IND vs SL 2nd Test: ಧ್ರುವ್ ಜುರೆಲ್ ಶತಕ, ದೊಡ್ಡ ಮೊತ್ತ ಕಲೆ ಹಾಕಿದ ಭಾರತ ತಂಡ!
IND vs SL 2nd Test Day 2 Highlights: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಭಾರತ ತಂಡ ಮೇಲುಗೈ ಸಾಧಿಸಿದೆ. ಧ್ರುವ್ ಜುರೆಲ್ ಶತಕದ ಬಲದಿಂದ ಭಾರತ ಪ್ರಥಮ ಇನಿಂಗ್ಸ್ ಅನ್ನು 503 ರನ್‌ಗಳಿಗೆ ಡಿಕ್ಲೆರ್ ಮಾಡಿಕೊಂಡಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 8 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಕೊಲಂಬೊ ಟೆಸ್ಟ್‌ನ ಎರಡನೇ ದಿನವೂ ಭಾರತ ತಂಡ ಮೇಲುಗೈ. -
ಕೊಲಂಬೊ: ಧ್ರುವ್ ಜುರೆಲ್ (Dhruv Jurel) ಭರ್ಜರಿ ಶತಕ ಹಾಗೂ ರಿಷಭ್ ಪಂತ್ (Rishabh Pant) ಅವರ ಅರ್ಧಶತಕದ ಬಲದಿಂದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದ (IND vs SL) ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಅಲ್ಲದೆ, ಎರಡನೇ ದಿನದಾಟದ ಅಂತ್ಯಕ್ಕೆ ಎದುರಾಳಿ ಶ್ರೀಲಂಕಾ ತಂಡದ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಎರಡನೇ ದಿನದಾಟದಲ್ಲಿಯೂ ಮೇಲುಗೈ ಸಾಧಿಸಿದೆ.
ಸೋಮವಾರ ಬೆಳಿಗ್ಗೆ 5 ವಿಕೆಟ್ ನಷ್ಟಕ್ಕೆ 300 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡ, ಧ್ರುವ್ ಜುರೆಲ್ ಶತಕ ಹಾಗೂ ರಿಷಭ್ ಪಂತ್ ಅವರ ಅರ್ಧಶತಕದ ಬಲದಿಂದ, ಪ್ರಥಮ ಇನಿಂಗ್ಸ್‌ನಲ್ಲಿ 138 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 503 ರನ್‌ಗಳನ್ನು ಕಲೆ ಹಾಕಿತು. ತದ ನಂತರ ಭಾರತ ತಂಡ ಡಿಕ್ಲೆರ್ ಮಾಡಿಕೊಂಡಿತು. ಮಳೆಯ ಅಡೆತಡೆಯಿಂದ ತಡವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಮೂರು ಓವರ್‌ಗಳಿಗೆ ಕೇವಲ 8 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ.
IND vs SL: ಭಾರತ ತಂಡದ ಏಳನೇ ಕ್ರಮಾಂಕದಲ್ಲಿ ಎರಡನೇ ಟೆಸ್ಟ್ ಶತಕ ಸಿಡಿಸಿದ ಧ್ರುವ್ ಜುರೆಲ್!
ಪಂತ್-ಜರೆಲ್ ಶತಕದ ಜೊತೆಯಾಟ
ಸಾರಾಂಶ್ ಜೈನ್ ವಿಕೆಟ್ ಒಪ್ಪಿಸಿದ ಬಳಿಕ ಬೆಳಿಗ್ಗೆ ಭಾರತ ತಂಡ ಒಂದು ಹಂತದಲ್ಲಿ 307 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಗಾಯದ ಹೊರತಾಗಿಯೂ ಕ್ರೀಸ್‌ಗೆ ಬಂದ ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಜೋಡಿ ಶ್ರೀಲಂಕಾ ಜೋಡಿಯನ್ನು ದೀರ್ಘಾವಧಿ ಕಾಡಿತು. ಈ ಇಬ್ಬರೂ ಮುರಿಯದ ಏಳನೇ ವಿಕೆಟ್‌ಗೆ 152 ಎಸೆತಗಳಲ್ಲಿ 112 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 400ರ ಗಡಿಯನ್ನು ದಾಟಿಸಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ರಿಷಭ್ ಪಂತ್, ಲಂಕಾ ವೇಗಿಗಳ ಶಾರ್ಟ್ ಬಾಲ್ ರಣತಂತ್ರವನ್ನು ಮೆಟ್ಟಿ ನಿಂತರು ಹಾಗೂ ಅರ್ಧಶತಕವನ್ನ ಪೂರ್ಣಗೊಳಿಸಿದರು. ಅವರು ಆಡಿದ 89 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 63 ರನ್‌ಗಳನ್ನು ಕಲೆ ಹಾಕಿದರು. ಬಳಿಕ ವಿಕೆಟ್ ಒಪ್ಪಿಸಿದರು.
Stumps, Day 2: A thoroughly dominant day comes to an end as #TeamIndia take two quick wickets to reduce Sri Lanka to 8-2 after declaring at 503-9. Earlier, Dhruv Jurel registered his 2nd Test ton.
— BCCI (@BCCI) August 24, 2026
Details - https://t.co/r9FgXSdsMf #TeamIndia | #SLvIND pic.twitter.com/hTKl01SJ3X
ಎರಡನೇ ಶತಕ ಬಾರಿಸಿದ ಧ್ರುವ್ ಜುರೆಲ್
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಧ್ರುವ್ ಜುರೆಲ್ ಅವರು, ಶ್ರೀಲಂಕಾ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದರು. ಅವರು ಆಡಿದ 177 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 117 ರನ್‌ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಆ ಮೂಲಕ ಇವರ ಏಳನೇ ಕ್ರಮಾಂಕದಲ್ಲಿ ಭಾರತದ ಪರ ಎರಡನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಇನ್ನೂ ಒಂದು ವಿಕೆಟ್ ಬಾಕಿ ಇರುವಾಗಲೇ ನಾಯಕ ಶುಭಮನ್ ಗಿಲ್ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಂಡರು.
💯 𝙛𝙤𝙧 𝘿𝙝𝙧𝙪𝙫 𝙅𝙪𝙧𝙚𝙡! 🫡
— BCCI (@BCCI) August 24, 2026
A fantastic knock from him to bring up his second hundred in Test cricket! 🙌 🙌
Updates ▶️ https://t.co/r9FgXSdsMf#TeamIndia | #SLvIND pic.twitter.com/D9fYDRpAqG
ಶ್ರೀಲಂಕಾ ಆರಂಭಿಕ ಆಘಾತ
ಭಾರತ ತಂಡ 503 ರನ್‌ಗಳಿಗೆ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೆರ್ ಮಾಡಿಕೊಂಡ ಬಳಿಕ, ಪಂದ್ಯಕ್ಕೆ ಮಳೆ ಕಾಟ ನೀಡಿತು. ಇದರಿಂದ ಶ್ರೀಲಂಕಾ ತಂಡದ ಪ್ರಥಮ ಇನಿಂಗ್ಸ್ ಅನ್ನು ತಡವಾಗಿ ಆರಂಭಿಸಲಾಯಿತು. ಆತಿಥೇಯರ ಪರ ಇನಿಂಗ್ಸ್ ಆರಂಭಿಸಿದ ಲಹಿರು ಉದಾರಾ ಅವರು ಕೇವಲ ಒಂದು ರನ್ ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪ್ರಭತ್ ಜಯಸೂರ್ಯ ಕೇವಲ ಎರಡು ರನ್‌ಗೆ ಮಾನವ್ ಸುತಾರ್‌ಗೆ ಶರಣಾದರು. ಕಮಿಲ್ ಮಿಶಾರಾ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.