊತ್ತಾಗಲಿದೆ. ನಾವು ಕೂಡ ಇದೇ ಪಿಚ್‌ ಅನ್ನೇ ಕೇಳಿದ್ದೆವು. ಇಲ್ಲಿನ ಪಿಚ್‌ ಕ್ಯುರೇಟರ್‌ ಕೂಡ ಬೆಂಬಲವಾಗಿ ನಿಂತಿದ್ದರು," ಎಂದು ಈಡನ್‌ ಗಾರ್ಡನ್ಸ್‌ ಪಿಚ್‌ ಬಗ್ಗೆ ಗೌತಮ್‌ ಗಂಭೀರ್‌ ಸಮರ್ಥಿಸಿಕೊಂಡರು.

IND vs SA:ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಶುಭಮನ್‌ ಗಿಲ್‌ ಎರಡನೇ ಟೆಸ್ಟ್‌ಗೆ ಅನುಮಾನ!

"ಪಿಚ್‌ ಹೇಗೆ ಇರಲಿ ಅಥವಾ ಕಂಡೀಷನ್ಸ್‌ ಹೇಗೆ ಇರಲಿ, 124 ರನ್‌ಗಳು ನೀವು ಸುಲಭವಾಗಿ ಚೇಸ್‌ ಮಾಡಬಹುದಾದ ಮೊತ್ತವಾಗಿದೆ. ನೀವು ನಿಮ್ಮ ತಲೆಯನ್ನು ಬಗ್ಗಿಸಿ ಆಡಿದರೆ, ನೀವು ಉತ್ತಮ ಡಿಫೆನ್ಸ್‌ ಹೊಂದಿದ್ದರೆ ಹಾಗೂ ಸರಿಯಾದ ದೃಡ ಸಂಕಲ್ಪ ಇದ್ದರೆ, ನೀವು ಖಚಿತವಾಗಿಯೂ ರನ್‌ಗಳನ್ನು ಕಲೆ ಹಾಕಬಹುದು. ನೀವು ಅಂದುಕೊಂಡಂತೆ ಆಡುವ ಪಿಚ್‌ ಇದಾಗಿರಲಿಲ್ಲ. ಆದರೆ, ನೀವು ಖಂಡಿತ ರನ್‌ಗಳನ್ನು ಗಳಿಸಬಹುದು," ಎಂದು ಹೆಡ್‌ ಕೋಚ್‌ ತಿಳಿಸಿದ್ದಾರೆ.