ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಸಿಸಿ ಮಹಿಳಾ ಚಾಂಪಿಯನ್ಸ್‌ ಟ್ರೋಫಿಗೆ ಭಾರತಕ್ಕೆ ಮೊದಲ ಬಾರಿ ಆತಿಥ್ಯ: ಜಯ ಶಾ ಸ್ಪಷ್ಟನೆ!

ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಆವೃತ್ತಿಗೆ ಭಾರತ ಆತಿಥ್ಯ ವಹಿಸಲಿದೆ. 2027ರ ಫೆಬ್ರವರಿ 14ರಿಂದ 28ರವರೆಗೆ ನಡೆಯಲಿರುವ ಈ ಮಹತ್ವದ ಟೂರ್ನಿಯ ಪಂದ್ಯಗಳು ಮುಂಬೈ ಮತ್ತು ವಡೋದರದಲ್ಲಿ ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ.

ಮಹಿಳಾ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಭಾರತ ಆತಿಥ್ಯ: ಐಸಿಸಿ ಸ್ಪಷ್ಟನೆ!

ಮಹಿಳಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ಆತಿಥ್ಯ. -

Profile
Ramesh Kote Sep 2, 2026 9:06 PM

ನವದೆಹಲಿ: ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿಯ (ICC Champions Trophy 2027) ಚೊಚ್ಚಲ ಆವೃತ್ತಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ. 2027ರ ಫೆಬ್ರವರಿ 14ರಿಂದ 28ರವರೆಗೆ ನಡೆಯಲಿರುವ ಆರು ತಂಡಗಳ ಟೂರ್ನಿಗೆ ಮುಂಬೈ ಮತ್ತು ವಡೋದರ ಆತಿಥ್ಯ ವಹಿಸಲಿವೆ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ಹಾಗೂ ವಡೋದರಾ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಐಸಿಸಿ ಮಹಿಳಾ ಟಿ20ಐ ತಂಡಗಳ ರ‍್ಯಾಂಕಿಂಗ್‌ನಲ್ಲಿ ಜುಲೈ 6ರ ಅರ್ಹತಾ ಗಡುವಿನ ವೇಳೆಯಲ್ಲಿದ್ದ ಸ್ಥಾನಮಾನದ ಆಧಾರದ ಮೇಲೆ ಈ ಆರು ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ. ಎಲ್ಲಾ ಆರು ತಂಡಗಳು ರೌಂಡ್-ರಾಬಿನ್ ಲೀಗ್ ಹಂತದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಲೀಗ್ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಫೆಬ್ರವರಿ 28ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಣಕ್ಕಿಳಿಯಲಿವೆ.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡ ದೇವದತ್ತ ಪಡಿಕ್ಕಲ್; ಕುಸಿತ ಕಂಡ ಬುಮ್ರಾ, ಗಿಲ್‌

ಟೂರ್ನಿಯ ಆತಿಥ್ಯ ಶ್ರೀಲಂಕಾದಿಂದ ಭಾರತಕ್ಕೆ ಬದಲಾವಣೆ

ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಮೂಲತಃ ಶ್ರೀಲಂಕಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್‌ನಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಟೂರ್ನಿಯ ಆತಿಥ್ಯವನ್ನು ಸ್ಥಳಾಂತರಿಸಲು ಐಸಿಸಿ ನಿರ್ಧರಿಸಿತು.

ಸೆಪ್ಟೆಂಬರ್ 2ರಂದು ಐಸಿಸಿ ಮಂಡಳಿ ಈ ನಿರ್ಧಾರಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ಭಾರತವನ್ನು ಬದಲಿ ಆತಿಥೇಯ ರಾಷ್ಟ್ರವಾಗಿ ದೃಢಪಡಿಸಿದೆ. ಆತಿಥ್ಯಕ್ಕಾಗಿ ಬಾಂಗ್ಲಾದೇಶ, ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಐಸಿಸಿ ನಿಗದಿಪಡಿಸಿದ್ದ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಪರಿಶೀಲಿಸಲಾಗಿತ್ತು.

Duleep Trophy 2026: ಉತ್ತರ ವಲಯ ಎದುರು ಗೆದ್ದು 24ನೇ ಬಾರಿ ಫೈನಲ್‌ಗೇರಿದ ದಕ್ಷಿಣ ವಲಯ!

ಮಹಿಳಾ ಕ್ರಿಕೆಟ್‌ಗೆ ಮತ್ತೊಂದು ದೊಡ್ಡ ವೇದಿಕೆ: ಜಯ ಶಾ

ಐಸಿಸಿ ಅಧ್ಯಕ್ಷ ಜಯ ಶಾ ಅವರು ಮಹಿಳಾ ಚಾಂಪಿಯನ್ಸ್ ಟ್ರೋಫಿ ವಿಶ್ವದ ಶ್ರೇಷ್ಠ ತಂಡಗಳಿಗೆ ಮತ್ತೊಂದು ಪ್ರಮುಖ ವೇದಿಕೆಯನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“2027ರ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ವಿಶ್ವದ ಅತ್ಯುತ್ತಮ ತಂಡಗಳು ತೀವ್ರ ಪೈಪೋಟಿಯ, ಉತ್ತಮ ಗುಣಮಟ್ಟದ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ. ರ‍್ಯಾಂಕಿಂಗ್‌ನಲ್ಲಿ ಮೇಲೇರಲು ಹಾಗೂ ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆಯಲು ತಂಡಗಳಿಗೆ ಇದು ಮತ್ತಷ್ಟು ಪ್ರೇರಣೆ ನೀಡಲಿದೆ,” ಎಂದು ಜಯ ಶಾ ಹೇಳಿದ್ದಾರೆ.

“ಪ್ರತಿ ವರ್ಷ ಐಸಿಸಿ ಮಹಿಳಾ ಕ್ರಿಕೆಟ್‌ನ ಪ್ರಮುಖ ಟೂರ್ನಿಯೊಂದು ನಡೆಯುವುದರಿಂದ ಮಹಿಳಾ ಕ್ರಿಕೆಟ್‌ಗೆ ಮತ್ತಷ್ಟು ವೇಗ ನೀಡಲು, ನಿರಂತರತೆ ಹೆಚ್ಚಿಸಲು ಮತ್ತು ಆಟಗಾರರು ಹಾಗೂ ಅಭಿಮಾನಿಗಳಿಗೆ ಉತ್ತಮ ವಾತಾವರಣ ಸೃಷ್ಟಿಸಲು ಇದು ಮಹತ್ವದ ಅವಕಾಶವಾಗಿದೆ,” ಎಂದು ಅವರು ತಿಳಿಸಿದ್ದಾರೆ.