IND vs SL: ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಶುಭಮನ್ ಗಿಲ್‌ರ ಗಾಯದ ಭೀತಿ!
Shubman Gill Injury: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಅಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಗಾಯಗಳಾಗಿದ್ದು, ಪ್ರವಾಸಿ ತಂಡದ ಕ್ಯಾಂಪ್‌ನಲ್ಲಿ ಆತಂಕ ಉಂಟಾಗಿದೆ.
ಅಭ್ಯಾಸದ ವೇಳೆ ಶುಭಮನ್ ಗಿಲ್‌ಗೆ ಗಾಯ. -
ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ (IND vs SL) ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರಿಗೆ ಎರಡು ಗಾಯಗಳ ಭೀತಿ ಎದುರಾಗಿದೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗಿಲ್ ಅವರ ಹೆಬ್ಬೆರಳಿಗೆ ಚೆಂಡು ತಗುಲಿ ಗಾಯವಾಗಿದೆ. ಈ ವೇಳೆ ಆಗಮಿಸಿದ ಫಿಸಿಯೊ ಅವರ ಬ್ಯಾಟಿಂಗ್ ಪುನರಾರಂಭಿಸಲು ಅನುಮತಿ ನೀಡಿದರು. ಎರಡನೇ ಬಾರಿ ಚೆಂಡು ತಗುಲಿದ ಬಳಿಕ ಅವರು ನೋವು ಅನುಭವಿಸಿದ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯುವ ವೇಳೆ ಅವರ ಬಲಗೈಗೆ ಚೆಂಡು ತಗುಲಿತ್ತು. ಮತ್ತೊಮ್ಮೆ ಫಿಸಿಯೊ ನೆಟ್ಸ್ ಬಳಿಕ ಗಿಲ್ ಅವರ ಗಾಯವನ್ನು ತಪಾಸಣೆ ನಡೆಸಿದರು. ಈ ವೇಳೆ ನೂತನ ಫೀಲ್ಡಿಂಗ್ ಕೋಚ್ ಕೂಡ ಸೇರಿದರು.
ಭಾರತ ತಂಡದ ನಾಯಕ ಶುಭಮನ್ ಗಿಲ್ ಸಂಪೂರ್ಣ ಫಿಟ್ ಆಗಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿ ಎಂಬುದು ಭಾರತ ತಂಡದ ಪ್ರಮುಖ ನಿರೀಕ್ಷೆಯಾಗಿದೆ. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ವಿವಿಧ ಗಾಯಗಳ ಕಾರಣದಿಂದ ಗಿಲ್ ಈಗಾಗಲೇ ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಅವರು ಸಂಪೂರ್ಣ ಫಿಟ್ನೆಸ್ ಕಾಯ್ದುಕೊಂಡು ಸರಣಿಯ ಎಲ್ಲ ಪಂದ್ಯಗಳಲ್ಲೂ ಆಡಿದರೆ ತಂಡಕ್ಕೆ ದೊಡ್ಡ ಬಲವಾಗಲಿದೆ.
IND vs SL: ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಬಲವಾದ ಸಂದೇಶ ರವಾನಿಸಿದ ಗೌತಮ್ ಗಂಭೀರ್!
ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಸ್ವೀಕರಿಸಿದ ಶುಭಮನ್ ಗಿಲ್ ಇದೇ ಮೊದಲ ಬಾರಿ ಶ್ರೀಲಂಕಾ ಎದುರು ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ ಗಿಲ್ ಈ ಸ್ಥಾನವನ್ನು ಅಲಂಕರಿಸಿದ್ದರು. 2025ರ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿ ಭಾರತ ತಂಡವನ್ನು ಗಿಲ್ ಮುನ್ನಡೆಸಿದ್ದರು ಹಾಗೂ ಈ ಸರಣಿ ಡ್ರಾನಲ್ಲಿ ಅಂತ್ಯವಾಗಿತ್ತು.
ಅಭ್ಯಾಸ ಪಂದ್ಯಗಳಿಗೆ ಸಾಯಿ ಸುದರ್ಶನ್ ಔಟ್
ಶ್ರೀಲಂಕಾ ಎದುರು ಅಭ್ಯಾಸ ಪಂದ್ಯಗಳಿಗೆ ಸಾಯಿ ಸುದರ್ಶನ್ ಅವರು ಅಲಭ್ಯರಾಗಿದ್ದಾರೆ. ಅವರ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದರು. ಅವರು ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಾರದಲ್ಲಿ ಅವರು ಶ್ರೀಲಂಕಕ್ಕೆ ತೆರಳಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
🚨 Big Setback for Team India 🚨
— Central Cricket (@arshdeep3444) August 6, 2026
Team India captain Shubman Gill suffered an injury during a practice session. While attempting a catch, the ball struck his thumb, leaving him in considerable pain. The team physio rushed in and provided immediate treatment as Gill looked… pic.twitter.com/On2ihguKCe
ಸುದರ್ಶನ್ ಅವರು ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ 7 ಟೆಸ್ಟ್ ಪಂದ್ಯಗಳಿಂದ 383 ರನ್‌ಗಳು ಕಲೆ ಹಾಕಿದ್ದರು.ಅವರು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಮೂರು ಅರ್ಧಶತಕಗಳನ್ನು ಕಲೆ ಹಾಕಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು ಸತತ ಶತಕಗಳನ್ನು ಬಾರಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಒಡಿಐ ಪಂದ್ಯದಲ್ಲಿ ಗಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಮೂರನೇ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಅವರು ಫಿಟ್ ಆಗಿದ್ದರೆ, 2026ರ ಏಷ್ಯಾ ಗೇಮ್ಸ್‌ನಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದೆ.