ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ವಾಷಿಂಗ್ಟನ್‌ ಸುಂದರ್‌ ಬಗ್ಗೆ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ದಿನೇಶ್‌ ಕಾರ್ತಿಕ್!

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ದಿನೇಶ್‌ ಕಾರ್ತಿಕ್‌, ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಅವರಿಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನೀಡಿದರೆ, ಅವರ ಬೌಲಿಂಗ್‌ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಬಗ್ಗೆ ಭಾರತಕ್ಕೆ ದಿನೇಶ್‌ ಕಾರ್ತಿಕ್‌ ವಾರ್ನಿಂಗ್‌!

ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ದಿನೇಶ್‌ ಕಾರ್ತಿಕ್‌. -

Profile
Ramesh Kote Nov 17, 2025 3:01 PM

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs SA) 30 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ (Washington Sundar) ಅವರಿಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಭಾರತದ ಪರ ವೈಯಕ್ತಿಕ ಸ್ಕೋರರ್‌ ಕೂಡ ಇವರೇ. ಆದರೆ, ಈ ಬಗ್ಗೆ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಕಳವಳ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್‌ ಸುಂದರ್‌ಗೆ ಬ್ಯಾಟಿಂಗ್‌ ಕಡೆಗೆ ಗಮನ ಹರಿಸುವಂತೆ ಹೇಳಿದರೆ, ಅವರ ಬೌಲಿಂಗ್‌ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತಾ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಾಷಿಂಗ್ಟನ್‌ ಸುಂದರ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 29 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 31 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡದ ಪರ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದರು. ಅಂದ ಹಾಗೆ ತಮಿಳುನಾಡು ಮೂಲದ ಆಲ್‌ರೌಂಡರ್‌, 16 ಟೆಸ್ಟ್‌ ಪಂದ್ಯಗಳಿಂದ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs SA:ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಶುಭಮನ್‌ ಗಿಲ್‌ ಎರಡನೇ ಟೆಸ್ಟ್‌ಗೆ ಅನುಮಾನ!

ಭಾರತ ತಂಡಕ್ಕೆ ದಿನೇಶ್‌ ಕಾರ್ತಿಕ್‌ ಎಚ್ಚರಿಕೆ

ಕ್ರಿಕ್‌ಬಝ್‌ ಜೊತೆ ಮಾತನಾಡಿದ ದಿನೇಶ್‌ ಕಾರ್ತಿಕ್‌, "ವಾಷಿಂಗ್ಟನ್ ಸುಂದರ್ ಎಂಬ ಟೆಸ್ಟ್ ಆಟಗಾರನನ್ನು ಎಲ್ಲಿ ನೋಡಲಾಗುತ್ತಿದೆ? ಅವರು ಬ್ಯಾಟಿಂಗ್ ಮಾಡಬಲ್ಲ ಬೌಲರ್ ಆಗಿದ್ದಾರೆಯೇ? ಈಗ ನೀವು ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳುಹಿಸುತ್ತಿದ್ದರೆ, ಅವರು ಬ್ಯಾಟಿಂಗ್ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ನೀವು ಅವರಿಗೆ ಹೇಳುತ್ತಿದ್ದೀರಿ. ನೀವು ಅವರನ್ನು ಹೆಚ್ಚು ಸಮಯ ಬ್ಯಾಟಿಂಗ್‌ ಅಭ್ಯಾಸ ನಡೆಸಲು ಕಳುಹಿಸುತ್ತಿದ್ದರೆ, ಅವರು ಹೆಚ್ಚಿನ ಸಮಯ ಬ್ಯಾಟಿಂಗ್‌ ಅಭ್ಯಾಸದಲ್ಲಿ ಕಳೆದರೆ, ಅವರು ಬೌಲಿಂಗ್‌ ಕಡೆಗೆ ಗಮನ ಕೊಡುವುದು ಯಾವಾಗ? ಎರಡೂ ಕಡೆ ಅವರು ಗಮನ ಕೊಡಬೇಕೆಂದರೆ ಇದು ದೈಹಿಕವಾಗಿ ಕಷ್ಟವಾಗುತ್ತದೆ. ನೀವು ಅವರ ಕಡೆಯಿಂದ ದೊಡ್ಡ ಮೊತ್ತದ ಇನಿಂಗ್ಸ್‌ ಅನ್ನು ನಿರೀಕ್ಷೆ ಮಾಡುತ್ತಿದ್ದರೆ, ಇವರಿಂದ ಅವರ ಬೌಲಿಂಗ್‌ ಮೇಲೆ ದೀರ್ಘಾವಧಿ ಪರಿಣಾಮ ಬೀರಲಿದೆ. ಇದು ನಿಜಕ್ಕೂ ಕಠಿಣ ಸಂಗತಿ," ಎಂದು ಹೇಳಿದ್ದಾರೆ.

ind vs sa 2nd test: 2ನೇ ಟೆಸ್ಟ್‌ನಲ್ಲಿ ಗಿಲ್ ಸ್ಥಾನ ತುಂಬಲು ಕರುಣ್‌, ಪಡಿಕ್ಕಲ್‌ ಸೇರಿ 5 ಆಟಗಾರರ ಮಧ್ಯೆ ಪೈಪೋಟಿ

ವಾಷಿಂಗ್ಟನ್‌ ಸುಂದರ್‌ ಬಗ್ಗೆ ಶಾನ್‌ ಪೊಲಾಕ್‌ ಅಭಿಪ್ರಾಯ

ಕೋಲ್ಕತಾ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ವಾಷಿಂಗ್ಟನ್‌ ಸುಂದರ್‌ ಅವರನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆಲ್‌ರೌಂಡರ್‌ ಶಾನ್‌ ಪೊಲಾಕ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌, ವಾಷಿಂಗ್ಟನ್‌ ಸುಂದರ್‌ಗೆ 4-5 ಟೆಸ್ಟ್‌ ಪಂದ್ಯಗಳಲ್ಲಿ ಅವಕಾಶ ನೀಡಿದರೆ, ಅವರು ಹೇಗೆ ಕಾಣಲಿದ್ದಾರೆ ನೋಡಬಹುದು ಎಂದು ಹೇಳಿದ್ದಾರೆ.

"ಅಪ್ಲಿಕೇಷನ್‌ ಸರಿಯಾಗಿದೆ. ಮೂರನೇ ಕ್ರಮಾಂಕದಲ್ಲಿ ಅವರು ಇನ್ನೂ ತಮ್ಮ ಗೇಮ್‌ ಪ್ಲ್ಯಾನ್‌ ಮೇಲೆ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಆ ಮೂಲಕ ತಾವು ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು ಹಾಗೂ ಯಾವಾಗ ಸಕಾರಾತ್ಮಕವಾಗಿ ಇರಬೇಕೆಂದು ಎಂಬ ವಿಷಯಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಅವರು ಈ ಪಯಣಕ್ಕೆ ಅರ್ಹರಾಗಿದ್ದಾರೆ. ಅವರನ್ನು ಸಕಾರಾತ್ಮಕವಾಗಿ ಉಳಿಯುವಂತೆ ನೋಡಿಕೊಳ್ಳಬೇಕು ಹಾಗೂ ಅವರಿಗೆ 4 ರಿಂದ 5 ಟೆಸ್ಟ್‌ ಪಂದ್ಯಗಳಲ್ಲಿ ಅವಕಾಶ ನೀಡಬೇಕಾಗುತ್ತದೆ, ಆ ಮೂಲಕ ಈ ಕ್ರಮಾಂಕದಲ್ಲಿ ಅವರು ಹೇಗೆ ಕಾಣುತ್ತಾರೆಂದು ತಿಳಿಯಲಿದೆ. ಇದು ಅವರ ಪಾಲಿಗೆ ಕೆಲಸ ಮಾಡಿಲ್ಲವಾದರೆ, ನೀವು ಆಗ ಬದಲಾವಣೆಯನ್ನು ಮಾಡಬಹುದು. ಅವರನ್ನು ಸರಿಯಾಗಿ ಬಳಿಸಿಕೊಳ್ಳುತ್ತಿಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಅವರನ್ನು ಇದೀಗ ಅಗ್ರ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿಸುತ್ತಿರುವುದು ನಿಜಕ್ಕೂ ಒಳ್ಳೆಯ ನಡೆಯಾಗಿದೆ," ಎಂದು ಶಾನ್‌ ಪೊಲಾಕ್‌ ತಿಳಿಸಿದ್ದಾರೆ.