ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL: ಕೊಲಂಬೊದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಸಾರಾಂಶ್‌ ಜೈನ್?

ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಪರ ಮಧ್ಯಪ್ರದೇಶದ ಆಲ್‌ರೌಂಡರ್ ಸಾರಾಂಶ್ ಜೈನ್ ಪದಾರ್ಪಣೆ ಮಾಡುವ ಸನಿಹದಲ್ಲಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿಯಾಗಿ ಅವರು ಹೊರಹೊಮ್ಮಿದ್ದಾರೆ.

ಕೊಲಂಬೊದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಸಾರಾಂಶ್‌ ಜೈನ್‌ ಪದಾರ್ಪಣೆ ಸಾಧ್ಯತೆ!

ಕೊಲಂಬೊದಲ್ಲಿ ಸಾರಾಂಶ್‌ ಜೈನ್‌ ಆಡುವ ಸಾಧ್ಯತೆ ಇದೆ. -

Profile
Ramesh Kote Aug 20, 2026 3:05 PM

ನವದೆಹಲಿ: ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs SL) ಮಧ್ಯಪ್ರದೇಶದ ಆಲ್‌ರೌಂಡರ್ ಸಾರಾಂಶ್ ಜೈನ್ (Saransh Jain) ಭಾರತ ತಂಡದ ಪರ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹಿರಿಯರ ತಂಡದಲ್ಲಿ ಮೊದಲ ಅವಕಾಶ ಪಡೆಯಲು ಸಜ್ಜಾಗಿರುವ ಸಾರಾಂಶ್, ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲೂ ಸ್ಥಾನ ಪಡೆಯುವ ಉತ್ತಮ ಅವಕಾಶ ಹೊಂದಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಸಾರಾಂಶ್ ಜೈನ್ ಪದಾರ್ಪಣೆ ಮಾಡಿದರೆ, ಅವರಿಗಾಗಿ ಕುಲ್‌ದೀಪ್ ಯಾದವ್ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯುವ ಸಾಧ್ಯತೆ ಇದೆ. 33ರ ವಯಸ್ಸಿನ ಆಫ್‌ಸ್ಪಿನ್ನರ್ ಸಾರಾಂಶ್‌ಗೆ ಅವಕಾಶ ನೀಡಲು ಕುಲ್‌ದೀಪ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಟರ್ನಿಂಗ್‌ ಪಿಚ್‌ನಲ್ಲಿಯೂ ಕುಲ್‌ದೀಪ್ ಯಾದವ್‌ ನಿರೀಕ್ಷಿತ ಪರಿಣಾಮ ಬೀರಲು ವಿಫಲರಾಗಿದ್ದರು. ಅವರು ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಭಾರತ ತಂಡ ಶ್ರೀಲಂಕಾವನ್ನು 165 ರನ್‌ಗಳಿಂದ ಸೋಲಿಸಿ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

93 ವರ್ಷಗಳ ಹಳೆಯ ಬೌಲಿಂಗ್ ದಾಖಲೆ ಸರಿಗಟ್ಟಿದ ಮಾನವ್ ಸುತಾರ್

ಗಾಲೆ ಪಿಚ್‌ನಲ್ಲಿ ಮಾನವ್ ಸುತಾರ್ ಒಟ್ಟು 10 ವಿಕೆಟ್‌ಗಳ ಸಾಧನೆ ಮಾಡಿದರೆ, ರವೀಂದ್ರ ಜಡೇಜಾ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು. ಆದರೆ ಕುಲ್‌ದೀಪ್‌ಗೆ ಮಾತ್ರ ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದ ಅವರು, ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯದೆ ಮುಗಿಸಿದ್ದರು. ಒಟ್ಟಾರೆ ಕುಲ್ದೀಪ್‌ ಯಾದವ್‌ 25 ಓವರ್‌ಗಳಲ್ಲಿ 103 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.

ಕುಲ್‌ದೀಪ್ ಅವರ ಈ ಪ್ರದರ್ಶನ ಕೊಲಂಬೊ ಟೆಸ್ಟ್‌ಗೂ ಮುನ್ನ ತಂಡದಲ್ಲಿನ ಅವರ ಸ್ಥಾನಕ್ಕೆ ಒತ್ತಡ ತಂದಿದೆ. ಮತ್ತೊಂದೆಡೆ, ಪದಾರ್ಪಣೆಯ ಪಂದ್ಯದಲ್ಲೇ ಮಾನವ್ ಸುತಾರ್ ಗಮನಾರ್ಹ ಪ್ರದರ್ಶನ ನೀಡಿರುವುದು ಮತ್ತು ಜಡೇಜಾ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಭಾರತದ ಸ್ಪಿನ್ ವಿಭಾಗದಲ್ಲಿ ಸ್ಥಾನಕ್ಕಾಗಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಗಾಲೆಯಲ್ಲಿ 165 ರನ್‌ಗಳ ಗೆಲುವು ಸಾಧಿಸಿದ ಭಾರತ ತಂಡ ಇದೀಗ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಹೊಂದಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯವಾಗಿದ್ದು, ಗೆಲುವಿನ ಮೂಲಕ ಸರಣಿಯಲ್ಲಿ ಪ್ರವಾಸಿ ತಂಡ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಭಾರತ

ಸಾರಾಂಶ್‌ ಜೈನ್‌ ಯಾರು?

1993ರ ಇಂದೋರ್‌ನಲ್ಲಿ ಜನಿಸಿರುವ ಸಾರಾಂಶ್‌ ಜೈನ್‌ 2014-15ರ ಸಾಲಿನಲ್ಲಿ ಮಧ್ಯ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇವರ ತಂದೆ ಸುಬೋಧ್‌ ಜೈನ್‌ ಕೂಡ ಮಧ್ಯ ಪ್ರದೇಶ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದಾರೆ.

ಸುಬೋಧ್‌ ಅವರು ಭಾರತ ತಂಡದ ಪರ ಆಡಬೇಕೆಂಬ ಕನಸು ಕಂಡಿದ್ದರೂ ಅವರು ತಡವಾಗಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ತಮ್ಮ ಪುತ್ರನ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಸಾರಾಂಶ್‌ ಜೈನ್‌ ಅವರ ಹಿರಿಯ ಅಣ್ಣ ಕೂಡ ಆರಂಭಿಕ ದಿನಗಳಲ್ಲಿ ಕ್ರಿಕೆಟ್‌ ಆಡಿದ್ದರು. ಆದರೆ, ಅವರು ಮುಂದುವರಿಯಲು ಸಾಧ್ಯವಾಗದೆ, ಇದೀಗ ಸಾರಾಂಶ್‌ ಅವರನ್ನು ಮುನ್ನಡೆಸುತ್ತಿದ್ದಾರೆ.

ಸಾರಾಂಶ್‌ ಜೈನ್‌ ಅವರು ಇಂದೋರ್‌ನ ವಿಜಯ್‌ ಕ್ಲಬ್‌ನಲ್ಲಿ ತಮ್ಮ ಕ್ರಿಕೆಟ್‌ ಕೌಶಲವನ್ನು ವೃದ್ದಿಸಿಕೊಂಡಿದ್ದರು. ಇಲ್ಲಿ ಅವರು ಮಧ್ಯ ಪ್ರದೇಶ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ನಾಯಕ ರಜತ್‌ ಪಾಟಿದಾರ್‌ ಅವರ ಜೊತೆಯೂ ಆಡಿದ್ದಾರೆ.