ʻನನ್ನ ಬ್ಯಾಟಿಂಗ್ ತೃಪ್ತಿ ಕೊಟ್ಟಿದೆʼ: ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದಿದು!
Virat Kohli Statement: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬಳಿಕ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಮುಕ್ತವಾಗಿ ಬ್ಯಾಟ್ ಮಾಡುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ. 300ಕ್ಕೂ ಅಧಿಕ ರನ್ ಗಳಿಸಿದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹೇಳಿಕೆ. -
ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯ ಏಕದಿನ ಸರಣಿಯಲ್ಲಿನ (IND vs SA) ತಮ್ಮ ಬ್ಯಾಟಿಂಗ್ ಪ್ರದರ್ಶನವು ಸಂಪೂರ್ಣ ತೃಪ್ತಿ ತಂದಿದೆ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ(Virat Kohli) ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ತಾನು ಮುಕ್ತವಾಗಿ ಬ್ಯಾಟ್ ಮಾಡುತ್ತಿದ್ದು, ತನ್ನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರುತ್ತಿದೆ ಎಂದು ತಿಳಿಸಿದ್ದಾರೆ. ಅಂದ ಹಾಗೆ ಮೂರನೇ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಭಾರತ (India) ತಂಡದ 9 ವಿಕೆಟ್‌ಗಳ ಗೆಲುವಿಗೆನೆರವು ನೀಡಿದರು. ಅಂತಿಮವಾಗಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.
ಇಲ್ಲಿನ ಆಂಧ್ರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 271 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ (116) ಶತಕ ಬಾರಿಸಿದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅರ್ಧಶತಕಗಳನ್ನು ಸಿಡಿಸಿದರು. ಇದರ ಆಧಾರದ ಮೇಲೆ ಭಾರತ ತಂಡ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ವಿರಾಟ್ ಕೊಹ್ಲಿ 302 ರನ್‌ಗಳ ಮೂಲಕ ತಮ್ಮ ವೃತ್ತಿ ಜೀವನದ 12ನೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
IND vs SA: ಯಶಸ್ವಿ ಜೈಸ್ವಾಲ್ ಶತಕ, ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ಮುಡಿಗೇರಿಸಿಕೊಂಡ ಭಾರತ!
ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಅತ್ಯುತ್ತಮ ಹಂತದಲ್ಲಿದ್ದೇನೆಂದು ಹೇಳಿಕೊಂಡಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿ ಸಂತೋಷದಿಂದ ಹೊಳೆಯುತ್ತಿದ್ದರು, ಅವರ ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಸ್ವಾತಂತ್ರ್ಯವು ಅವರ ಮುಖದಲ್ಲಿನ ನಗುವಿನ ಮೂಲಕ ಹೊಳೆಯುತ್ತಿತ್ತು. ಕಳೆದ ಎರಡು-ಮೂರು ವರ್ಷಗಳಿಂದ ಇದೀಗ ಉತ್ತಮ ಲಯದಲ್ಲಿದ್ದೇನೆಂದು ಹೇಳಿಕೊಂಡಿದ್ದಾರೆ.
Virat Kohli Post Match Interview After Winning Player of the Series. 302 Runs In The Series.😍🥳
— Muhammad Aawez (@i_am_Aawez) December 6, 2025
GOAT FOR A REASON. 🔥 🏏 #INDvsSA3rdodi
pic.twitter.com/2CKq4mCw6e
ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್ ಕೊಹ್ಲಿ ಕೇವಲ ಒಂದೇ ಒಂದು ಸ್ವರೂಪದಲ್ಲಿ ಆಡುತ್ತಿದ್ದಾರೆ. ಹಾಗಾಗಿ ಅವರ ಮೇಲೆ ಹೆಚ್ಚಿನ ಒತ್ತಡವಿಲ್ಲ. ಇದು ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಎದ್ದು ಕಾಣುತ್ತಿದೆ. ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕಗಳು ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ.
IND vs SA: 20000 ರನ್‌ಗಳಿಂದ ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ರೋಹಿತ್ ಶರ್ಮಾ!
"ನಿಜ ಹೇಳಬೇಕೆಂದರೆ, ಈ ಸರಣಿಯಲ್ಲಿ ನಾನು ಆಡಿದ ರೀತಿಯಲ್ಲಿ ಆಡುವುದು ನನಗೆ ಅತ್ಯಂತ ತೃಪ್ತಿಕರ ವಿಷಯವಾಗಿದೆ. ನಾನು ಈ ರೀತಿ ಎರಡು, ಮೂರು ವರ್ಷಗಳಿಂದ ಆಡಿಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ನನ್ನ ಮನಸ್ಸಿನಲ್ಲಿ ನಿಜವಾಗಿಯೂ ಮುಕ್ತ ಭಾವನೆ ಇದೆ. ಇಡೀ ಆಟವು ಚೆನ್ನಾಗಿ ಒಟ್ಟಾಗಿ ಬರುತ್ತಿದೆ," ಎಂದು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ದಾಖಲೆಯ 12ನೇ ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ನಂತರ ಹೇಳಿದ್ದಾರೆ.
"ಇದನ್ನು ಮುಂದುವರಿಸುವುದು ತುಂಬಾ ರೋಮಾಂಚಕಾರಿಯಾಗಿದೆ ಮತ್ತು ಒಬ್ಬ ಆಟಗಾರನಾಗಿ ನಾನು ಯಾವಾಗಲೂ ಇದನ್ನೇ ಮಾಡಲು ಪ್ರಯತ್ನಿಸುತ್ತೇನೆ. ನಾನು ನನಗಾಗಿ ನಿಗದಿಪಡಿಸಿದ ನನ್ನದೇ ಆದ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಮತ್ತು ತಂಡಕ್ಕಾಗಿ ನಾನು ಪ್ರಭಾವ ಬೀರುವ ಮಟ್ಟದಲ್ಲಿ ಆಡುವುದು ನನ್ನ ಗುರಿಯಾಗಿದೆ," ಎಂದು ಅವರು ತಿಳಿಸಿದ್ದಾರೆ.